(ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕುವೈತ್ ನಾರ್ತ್ ಝೋನ್ ವತಿಯಿಂದ ಶೈಖ್ ಅಬ್ದುಲ್ ಖಾದರ್ ಜೀಲಾನಿ (ಖ) ಅನುಸ್ಮರಣೆ ಮತ್ತು ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾ ಅನುಸ್ಮರಣೆ 13/12/2019 ರಂದು ಮಗ್ರಿಬ್ ನಮಾಝಿನ ಬಳಿಕ ಮುರ್ಗಾಬ್ ನ ನಾಶಾತ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ನೋರ್ತ್ ಝೋನ್ ಅದ್ಯಕ್ಷರಾದ ಜನಾಬ್| ಅಬ್ಬಾಸ್ ಬಳಂಜ ವಹಿಸಿದ್ದರು. ನೋರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ಜನಾಬ್| ಸೌಕತ್ ಅಲಿ ಶಿರ್ವ ಬಂದಂತಹ ಅತಿಥಿ ಗಳಿಗೆ ಹಾಗೂ ಕಾರ್ಯಕರ್ತರಿಗೆ ಸ್ವಾಗತವನ್ನು ಕೋರಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು,ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಬಹುಮಾನ್ಯ ಬಾದುಶಾ ಸಖಾಫಿ ಉಸ್ತಾದರು ಮಾತನಾಡಿ ಶೈಖ್ ಅಬ್ದುಲ್ ಖಾದ್ರಿ ಜೀಲಾನಿ (ಖ) ರವರ ಜೀವನ ಚರಿತ್ರೆ ಯನ್ನು ಎಲ್ಲರ ಮುಂದೆ ಮನ ಮುಟ್ಟುವಂತೆ ವಿವರಿಸಿದರು. ಅದೇ ರೀತಿ ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾ ರವರ ಜೀವನ ಶೈಲಿ ಹೇಗಿತ್ತೆಂಬುದನ್ನು ಸೌತ್ ಝೋನ್ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸಾಹುಲ್ ಹಮೀದ್p ಸಹದಿ ಝುಹುರಿ ಉಸ್ತಾದ್ ರವರು ಸವಿವರ ವಾಗಿ ತಿಳಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಝಕರಿಯಾ ಆನೇಕಲ್ NRC, CAB ಬಗ್ಗೆ ವಿವರಿಸಿದರು.
ಕಾರ್ಯಕ್ರಮಕ್ಕೆ ಶುಭ ಕೋರಿದರು. ಅದೇರೀತಿ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷ ಯಾಕೂಬ್ ಕಾರ್ಕಳ NRC, CAB ನ ಬಗ್ಗೆ ಮಾತ್ನಾಡಿ ತಮ್ಮ ಜವಾಬ್ದಾರಿಗಳನ್ನು ತಮ್ಮ ಮುಂದಿಟ್ಟರು. ಬಹುಮಾನ್ಯ ಸಯ್ಯದ್ ಹಾಮಿದ್ ಅಹದಲ್ ಸಖಾಫಿ ತಂಙಳ್ ರವರು ದುವಾ ನೆರವೇರಿಸಿದರು. ಕೊನೆಯದಾಗಿ ಸಿಟಿ ಸೆಕ್ಟರ್ ಶಿಕ್ಷಣ ವಿಭಾಗದ ಅಧ್ಯಕ್ಷ ಬಸೀರ್ ಸಖಾಫಿ ಕೊಟ್ಟಮುಡಿ ರವರ ನೇತೃತ್ವ ದಲ್ಲಿ ಮೊಯಿದ್ದೀನ್ ಮಾಲಾ ಕೀರ್ತನ ಹಾಡಿ ದುವಾ ದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು ರಾಷ್ಟ್ರೀಯ ಸಮಿತಿಯ ನಾಯಕರು ಸೌತ್ ನೋರ್ತ್ ಝೋನ್ ಪದಾಧಿಕಾರಿಗಳು ಹಾಗೂ ಸೆಕ್ಟರಿನ ಸದಸ್ಯರು ಹಾಜರಿದ್ದು ಕೊನೆಯಲ್ಲಿ ಇಲ್ಯಾಸ್ ಮೊಂಟುಗೋಳಿ ಧನ್ಯವಾದ ಗೈದರು.
ವರದಿ : ಇಬ್ರಾಹಿಂ ವೇಣೂರು ಪ್ರಚಾರ ಹಾಗೂ ಪ್ರಕಾಶನ ವಿಭಾಗ