ಕೋಝಿಕ್ಕೋಡ್(ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರೀಯ ಪೌರತ್ವ ಮಸೂದೆ ಅನುಷ್ಠಾನಗೊಳಿಸುವುದು ಅಸಂವಿಧಾನಿಕ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಮಸೂದೆಯು ನ್ಯಾಯಾಲಯಕ್ಕೆ ಹೋಗಲಿದೆ. ಈ ಮಸೂದೆ ಮುಸ್ಲಿಂ ಸಮುದಾಯಕ್ಕೆ ತಾರತಮ್ಯವಾಗಿದೆ. ಮಸೂದೆಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿ ಕಾಂತಪುರಂ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದಾಗಿ ಹೇಳಿದರು.
ಪ್ರಧಾನಿ ಈ ವಿಷಯವನ್ನು ಪರಿಶೀಲಿಸಬೇಕು ಮತ್ತು ಮಸೂದೆ ಜಾರಿಗೊಳಿಸುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಎಲ್ಲರೂ ಒಂದಾಗಬೇಕು ಎಂದು ಕಾಂತಪುರಂ ಹೇಳಿದರು.