ಕುವೈತ್(ವಿಶ್ವಕನ್ನಡಿಗ ನ್ಯೂಸ್): ಪ್ರಜಾಪ್ರಭುತ್ವದ ಮೌಲ್ಯ ಕ್ಕೆ ವಿರುದ್ಧ ವಾಗಿ ಜಾರಿಗೆ ತಂದ ಈ ಮಸೂದೆಯು ಜನರಲ್ಲಿ ಭಯಮೂಡಿಸಿ ಕೇಂದ್ರ ಸರಕಾರದ ಆಡಳಿತ ವೈಫಲ್ಯ ವನ್ನು ಮರೆ ಮಾಚಲು ಕಂಡು ಕೊಂಡ ಮಾರ್ಗ ವಾಗಿದೆ.
ಭಾರತದಲ್ಲೇ ಹುಟ್ಟಿ ಬೆಳೆದು ಭಾರತದ ಅನ್ನ ನೀರು ಸೇವಿಸಿದ ಭಾರತೀಯನಿಗೆ ತನ್ನ ಭಾರತೀಯತೆಯನ್ನು ಸಾಬೀತು ಪಡಿಸ ಬೇಕಾದ ಅಗತ್ಯವಿಲ್ಲ ಇದರ ವಿರುದ್ದ ಕಾನೂನು ರೀತಿಯ ಹೋರಾಟಕ್ಕೆ ಸಮುದಾಯಸಿದ್ಧವಾಗಬೇಕು ಭಾರತದ ಸಂವಿದಾನಕ್ಕೆ ವಿರುದ್ಧವಾಗಿ ಜಾರಿಗೆ ತರುವ ಜನ ವಿರೋಧಿ ಕಾನೂನು ಹಿಂಪಡೆಯಬೇಕು ಎಂದು ನ್ಯಾಯಾಂಗ ವ್ಯವಸ್ಥೆ ಯೊಂದಿಗೆ ಕೆಸಿಎಫ್ ಕುವೈತ್ ಒತ್ತಾಯಿಸುತ್ತಿದೆ, ಎಂದು ಪ್ರಕಟನೆಯಲ್ಲಿ ತಿಳುಸಿದ್ದಾರೆ.