ದುಬೈಯಲ್ಲಿ ದಾರುನ್ನೂರ್ ವತಿಯಿಂದ ಅದ್ದೂರಿಯಲ್ಲಿ ನೆರವೇರಿದ ಮೆಹಫೀಲ್ ಏ ಮೀಲಾದುನ್ನಬಿ

ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ಕಲ್ಚರಲ್ ಸೆಂಟರ್ ವತಿಯಿಂದ ದಿನಾಂಕ 22.11.2019 ನೇ ಶುಕ್ರವಾರದಂದು ದುಬೈ ಯಲ್ಲಿರುವ ಏಪಲ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮೆಹಫಿಲ್ ಏ ಮೀಲಾದುನ್ನಬಿ ಮತ್ತು 5 ನೇ ವಾರ್ಷಿಕ ಮಹಾ ಸಮ್ಮೇಳನ ಕಾರ್ಯಕ್ರಮವು ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹನ್ನೊಂದೂವರೆ ಗಂಟೆಯವರೆಗೆ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರ ಅದ್ಯಕ್ಷತೆಯಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ತಾಯ್ನಾಡಿನಿಂದ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯೂ ದಾರುನ್ನೂರ್ ಕೇಂದ್ರ ಸಮಿತಿ ಅದ್ಯಕ್ಷರೂ ಆದ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ , ದಾರುನ್ನೂರ್ ಕೇಂದ್ರ ಸಮಿತಿ ಡೈರೆಕ್ಟರರೂ , ಮಾಜಿ ಎಂ ಎಲ್ ಸಿ ಯೂ , ಮುಸ್ಲಿಂ ಸೆಂಟ್ರಲ್ ಕಮಿಟಿ ಆದ್ಯಕ್ಷರೂ ಆದ ಅಲ್ ಹಾಜ್ ಕೆ ಯಸ್ ಮಹಮ್ಮದ್ ಮಸೂದ್ , ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ರಝಾಕ್ ಹಾಜಿ ಬಿ.ಸಿ ರೋಡ್, ಕೇಂದ್ರ ಸಮಿತಿ ಉಪಾದ್ಯಕ್ಷ ಜನಾಬ್ ಮಹಮ್ಮದ್ ಹನೀಫ್ ಹಾಜಿ ಮಂಗಳೂರು, ಉಪಾದ್ಯಕ್ಷ ಜನಾಬ್ ಸಮದ್ ಹಾಜಿ ಮಂಗಳೂರು , ಸಂಘಟನೆ ಕಾರ್ಯದರ್ಶಿ ಜನಾಬ್ ಫಕೀರಬ್ಬ ಮಾಸ್ಟರ್ ಪ್ಲವರ್ , ಕೇಂದ್ರ ಸಮಿತಿ ಸದಸ್ಯ ಜನಾಬ್ ನೌಶಾದ್ ಹಾಜಿ ಸೂರಲ್ಪಾಡಿ, ಆಸಿಫ್ ತೋಡಾರ್ ಮೊದಲಾದ ಪ್ರಮುಖರು ಆಗಮಿಸಿದ್ದರು.

ಪ್ರಥಮ ಹಂತದಲ್ಲಿ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಯ್ಯದ್ ಅಸ್ಕರ್ ಅಲಿ ತಂಗಳ್ , ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ ಮತ್ತು ಉಸ್ತಾದ್ ಶರೀಫ್ ಅಶ್ರಫಿ ಮೊಡ0ತ್ಯಾರ್ ಮೊದಲಾದವರ ನೇತೃತ್ವದಲ್ಲಿ ಮೌಲೂದು ಪಾರಾಯಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..

ದ್ವಿತೀಯ ಹಂತ ಜುಮ್ಮಾ ನಮಾಝ್ ಮತ್ತು ಭೋಜನದ ವಿರಾಮದ ಬಳಿಕ ಸರಿಯಾಗಿ 2 ಗಂಟೆಗೆ ಸರಿಯಾಗಿ ಮಜ್ಲಿಸುನ್ನೂರ್ ಶಿಬಿರವನ್ನು ಸಯ್ಯದ್ ಅಸ್ಕರ್ ಅಲಿ ತಂಗಳ್ , ಉಸ್ತಾದ್ ಅಬ್ದುಲ್ ಖಾದರ್ ಅಸ್ ಅದಿ , ಉಸ್ತಾದ್ ಇಬ್ರಾಹಿಂ ಫೈಝಿ, ಉಸ್ತಾದ್ ಅಬ್ದುಲ್ ರಝಾಕ್ ಪಾತೂರು ಮೊದಲಾದವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಬಳಿಕ ಪುಟಾಣಿ ಮಕ್ಕಳ ಮತ್ತು ಹಿರಿಯರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಆರಂಭವಾಯಿತು.
ಜನಾಬ್ ಆಶ್ರಫ್ ಪರ್ಲಡ್ಕ , ಜನಾಬ್ ಅಬ್ದುಲ್ ರಝಾಕ್ ಕರೈ, ಜನಾಬ್ ಜಬ್ಬಾರ್ ಕಲ್ಲಡ್ಕ, ಜನಾಬ್ ಸಿದ್ದೀಕ್ ಪಾಣೆಮಂಗಳೂರು ಮೊದಲಾದವರು ಈ ಕಾರ್ಯಕ್ರಮವನ್ನು ನೆರವೇರಿಸಿದರು.

ಸಬ್ ಜೂನಿಯರ್ ವಿಭಾಗದಲ್ಲಿ ಕಿರಾ ಅತ್ , ನೆಬಿ ಮದ್ ಹ್ ಗಾನ , ಪೈಂಟಿಂಗ್ಸ್ ಮೊದಲಾದ ಸ್ಪರ್ಧೆಗೆ ಹಲವು ಪುಟಾಣಿಗಳು ಪಾಲ್ಗೊಂಡಿದ್ದರು. ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಸನ್ಮಾನಿಸಲಾಯಿತು.

ಜೂನಿಯರ್ ನೆಬಿ ಮದ್ ಹ್ ಗಾನ ವಿಬಾಗದಲ್ಲಿ ಮುಹಮ್ಮದ್ ದಾನಿಷ್ ಪ್ರಥಮ ಮತ್ತು ಮುಹಮ್ಮದ್ ದಂಸಾಸ್ ದ್ವಿತೀಯ ಬಹುಮಾನಕ್ಕೆ ಭಾಜನರಾದರು
ಜೂನಿಯರ್ ಭಾಷಣ ಸ್ಪರ್ಧೆಯಲ್ಲಿ ರಯೀಸ್ ಅಬ್ದುಲ್ ರಈಫ್ ಪ್ರಥಮ ಮತ್ತು ಆಹಿಲ್ ಇಬ್ರಾಹಿಂ ದ್ವಿತೀಯ, ಜೂನಿಯರ್ ಕಿರಾ ಅತ್ ಸ್ಪರ್ಧೆಯಲ್ಲಿ ಮುಹಮ್ಮದ್ ದಾನಿಷ್ ಪ್ರಥಮ ಮತ್ತು ಮುಹಮ್ಮದ್ ದಂಸಾಸ್ ದ್ವಿತೀಯ .

ಸೀನಿಯರ್ ನೆಬಿ ಮದ್ ಹ್ ಗಾನ ಸ್ಪರ್ಧೆಯಲ್ಲಿ ಮುಹಮ್ಮದ್ ಅಶ್ರಫ್ ಪ್ರಥಮ ಮತ್ತು ಮುಸ್ತಾಫ ದ್ವಿತೀಯ.
ಸೀನಿಯರ್ ವಿಭಾಗ ಭಾಷಣ ಸ್ಪರ್ಧೆಯಲ್ಲಿ ಉಬೈದ್ ಪ್ರಥಮ ಮತ್ತು ಶಾಫಿ ಕಂದಲ್ ದ್ವಿತೀಯ

ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಸಲ್ಪಟ್ಟ ಸ್ಪರ್ಧೆಯನ್ನು ಮಿಸಸ್ ರವೂಫ್ ಕೈಕಂಬ, ಮಿಸೆಸ್ ಸಾಜಿದ್ ಬಜ್ಪೆ ಮಿಸೆಸ್ ಸಮೀರ್ ಇಬ್ರಾಹಿಂ ಕಲ್ಲರೆ, ಮಿಸೆಸ್ ಸಫಾ ಇಸ್ಮಾಯಿಲ್ ಬಜ್ಪೆ ನಡೆಸಿ ಕೊಟ್ಟರು.

ಸಬ್ ಜೂನಿಯರ್ ವಿಭಾಗ ಪೈಂಟಿಂಗ್ ಸ್ಪರ್ಧೆಯಲ್ಲಿ ಆಯಿಷಾ ಆಮ್ನಾ ಪ್ರಥಮ ಮತ್ತು ಆಯಿಷಾ ಖೌಲ ದ್ವಿತೀಯ ಬಹುಮಾನಕ್ಕೆ ಭಾಜನರಾದರು.
ಜೂನಿಯರ್ ಪೈಂಟಿಂಗ್ ಸ್ಪರ್ಧೆಯಲ್ಲಿ ಆಯಿಷತ್ ನಝಾ ಪ್ರಥಮ ಮತ್ತು ಮಿಷಾ ದ್ವಿತೀಯ
ಸಬ್ ಜೂನಿಯರ್ ಕಿರಾ ಅತ್ ಸ್ಪರ್ಧೆಯಲ್ಲಿ ಆಯಿಷ ಅಮ್ನಾ ಪ್ರಥಮ ಮತ್ತು ನಝಾ ದ್ವಿತೀಯ
ಜೂನಿಯರ್ ಕಿರಾ ಅತ್ ಸ್ಪರ್ಧೆಯಲ್ಲಿ ಶಿರೀನ್ ಪ್ರಥಮ ಮತ್ತು ಝಹ್ರಾ ದ್ವಿತೀಯ

ನೆಬಿ ಮದ್ ಹ್ ಗಾನ ಸ್ಪರ್ಧೆಯಲ್ಲಿ ಫಾತಿಮ ಪ್ರಥಮ ಮತ್ತು ಆಮ್ನಾ ದ್ವಿತೀಯ

ಮಹಿಳೆಯರಿಂದ ಮಹಿಳೆಯರಿಗೆ ಕ್ವಿಝ್ ಸ್ಪರ್ಧೆ ನಡೆಸಿ ಹತ್ತು ವಿಜೇತರಿಗೆ ಸ್ಥಳದಲ್ಲೇ ಬಹುಮಾನ ನೀಡಲಾಯಿತು.
ಮಹಿಳೆಯರ ನಳಪಾಕ (ಕುಕ್ಕರಿ ) ಸ್ಪರ್ಧೆಯಲ್ಲಿ ಮಿಸೆಸ್ ರವೂಫ್ ಕೈಕಂಬ ಪ್ರಥಮ ಸ್ಥಾನ ಪಡೆದರು – ಈ ಬಹುಮಾನವನ್ನು ಜನಾಬ್ ರಹ್ಮಾನ್ ಸಜೀಪರವರು ನೀಡಿ ಸಹಕರಿಸಿದರು. ದ್ವಿತೀಯ ಸ್ಥಾನವನ್ನು ಮಿಸೆಸ್ ಅಸ್ಲಮ್ ಪಡೆದುಕೊಂಡರು. ಈ ಬಹುಮಾನವನ್ನು ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ನೀಡಿ ಸಹಕರಿಸಿದರು.

ಕರಕುಶಲ (ಕ್ರಿಯೇಟಿವ್ ಆರ್ಟ್ಸ್ ) ಸ್ಪರ್ಧೆಯಲ್ಲಿ ಮಿಸೆಸ್ ಶಮ್ ವೂನ್ ಪ್ರಥಮ ಸ್ಥಾನ ಪಡೆದರು. ಈ ಬಹುಮಾನವನ್ನು ಜನಾಬ್ ಸಂಶುದ್ದೀನ್ ಸೂರಲ್ಪಾಡಿ ನೀಡಿ ಸಹಕರಿಸಿದರು.
ದ್ವಿತೀಯ ಸ್ಥಾನವನ್ನು ಮಿಸೆಸ್ ರವೂಫ್ ಕೈಕಂಬ ಪಡೆದುಕೊಂಡರು . ಈ ಬಹುಮಾನವನ್ನು ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ನೀಡಿ ಸಹಕರಿಸಿದರು.

ಕುಕ್ಕರಿ ಮತ್ತು ಕ್ರಿಯೇಟಿವ್ ಆರ್ಟ್ಸ್ ಇದರ ತೀರ್ಪುಗಾರರಾಗಿ ಜನಾಬ್ ಸಂಶುದ್ದೀನ್ ಕಲ್ಕಾರ್, ಜನಾಬ್ ಮಹಮ್ಮದ್ ಮಾಡಾವು, ಜನಾಬ್ ಅಶ್ರಫ್ ಬಾಳೆಹೊನ್ನೂರ್, ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ಸಹಕರಿಸಿದರು.

ತೃತೀಯ ಹಂತದಲ್ಲಿ ಸಫ್ವಾನ್ ಮತ್ತು ತಂಡದಿಂದ ಸುಮಧುರವಾಗಿ ಬುರ್ಧಾ ಆಲಾಪನೆ ನೆಡೆಯಿತು.ಬಳಿಕ ಅಮೀನ್ ವೋಹ್ರಾ ಗುಜರಾತಿ ಮತ್ತು ನಯೀಮ್ ರವರಿಂದ ಸುಂದರವಾದ ನಾಥ್ ಷರೀಫ್ ಆಲಾಪನೆ ಕಾರ್ಯ ನಡೆಯಿತು. ಬಳಿಕ ಆಶ್ರಫ್ ಪರ್ಲಡ್ಕ ನೇತೃತ್ವದಲ್ಲಿ ಪರ್ಲಡ್ಕ ತಂಡದಿಂದ ಅತ್ಯಾಕರ್ಷಕ ಶೈಲಿಯ ದಫ್ ಕಾರ್ಯಕ್ರಮವು ಅತಿಥಿಗಳನ್ನು ಮತ್ತು ಸಭಿಕರನ್ನು ಮೈನವಿರೇಳಿಸುವಂತೆ ಮಾಡಿತು.

ನಾಲ್ಕನೇ ಹಂತದಲ್ಲಿ ಸಭಾ ಕಾರ್ಯಕ್ರಮ ರಾತ್ರಿ ಸರಿಯಾಗಿ 8.30 ಕ್ಕೆ ಸರಿಯಾಗಿ ಆರಂಭವಾಯಿತು. ತಾಯ್ನಾಡಿನಿಂದ ಬಂದ ಅತಿಥಿಗಳಲ್ಲದೆ ಯು ಎ ಇ ಯಲ್ಲಿರುವ ಖ್ಯಾತ ಉದ್ಯಮಿಗಳಾದ ದಾರುನ್ನೂರ್ ಪೋಷಕರು ಮತ್ತು ಸಲಹೆಗಾರರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ದಾರುನ್ನೂರ್ ಯು ಎ ಇ ಅದ್ಯಕ್ಷ ಜನಾಬ್ ಸಂಶುದ್ದೀನ್ ಸೂರಲ್ಪಾಡಿ , ಮುಖ್ಯ ಪ್ರಭಾಷಕರಾದ ಅಲ್ ಹಾಫಿಝ್ ಉಸ್ತಾದ್ ನಿಝಾಮುದ್ದೀನ್ ಅಝ್ ಹರಿ ಅಲ್ ಖಾಸಿಮಿ , ಸ್ಥಳಾವಕಾಶ ಮಾಡಿ ಕೊಟ್ಟ ಸಯ್ಯದ್ ಆಸ್ಕರ್ ಅಲಿ ತಂಗಳ್ ಅದ್ಯಕ್ಷರು ಯಸ್ ಕೆ ಯಸ್ ಯಸ್ ಯಫ್ ಕರ್ನಾಟಕ ದುಬೈ ಮತ್ತು ದಾರುಸ್ಸಲಾಮ್ ಎಜುಕೇಷನ್ ಸೆಂಟರ್ ಬೆಳ್ತಂಗಡಿ- ಯು ಎ ಇ ಸಮಿತಿ,ಜನಾಬ್ ಹಾಜಿ ಅಹ್ಮದ್ ಮತೀನ್ ಚಿಂಲಿ ಮಂಗಳೂರು, ಜನಾಬ್ ಅಬ್ದುಲ್ಲಾ ಹಾಜಿ ಮದುಮೂಲೆ , ಜನಾಬ್ ಬಶೀರ್ ಬಂಟ್ವಾಳ್, ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಜನಾಬ್ ಸಲೀಂ ಅಲ್ತಾಫ್ ಫರಂಗಿಪೇಟೆ, ಜನಾಬ್ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ ಅದ್ಯಕ್ಷರು ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ- ಯುಎಇ ಸಮಿತಿ, ಉಸ್ತಾದ್ ಶೌಕತ್ ಅಲಿ ಹುದವಿ , ಜನಾಬ್ ಸಂಶುದ್ದೀನ್ ಕಲ್ಕಾರ್, ಜನಾಬ್ ಆಶ್ರಫ್ ಖಾನ್ ಮಾಂತೂರು, ಜನಾಬ್ ಆಶ್ರಫ್ ನಾಟೆಕಲ್, ಜನಾಬ್ ಮಹಮ್ಮದ್ ಆಸಿಫ್ ಮಸೂದ್, ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ , ಜನಾಬ್ ಯೂಸುಫ್ ಹಾಜಿ ಬೇರಿಕೆ, ಜನಾಬ್ ಅಬ್ದುಲ್ ಖಾದರ್ ಬೈತಡ್ಕ ಅದ್ಯಕ್ಷರು ಸಂಶುಲ್ ಉಲಮಾ ಅರಬಿಕ್ ಕಾಲೇಜ್ ತೋಡಾರ್ – ಯು ಎ ಇ ಸಮಿತಿ, ಜನಾಬ್ ಷರೀಫ್ ಕಾವು ಅದ್ಯಕ್ಷರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ – ಯು ಎ ಇ ಸಮಿತಿ, ಜನಾಬ್ ಮಹಮ್ಮದ್ ಹಾಜಿ ಮಂಡೆಕೋಲ್ ಮೊದಲಾದವರು ಉಪಸ್ಥಿತರಿದ್ದರು.

ಕುಮ್ಮನಮ್ ಉಸ್ತಾದರಿಂದ ದುಆ ಕಾರ್ಯ ನೆರವೇರಿತು . ಸ್ವಾಗತವನ್ನು ದಾರುನ್ನೂರ್ ಯು ಎ ಇ ಪ್ರಧಾನ ಕಾರ್ಯದರ್ಶಿ ಮತ್ತು ಮೆಹಫಿಲ್ ಏ ಮೀಲಾದ್ ಚೇರ್ಮೇನ್ ಜನಾಬ್ ಬದ್ರುದ್ದೀನ್ ಹೆಂತಾರ್ ರವರು ಮಾಡಿದರು. ಈ ಸಂದರ್ಭ ಯು ಎ ಇ ಯಲ್ಲಿ ದಾರುನ್ನೂರಿನ ಕಳೆದ ಐದು ಸಂವತ್ಸರಗಳ ಕಾರ್ಯ ಸಾಧನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಕಾರ್ಯಕ್ರಮವನ್ನು ಶೈಖುನಾ ತ್ವಾಕಾ ಉಸ್ತಾದರು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಬಳಿಕ ಅತಿಥಿಗಳಾದ ಶೈಖುನ ತ್ವಾಕ ಉಸ್ತಾದ್ , ಉಸ್ತಾದ್ ನಿಝಾಮುದ್ದೀನ್ ಅಝ್ ಹರಿ, ಅಲ್ ಹಾಜ್ ಕೆ ಯಸ್ ಮಹಮ್ಮದ್ ಮಸೂದ್, ಜನಾಬ್ ಹನೀಫ್ ಹಾಜಿ , ಜನಾಬ್ ಅಬ್ದುಲ್ ರಝಾಕ್ ಹಾಜಿ ಬಿ.ಸಿ ರೋಡ್, ಜನಾಬ್ ಸಮದ್ ಹಾಜಿ ಮಂಗಳೂರು ,ಜನಾಬ್ ಫಕೀರಬ್ಬ ಮಾಸ್ಟರ್ ಫ್ಲವರ್ಸ್, ಜನಾಬ್ ಅಹ್ಮದ್ ಮತೀನ್ ಚಿಂಲಿ, ಜನಾಬ್ ಅಬ್ದುಲ್ಲಾ ಹಾಜಿ ಮದುಮೂಲೆ ಮೊದಲಾದವರನ್ನು ದಾರುನ್ನೂರ್ ಯು ಎ ಇ ಕಲ್ಚರಲ್ ಸಮಿತಿ ಪ್ರಮುಖರಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ದಾರುನ್ನೂರ್ ಕೇಂದ್ರ ಸಮಿತಿ ಪ್ರಮುಖರು ಕಳೆದ 5 ವರ್ಷಗಳಿಂದ ಅತ್ಯಂತ ಉತ್ತಮ ಸಾಧನೆಯನ್ನು ಮಾಡಿ ದಾರುನ್ನೂರ್ ವಿದ್ಯಾ ಸಂಸ್ಥೆಯ ಅಭಿವೃದ್ಧಿಯಲ್ಲಿ ಹೆಗಲು ಕೊಟ್ಟು ಸಹಕರಿಸುತ್ತಿರುವ ದಾರುನ್ನೂರ್ ಯು ಎ ಇ ಕಲ್ಚರಲ್ ಸಮಿತಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ದಾರುನ್ನೂರ್ ಯು ಎ ಇ ಸಮಿತಿಯ ಪ್ರಮುಖರಾದ ಜನಾಬ್ ಬದ್ರುದ್ದೀನ್ ಹೆಂತಾರ್ ಮತ್ತು ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆಯವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸಮಿತಿ ಪ್ರಮುಖರಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಬಳಿಕ ಬುರ್ಧಾ ತಂಡ ಮತ್ತು ದಫ್ ತಂಡಕ್ಕೆ ಶೈಖುನಾ ತ್ವಾಕಾ ಉಸ್ತಾದರಿಂದ ಟ್ರೋಫಿ ನೀಡಿ ಸನ್ಮಾನಿಸಲಾಯಿತು. ಬಳಿಕ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.ದಾರುನ್ನೂರ್ ಯು ಎ ಇ ಸಮಿತಿಯು ಕಳೆದ 5 ವರ್ಷಗಳಲ್ಲಿ ಮಾಡಿದ ಕಾರ್ಯ ಚಟುವಟಿಕೆಗಳ ಸವಿನೆನೆಪಿನ ಸಲುವಾಗಿ ಹೊರತರುವ ಸ್ಮರಣ ಸಂಚಿಕೆ “ಯಶಸ್ವಿಯ ಪಯಣ” ಇದರ ಮುಖಪುಟವನ್ನು ಕೇಂದ್ರ ಸಮಿತಿ ಮತ್ತು ಯು ಎ ಇ ಸಮಿತಿ ಪ್ರಮುಖರಿಂದ ಅನಾವರಣ ಮಾಡಲಾಯಿತು. ಬಳಿಕ ದಾರುನ್ನೂರ್ ಕೇಂದ್ರ ಸಮಿತಿ ವತಿಯಿಂದ ಮುದ್ರಿಸಲಾದ 2020 ರ ಡೈರಿಯನ್ನು ವೇದಿಕೆಯಲ್ಲಿದ್ದ ಅತಿಥಿಗಳು ಬಿಡುಗಡೆ ಗೊಳಿಸಿದರು. ನಮಗೆ ಅನ್ನಹಾರ ನೀಡಿ ಸಾಕಿ ಸಲಹುತ್ತಿರುವ ನಮ್ಮ ಎರಡನೇ ತಾಯಿಯಂತಿರುವ ಯು ಎ ಇ ಯ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ದಾರುನ್ನೂರ್ ಯೂತ್ ಟೀಮ್ ವತಿಯಿಂದ ದಿನಾಂಕ 02.12.2019 ನೇ ಸೋಮವಾರದಂದು ನಡೆಸಲಾಗುವ ರಕ್ತದಾನ ಶಿಬಿರದ ಫ್ಲೇಯರನ್ನು ಡಿ ವೈ ಟಿ ಮತ್ತು ವೇದಿಕೆಯಲ್ಲಿದ್ದ ಅತಿಥಿಗಳು ಬಿಡುಗಡೆ ಮಾಡಿದರು. ಬಳಿಕ ಮಸೂದ್ ಸಾಬ್ ರವರು ಕಾರ್ಯಕ್ರಮದ ಸಂಯೋಜನೆಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದರು.
ಕುಮ್ಮನಮ್ ಉಸ್ತಾದರನ್ನು ಮುಖ್ಯ ಪ್ರಭಾಷಣಗೈಯ್ಯಲು ಆಮಂತ್ರಿಸಲಾಯಿತು. ಈ ಮಧ್ಯೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ಮಧ್ಯೆ ಆಗಮಿಸಿದ ಸಭಿಕರಾದ ಸ್ತ್ರೀ ಪುರುಷರಿಗೆ ಆಶ್ಚರ್ಯಕರ ಬಹುಮಾನವನ್ನು ಘೋಷಿಸಲಾಗಿತ್ತು. ಕುಮ್ಮನಮ್ ಉಸ್ತಾದರು ಮಹಿಳೆಯರ ವಿಭಾಗದಿಂದ ಮೊದಲ ಚೀಟಿ ಎತ್ತುವ ಮೂಲಕ ಮಿಸೆಸ್ ಆಸಿಫ್ ಮರೀಲ್ ಅದೃಷ್ಟೆಯಾಗಿ ವಿಮಾನ ಟಿಕೆಟನ್ನು ಪಡೆದುಕೊಂಡರು. ಪುರುಷರ ವಿಭಾಗದಲ್ಲಿ ನಸೀರ್ ದೇರಲಕಟ್ಟೆ ವಿಮಾನ ಟಿಕೆಟ್ ಪಡೆಯುವ ಅದೃಷ್ಟವಂತರಾದರು. ಈ ಎರಡು ಟಿಕೆಟ್ ಗಳನ್ನು ಅಬುಧಾಬಿಯ ಹೆಸರು ಹೇಳಲಿಚ್ಚಿಸದಿರುವ ಸಹೋದರ ದಾನ ರೂಪದಲ್ಲಿ ನೀಡಿ ಸಹಕರಿಸಿದರು.

ಬಳಿಕ ಸ್ತ್ರೀ ಮತ್ತು ಪುರುಷರ ಕಡೆಯ ಹೆಸರುಗಳನ್ನು ಮಿಕ್ಸ್ ಮಾಡಿ ಉಮ್ರಾ ಯಾತ್ರೆಯ ಭಾಗ್ಯವಂತರನ್ನು ಅರಸುವ ಕಾರ್ಯ ಆರಂಭಿಸಲಾಯಿತು. ಉಸ್ತಾದ್ ರವರು ನವಾಝ್ ಬಿ.ಸಿ ರೋಡ್ ರವರ ಹೆಸರನ್ನು ಮಹಾ ಭಾಗ್ಯಶಾಲಿಯಾಗಿ ಘೋಷಿಸಿದರು. ಉಮ್ರಾ ಪ್ಯಾಕೇಜನ್ನು ಜನಾಬ್ ಬಶೀರ್ ಹಾಜಿ ಕಬಕರವರು ನೀಡಿ ಸಹಕರಿಸಿದರು.

ರಾತ್ರಿ 9.45 ನಿಂದ ರಾತ್ರಿ 11.30 ರ ವರೆಗೆ ಕುಮ್ಮನಮ್ ಉಸ್ತಾದರ ಗಂಭೀರ ಮತ ಪ್ರಸಂಗವು ಸಭಿಕರನ್ನು ಮಂತ್ರ ಮುಗ್ಧರನ್ನಾಗಿತು. ಕಾರ್ಯಕ್ರಮದ ಕೊನೆಯಲ್ಲಿ ಮೆಹಫಿಲ್ ಏ ಮೀಲಾದ್ ಕಾರ್ಯದರ್ಶಿ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ವಂದನಾರ್ಪಣೆಗೈದರು.
.ಈ ಸಂದರ್ಭ ಶೈಖುನಾ ತ್ವಾಕಾ ಉಸ್ತಾದರು ಕಾಶಿಪಟ್ಣ ದಾರುನ್ನೂರ್ ಕ್ಯಾಂಪಸ್ ನಲ್ಲಿ ದಿನಾಂಕ 01.12.2019 ನೇ ರವಿವಾರದಂದು ಧಿಕ್ರ್ ಹಲ್ಕಾ ಆದ್ಯಾತ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಎಲ್ಲರಿಗೂ ಆಮಂತ್ರಣವನ್ನು ನೀಡಿದರು.
ಕಾರ್ಯಕ್ರಮ ನಿರೂಪಣೆಯನ್ನು ಯಶಸ್ವಿಯಾಗಿ ಜನಾಬ್ ಬದ್ರುದ್ದೀನ್ ಹೆಂತಾರ್, ಜನಾಬ್ ಅಶ್ರಫ್ ಪರ್ಲಡ್ಕ, ಜನಾಬ್ ನೂರ್ ಮಹಮ್ಮದ್ ನೀರ್ಕಜೆ ನಡೆಸಿಕೊಟ್ಟರು

ಬೆಳಿಗ್ಗೆಯಿಂದ ಆಗಮಿಸಿದ ಬಹುತೇಕ ಮಹಿಳೆಯರು ರಾತ್ರಿ 12 ಗಂಟೆಯವರೆಗೆ ಕಾರ್ಯಕ್ರಮ ವೀಕ್ಷಿಸಿ ಹಿಂತಿರುಗಿದರು
ಜನಾಬ್ ಕೆ.ಪಿ ಹನೀಫ್ ಮತ್ತು ಕೆ.ಪಿ ಸಂಶುದ್ದೀನ್ ಬೆಳಗ್ಗಿನ ಉಪಾಹಾರ ಇಡ್ಲಿ ಸಾಂಬಾರ್ ಮತ್ತು ಸೀರಾ ಹಾಗೂ ರಾತ್ರಿಯ ಪಾಯಸವನ್ನು ಮನೆಯಲ್ಲಿ ತಯಾರಿಸಿ ತಂದು ವಿತರಿಸಿ ಸಹಕರಿಸಿದರು.

ಮದ್ಯಾಹ್ನದ ಭೋಜನ ಮತ್ತು ರಾತ್ರಿಯ ಡಿನ್ನರ್ ವ್ಯವಸ್ಥೆಯನ್ನು ಜನಾಬ್ ನವಾಝ್ ಬಿ ಸಿ ರೋಡ್ ಮತ್ತು ಜನಾಬ್ ಸಿರಾಜ್ ಬಿ.ಸಿ ರೋಡ್ ಮಾಡಿ ಸಹಕರಿಸಿದರು.

ಮಕ್ಕಳ ಡ್ರಾಯಿಂಗ್ ಗೆ ಬೇಕಾದ ಆವಶ್ಯಕ ವಸ್ತುಗಳನ್ನು ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ನೀಡಿ ಸಹಕರಿಸಿದರು.
ಚಹಾ , ಬಿಸ್ಕಿಟ್, ಟಿಶ್ಯೂ ಮೊದಲಾದುವುಗಳನ್ನು ಆಲೋಕೋಝೈ ಚಹಾದ ಪ್ರಾಯೋಜಕತ್ವದಲ್ಲಿ ಜನಾಬ್ ನಾಸಿರ್ ಆರಂತೋಡ್ ನೀಡಿ ಸಹಕರಿಸಿದರು.
ಕುಡಿಯುವ ನೀರಿನ ವ್ಯವಸ್ಥೆಯನ್ನು ಜನಾಬ್ ಸಾಹುಲ್ ಬಿ.ಸಿ ರೋಡ್ ನೀಡಿ ಸಹಕರಿಸಿದರು.
ಅತಿಥಿಗಳಿಗೆ ಬಿಸ್ಟ್ ಮತ್ತು ಶಾಲನ್ನು ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ನೀಡಿ ಸಹಕರಿಸಿದರು.
ಸಮೋಸ ಮತ್ತು ಮಕ್ಕಳಿಗೆ ಚಿಪ್ಸ್ ಮೊದಲಾದುವುಗಳನ್ನು ಜನಾಬ್ ಸಫಾ ಇಸ್ಮಾಯಿಲ್ ರವರು ತಂದು ಸಹಕರಿಸಿದರು.

ಸ್ಕೂಲಲ್ಲಿ ಇರುವ ಕುರ್ಚಿ ಸಾಕಾಗಲಾರದು ಎಂದನಿಸಿದಾಗ ಜನಾಬ್ ಮಹಮ್ಮದ್ ರಫೀಕ್ ಆತೂರು ಮುಖಾಂತರ ಜನಾಬ್ ಅನ್ವರ್ ಅತೂರ್ ರವರು 150 ಹೆಚ್ಚುವರಿ ಕುರ್ಚಿಗಳನ್ನು ನೀಡಿ ಸಹಕರಿಸಿದರು.

ರಿಜಿಸ್ಟ್ರೇಶನ್ ಕೌಂಟರ್ ನ ಜವಾಬ್ಧಾರಿಯನ್ನು ಜನಾಬ್ ಉಸ್ಮಾನ್ ಮರೀಲ್ , ಜನಾಬ್ ಆಶ್ರಫ್ ಬಾಂಬಿಲಾರವರು ವಹಿಸಿಕೊಂಡಿದ್ದರು.
ಛಾಯಾ ಗ್ರಾಹಕರಾಗಿ ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆಯವರು ಸಹಕರಿಸಿದರು.
ಜನಾಬ್ ಸಫಾ ಇಸ್ಮಾಯಿಲ್ ಬಜ್ಪೆ ನೇತೃತ್ವದಲ್ಲಿ ದಾರುನ್ನೂರ್ ಯೂತ್ ಟೀಮ್ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯನ್ನು ಮೈ ಮನ ಮುರಿದು ದುಡಿದು ಸಹಕರಿಸಿತು.

ದಾರುನ್ನೂರ್ ಯು ಎ ಇ ಕೋಶಾಧಿಕಾರಿ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ ,ದುಬೈ ಸ್ಟೇಟ್ ಅದ್ಯಕ್ಷ ಜನಾಬ್ ಮಹಮದ್ ರಫೀಕ್ ಆತೂರು, ಅಬುಧಾಬಿ ಅದ್ಯಕ್ಷ ಜನಾಬ್ ರವೂಫ್ ಹಾಜಿ ಕೈಕಂಬ, ಶಾರ್ಜಾ ಸ್ಟೇಟ್ ಅದ್ಯಕ್ಷ ಜನಾಬ್ ಆಶ್ರಫ್ ಬಾಳೆಹೊನ್ನೂರ್ ಮೊದಲಾದವರು ಎಲ್ಲಾ ವ್ಯವಸ್ಥೆಗಳ ಮೇಲುಸ್ತುವಾರಿಯನ್ನು ನೋಡಿ ಸಹಕರಿಸಿದರು.

ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಜನಾಬ್ ನಾಸಿರ್ ಸುರತ್ಕಲ್ , ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಜನಾಬ್ ಷರೀಫ್ ಕೊಡ್ನೀರ್ , ಜನಾಬ್ ನೂರ್ ಮಹಮ್ಮದ್ ನೀರ್ಕಜೆ, ಜನಾಬ್ ನಾಸಿರ್ ಬಪ್ಪಳಿಗೆ, ಜನಾಬ್ ಇಫ್ತಿಕಾರ್ ಅಡ್ಯಾರ್ ಕಣ್ಣೂರ್,ಜನಾಬ್ ತಾಹಿರ್ ಹೆಂತಾರ್, ಜನಾಬ್ ತಯ್ಯಿಬ್ ಹೆಂತಾರ್, ಜನಾಬ್ ಆಸಿಫ್ ಮರೀಲ್ , ಜನಾಬ್ ಜಾಬಿರ್ ಬೆಟ್ಟಂಪಾಡಿ , ಜನಾಬ್ ರಹ್ಮಾನ್ ಪೆರಾಜೆ, ಜನಾಬ್ ನವಾಝ್ ಮನಲ್, ಜನಾಬ್ ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ, ಜನಾಬ್ ಇಸ್ಮಾಯಿಲ್ ಮುಂಧೀರ್ ತೋಡಾರ್ , ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್, ಜನಾಬ್ ಸಮ್ಶೀರ್ ಬಾಂಬಿಲ, ಜನಾಬ್ ಜಾಬಿರ್ ಬಪ್ಪಳಿಗೆ, ಜನಾಬ್ ರಿಯಾಝ್ ಪಟ್ಟಾಡಿ, ಜನಾಬ್ ಉಸ್ಮಾನ್ ಕೆಮ್ಮಿಂಜೆ , ಜನಾಬ್ ಬಶೀರ್ ಕೆಮ್ಮಿಂಜೆ , ಜನಾಬ್ ಇಂತಿಯಾಝ್ ಕಡಬ, ಜನಾಬ್ ಮುನೀರ್ ಕಾಞ್ಜಂಗಾಡ್, ಜನಾಬ್ ಇಬ್ರಾಹಿಂ ಅಬೂಬಕ್ಕರ್ ಕುಂಡಾಜೆ,ಜನಾಬ್ ರಿಫಾಯಿ ಗೂನಡ್ಕ, ಜನಾಬ್ ಸಂಶುದ್ದೀನ್ ಕುಟ್ಯಾಳ ಮೊದಲಾದವರು ಸಹಕರಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...