(ವಿಶ್ವ ಕನ್ನಡಿಗ ನ್ಯೂಸ್) : ಬ್ಲಡ್ ಡೋನರ್ಸ್ ಮಂಗಳೂರು ವುಮೆನ್ಸ್ ವಿಂಗ್ ಹಾಗೂ ಯೇನಪೋಯ ವೈದ್ಯಕೀಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ
ಜಂಟಿ ಸಹಯೋಗದೊಂದಿಗೆ ಮಹಿಳೆಯರಿಗೆ ರಕ್ತದಾನ ಶಿಬಿರ ಹಾಗೂ ಮಹಿಳೆಯರ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮವು ನಾಳೆ 15/12/2019 ರಂದು ಸರಕಾರಿ ಉರ್ದು ಶಾಲೆ ,ಬಂದರ್ ಇಲ್ಲಿ ನಡೆಯಲಿದೆ.
ಮಹಿಳೆಯರಿಂದ ಮಹಿಳೆಯರಿಗಾಗಿ ನಡೆಯುವ ವಿಶೇಷ ಅರ್ಥಪೂರ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಡಿಎಂ ವುಮೆನ್ಸ್ ವಿಂಗ್ ಗೌರವಾಧ್ಯಕ್ಷರಾದ ಶ್ರೀಮತಿ ಆಯಿಷಾ ಯು ಕೆ ಉಳ್ಳಾಲ ವಹಿಸಲಿದ್ದಾರೆ.
ಕಾರ್ಯಕ್ರಮ ಹಾಗೂ ಶಿಬಿರದ ಉದ್ಘಾಟನೆಯನ್ನು ಅನುಗ್ರಹ ಮಹಿಳಾ ಕಾಲೇಜು ಇದರ ಪ್ರಾಂಶುಂಪಾಲರಾದ ಶ್ರೀಮತಿ ಗೀತಾ ಭಟ್ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೌರವ ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಶ್ರೀಮತಿ ಝೀನತ್ ಶಂಶುದ್ದೀನ್ ,ಸಹನಾ ಕೌನ್ಸಿಲಿಂಗ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಶಹನಾಝ್ ಎಂ, ಸಂತ ಅಲೋಷಿಯಸ್ ಕಾಲೇಜು ,ಮಂಗಳೂರು ಇದರ ಉಪನ್ಯಾಸಕರಾದ ಶ್ರೀಮತಿ ಫ್ಲೋರಾ ಕ್ಯಾಸ್ತಲಿನೋ , ಸರಕಾರಿ ಹಿ ಪ್ರಾ ಶಾಲೆ ಬಂದರ್ ಇದರ ಮುಖ್ಯ ಗುರುಗಳಾದ ಶ್ರೀಮತಿ ಬಶೀರಾ ಖಾನುಂ ಹಾಗೂ ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ಸುನಾಲಿನಿ ಭಾಗವಹಿಸಲಿದ್ದಾರೆ.
ಸರ್ವ ಮಹಿಳೆಯರೂ ಈ ಶಿಬಿರದ ಫಲಾನುಭಾವಿಗಳಾಗಿ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬ್ಲಡ್ ಡೋನರ್ಸ್ ಮಂಗಳೂರು ಮಹಿಳಾ ಘಟಕದ ಪದಾಧಿಕಾರಿಗಳು ತಿಳಿಸಿದರು.