ಬಾಗಲಕೋಟೆ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಬಾಗಲಕೋಟೆ ಜಿಲ್ಲೆಯ ಪ್ರದೇಶದಲ್ಲಿ ಮದುವೆಯ ದಿನಾಂಕ ನಿಗದಿ ಪಡಿಸಿ ಪೂರ್ವತಯಾರಿ ನಡೆಸುತ್ತಿದ್ದ ವೇಳೆ
ಉಂಟಾದ ಭಾರೀ ಜಲ ಪ್ರವಾಹದಲ್ಲಿ ಮನೆ ಕಳೆದುಕೊಂಡು ಸಮೀಪದ ಉರ್ದು ಶಾಲೆಗಳಲ್ಲಿ ನಿರಾಶ್ರಿತರಾಗಿದ್ದ ಎರಡು ಕುಟುಂಬಗಳ ಹೆಣ್ಮಕ್ಕಳ ವಿವಾಹವನ್ನು ಕೆಸಿಎಫ್ ಒಮಾನ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ವಿವಿಧ ಝೋನ್ ಗಳಾದ ಮಸ್ಕತ್ , ಬೌಶರ್ , ನಿಝ್ವ , ಸೀಬ್ , ಸಲಾಲ , ಸೊಹಾರ್ ಝೋನ್ ಗಳ ಪ್ರಾಯೋಜಕತ್ವದಲ್ಲಿ ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲಾ ವತಿಯಿಂದ ಕಲಾದಗಿ ಶಾದಿ ಮಹಲ್ ನಲ್ಲಿ ನಡೆಯಲಿದೆ.
ಡಿಸೆಂಬರ್ 15 ರವಿವಾರ ಬೆಳಗ್ಗೆ 11 ಗಂಟೆಗೆ ನಿಖಾಹ್ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದ್ದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್ ಕೆ ಯಂ ಶಾಫಿ ಸ ಅದಿ ಬೆಂಗಳೂರು ಹಾಗೂ ಉಪಾಧ್ಯಕ್ಷ ಮೌಲಾನಾ ಅಬೂ ಸುಫಿಯಾನ್ ಮದನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಎಚ್ ಐ ಸುಫಿಯಾನ್ ಸಖಾಫಿ ಕಾವಲ್ಕಟ್ಟೆ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ . ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಜನಾಬ್ ಆರಿಫ್ ಕೊಡಿ,ಕೆಸಿಎಫ್ ಒಮಾನ್ ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಹಾಜಿ ಹಂಝ ಕನ್ನಂಗಾರ್ ,ಕೆಸಿಎಫ್ ಒಮಾನ್ ಪಬ್ಲಿಶಿಂಗ್ ವಿಭಾಗದ ಕಾರ್ಯದರ್ಶಿ ಅಶ್ರಫ್ ಭಾರತ್ ಸುಳ್ಯ, ರಾಜ್ಯ ಎಸ್ಸೆಸ್ಸೆಫ್ ನಾಯಕರಾದ ಮೌಲಾನಾ ಗುಲಾಂ ಹುಸೈನ್ ನೂರಿ ಗಂಗಾವತಿ, ಕೆಯಂ ಮುಸ್ತಫಾ ನಈಮಿ ಹಾವೇರಿ, ನವಾಝ್ ಬೆಂಗಳೂರು, ಅಬ್ದುಲ್ ರವೂಫ್ ಕುಂದಾಪುರ ಹಾಗೂ ಇನ್ನಿತರ ಉಲಮಾ ಉಮರಾ ನಾಯಕರುಗಳ ಭಾಗವಹಿಸಲಿದ್ದಾರೆ ಎಂದು ಕೆಸಿಎಫ್ ಒಮಾನ್ ಮತ್ತು ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲಾ ನಾಯಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.