ಜುಬೈಲ್(ವಿಶ್ವ ಕನ್ನಡಿಗ ನ್ಯೂಸ್): ಜೆ.ಎಫ್ ಎಕ್ಸ್ ಪರ್ಟೈಸ್ ಪ್ರೀಮಿಯರ್ ಲೀಗ್ 2019 ಟ್ರೋಫಿ ಈಸ್ಟರ್ನ್ ಬ್ಲೂ ತನ್ನದಾಗಿಸಿಕೊಂಡಿತು.ಅಲ್ ಫಲಾಹ್ ಮತ್ತು ಬ್ಲೂ ಈಸ್ಟರ್ನ್ ತಂಡದ ನಡುವೆ ನಡೆದ ರೋಚಕ ಅಂತಿಮ ಪಂದ್ಯಾಟದಲ್ಲಿ ಈಸ್ಟರ್ನ್ ಬ್ಲೂ ಅರ್ಹವಾಗಿಯೇ ತನ್ನದಾಗಿಸಿತು.ಟಾಸ್ ಜಯಿಸಿದ ಅಲ್ ಫಲಾಹ್,ನಾಯಕ ನಿಸಾರ್ ಆಟದ ನೆರವಿನಿಂದ ನಿಗದಿತ 8 ಓವರ್ ಗಳಲ್ಲಿ 96 ರನ್ ಕಲೆ ಹಾಕಿತು.96 ರನ್ ಗಳನ್ನು ಬೆನ್ನಟ್ಟಿದ ಈಸ್ಟರ್ನ್ ಬ್ಲೂ ತಂಡ ಆರಂಭಿಕ ಆಟಗಾರ ರಾಜೇಶ್ ಅಮೋಘ 56 ರನ್ನುಗಳ ನೆರವಿನಿಂದ ಗುರಿಯನ್ನು ಇನ್ನೂ ಒಂದು ಬಾಕಿ ಇರುವಂತೆಯೇ ತಲುಪಿ ಪ್ರತಿಷ್ಠಿತ ಕಪ್ ಅನ್ನು ತನ್ನದಾಗಿಸಿತು.
ಎರಡು ವಾರಗಳಲ್ಲಿ ನಡೆದ ಸರಣಿ ಪಂದ್ಯಗಳಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.ಸೆಮಿಫೈನಲ್ ಪಂದ್ಯಾಟ ಅಲ್ ಫಲಾಹ್ ಹಾಗು ಗ್ಲಾಡಿಯೇಟರ್ ನಡುವೆ ಮತ್ತು ಈಸ್ಟರ್ನ್ ಬ್ಲೂ ಹಾಗು ಅಮಾಕೋ ನಡುವೆ ನಡೆದಿತ್ತು.ಜಮೀಯತುಲ್ ಫಲಾಹ್ ಆಯೋಜಿಸಿದ ಈ ಪಂದ್ಯಾವಳಿಯ ಪ್ರಮುಖ ಪ್ರಾಯೋಜಕತ್ವವನ್ನು ಎಕ್ಸ್ ಪರ್ಟೈಸ್ ವಹಿಸಿಕೊಂಡಿತ್ತು.ಸಹ ಪ್ರಾಯೋಜಕರಾಗಿ ಎಸ್.ಆರ್ ಇಂಜಿನಿಯರಿಂಗ್,ಎ.ಕೆ.ಎ ಪವರ್,ಆಂಪ್ಲಿಟ್ಯೂಡ್,ಶಿಫಾ ಮೆಡಿಕಲ್ ಸೆಂಟರ್,ಫಾಸ್ಟೆಕ್ ಕಾಂಟಿಗ್,ಅರೇಬಿಯನ್ ಕ್ಲೌಡ್ಸ್,ಯುನೈಟೆಡ್ ಕಾಂಟ್ರಾಕ್ಟ್,ಗಲ್ಫ್ ಏಷಿಯಾ ಮೆಡಿಕಲ್ ಸೆಂಟರ್,ಸಾಬ್,ಮಂಗಳೂರು ಸೂಪರ್ ಬಜಾರ್ ಜುಬೈಲ್ ನೀಡಿ ಸಹಕರಿಸಿತು.
ಸಮಾರೋಪ ಸಮಾರಂಭವು ಮಾಸ್ಟರ್ ಮಹಮ್ಮದ್ ರಝೀನ್ ರಫೀಕ್ ಕಿರಾತ್ ನೊಂದಿಗೆ ಆರಂಭಗೊಂಡಿತು.ಜಮೀಯತುಲ್ ಫಲಾಹ್ ನ ಜುಬೈಲ್ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ನಾಸಿರ್ ಶೈಖ್ ನೆರದವರನ್ನು ಸ್ವಾಗತಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ತಾಜುದ್ದೀನ್ (ಜನರಲ್ ಮೇನೇಜರ್- ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂ.) ರೊಂದಿಗೆ ಅಲ್ ಫಲಾಹ್ ಸಮೂಹದ ನಿರ್ದೇಶಕರಾದ ಶ್ರೀ ನಝೀರ್ ಹುಸೈನ್,ಎಸ್.ಆರ್ ಇಂಜಿನಿಯರಿಂಗ್ ನ ಶ್ರೀ ಮುನವ್ವರ್,ಜಮೀಯತುಲ್ ಫಲಾಹ್ ಎನ್.ಆರ್.ಸಿಸಿ ಮಾಜಿ ಅಧ್ಯಕ್ಷರೂ,ಜುಬೈಲ್ ಘಟಕದ ಮಾಜಿ ಅಧ್ಯಕ್ಷರೂ ಆದ ಶ್ರೀ ಮಹಮ್ಮದ್ ಫಾರೂಕ್ ಪೋರ್ಟ್ ಫೋಲಿಯೋ,ಜೆ.ಎಫ್ ಉಪಾಧ್ಯಕ್ಷರಾದ ಶ್ರೀ ರಫಿ ಶೈಖ್,ಖಜಾಂಜಿ ಶ್ರೀ ಅಲ್ತಾಫ್,ಕಾರ್ಯಕಾರಿ ಸದಸ್ಯರಾದ ಶ್ರೀ ಇಬ್ರಾಹಿಂ ಖಲೀಲ್, ಶ್ರೀ ಸಿದ್ದೀಕ್ ಬೈಕಂಪಾಡಿ,ಆಂಪ್ಲಿಟ್ಯೂಡ್ ನ ಸಿ.ಇ.ಒ ಶ್ರೀ ಜುನೈದ್,ಶಿಫಾ ಅಲ್ ಜುಬೈಲ್ ಮೆಡಿಕಲ್ ಸೆಂಟರ್ ನ ಶ್ರೀ ಮಹಮ್ಮದ್ ಅಖ್ತರ್ ಆಲಂ,ಅರೇಬಿಯನ್ ಕ್ಲೌಡ್ಸ್ ನ ಸಿ.ಇ.ಒ ಶ್ರೀ ಹಾರೂನ್,ಫಾಸ್ಟೆಕ್ ಕಾಂಟಿಗ್ ನ ಸಿ.ಇ.ಒ ಶ್ರೀ ಮಹಮ್ಮದ್ ಅಶ್ರಫ್,ಎಕ್ಸ್ಪ್ ಪರ್ಟೈಸ್ ಪ್ರತಿನಿಧಿ ಶ್ರೀ ಹಕೀಂ,ಎಚ್.ಎಫ್ ಉಪಾಧ್ಯಕ್ಷರಾದ ಶ್ರೀ ಆಸಿಫ್ ಡೀಲ್ಸ್,ಲಕ್ಕಿ ಸ್ಟಾರ್ ಸಿಇಒ ಶ್ರೀ ಸಮೀರ್,ಬಾಮಾ ಬಜ್ಪೆ ಇದರ ಉಪಾಧ್ಯಕ್ಷರಾದ ಶ್ರೀ ರಶೀದ್ ಎನ್.ಸಿ.ಎಮ್.ಎಸ್, ಐ.ಎಸ್.ಎಫ್ ನ ಜುಬೈಲ್ ಘಟಕಾಧ್ಯಕ್ಷರಾದ ಶ್ರೀ ನಜೀರ್ ತುಂಬೆ ಮೊದಲಾದವರು ಭಾಗವಹಿಸಿದ್ದರು.
ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂ. ಇದರ ನಿರ್ದೇಶಕರಾದ ಶ್ರೀ ಕೆ.ಎಸ್.ಶೈಖ್ ಇವರ ಅನುಪಸ್ಥಿತಿಯಲ್ಲಿ ಶ್ರೀ ತಾಜುದ್ದೀನ್ ರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಜೆ.ಎಫ್ ನ ಕಾರ್ಯಗಳಿಗೆ ಸದಾ ಸಹಕರಿಸುವ ಶಿಫಾ ಅಲ್ ಜುಬೈಲ್ ಮೆಡಿಕಲ್ ಸೆಂಟರ್ ನ ಶ್ರೀ ಮಹಮ್ಮದ್ ಅಖ್ತರ್ ಆಲಂ ಇವರಿಗೂ ಸ್ಮರಣಿಕೆ ನೀಡಿ ಆದರಿಸಲಾಯಿತು.
ಜೆ.ಎಫ್ ಪ್ರಧಾನ ಕಾರ್ಯದರ್ಶಿ ಶ್ರೀ ಸಲೀಂ ಉಡುಪಿ 31 ವರ್ಷಗಳ ಎ.ಎಫ್ ಏಳು ಬೀಳುಗಳ ಸಂಕ್ಷಿಪ್ತ ವೀಡಿಯೋ ಸಂದೇಶ ತೋರಿಸಿಕೊಟ್ಟರು ಮತ್ತು ಯುವಕರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಕರೆ ಕೊಟ್ಟರು. ರಫೀಕ್ ಪರ್ ಫ್ಯೂಮ್ ಪ್ರಾಯೋಜಿತ ರಾಫೆಲ್ ಬಹುಮಾನವನ್ನು 10 ವಿಜೇತರಿಗೆ ನೀಡಲಾಯಿತು.
ಪಂದ್ಯಾವಳಿಯಲ್ಲಿ ಅದ್ಭುತ ಸಾಧನೆ ತೋರಿಸಿದ ಈಸ್ಟರ್ನ್ ಬ್ಲೂ ತಂಡದ ರಾಜೇಶ್ ಸರಣಿ ಶ್ರೇಷ್ಟ ಹಾಗು ಅಂತಿಮ ಹಣಾಹಣಿಯ ಪಂದ್ಯಶ್ರೇಷ್ಟರಾಗಿ ಮೂಡಿ ಬಂದರು.ಅಲ್ ಫಲಾಹ್ ತಂಡದ ಮಿಥುನ್ ದೇವಾಡಿಗ ಉತ್ತಮ ಎಸೆತಗಾರರಾಗಿ ಆಯ್ಕೆಯಾದರೆ,ಅಲ್ ಫಲಾಹ್ ತಂಡದ ನಿಸಾರ್ ಉತ್ತಮ ದಾಂಡಿಗ,ಅಲ್ ಫಲಾಹ್ ನ ಆಝಾದ್ ಉತ್ತಮ ವಿಕೆಟ್ ಕೀಪರ್ ಆಗಿಯೂ,ಸಮದ್ ಸಾಗ್ ಆಕರ್ಷಕ ಆಟಗಾರರಾಗಿ ಆಯ್ಕೆಯಾದರು.ವಿಜೇತರಿಗೆ ಗಿಫ್ಟು ಹ್ಯಾಂಪರುಗಳನ್ನು ಕೂಡ ನೀಡಲಾಯಿತು.
ಸೈಫುಲ್ಲಾ ತೋಡಾರ್ (ಪಂದ್ಯ ನಿರ್ವಹಣೆ),ನಝೀರ್ ಕಲ್ಲೂರು(ಸ್ಕೋರ್ ಪಾನೆಲ್),ಸಫ್ವಾನ್ ಬಜ್ಪೆ(ಕಮೆಂಟರಿ),ಇಬ್ಬಾ ಬಜ್ಪೆ ಹಿನ್ನಲೆ ನಿರ್ವಹಣೆ,ಅಹ್ಮದ್ ಬಾವಾ (ಡಿಜಿಟಲ್ ಸ್ಕೋರ್),ಶರೀಫ್ ಅಲ್ ಫಲಾಹ್ (ಮೈದಾನ ನಿರ್ವಹಣೆ) ಸೇರಿದಂತೆ ಸಹಕರಿಸಿದ ಪ್ರಮುಖ ಹಾಗು ಸಹ ಪ್ರಾಯೋಜಕರು,ಭಾಗವಹಿಸಿದ ತಂಡಗಳಿ,ಪ್ರೇಕ್ಷಕರು,ಅತಿಥಿಗಳಿಗೆ ಧನ್ಯವಾದ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.