ಮೇನಾಲ(ವಿಶ್ವಕನ್ನಡಿಗ ನ್ಯೂಸ್): ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾಕೂಟ ಡಿಸೆಂಬರ್ 14 ರಂದು ನಡೆಯಿತು.
ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಸಲಹಾ ಸಮಿತಿಯ ಸದಸ್ಯರು ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ *ಶ್ರೀ ರಾಂ ಪಕ್ಕಳ* ರವರು ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಗೊಂಡ ಈ ವಿದ್ಯಾಸಂಸ್ಥೆ ಅತ್ಯುನ್ನತ ಮಟ್ಟಕ್ಕೇರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸರಕಾರಿ ಪ್ರೌಢಶಾಲೆ ಸುರುಳಿಮೂಲೆ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿಪ್ರಕಾಶ್ ಶಟ್ಟಿಯವರು ಮಧುರಾದಲ್ಲಿ ಮಧುರತೆಯಿದೆ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧನೆಯ ಮಾರ್ಗವನ್ನು ಮಧುರಾ ಸ್ಕೂಲ್ ಮಾಡಿಕೊಡುತ್ತಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತೆ ನಿವೃತ್ತ ಮುಖ್ಯ ಶಿಕ್ಷಕಿ ಸರೋಜಿನಿ ಟೀಚರ್,ಲಸಂಸ್ಥೆಯ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ ಸಂದರ್ಭೋಚಿತವಾಗಿ ಮಾತನಾಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.
ಸಂಸ್ಥೆಯ ಸಂಚಾಲಕರಾದ ಕೆ.ಅಬೂಬಕ್ಕರ್ ಹಾಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಕ್ಷರಾದ ಹನೀಫ್ ಮಧುರಾ, ಪ್ರಧಾನ ಕಾರ್ಯದರ್ಶಿ ಮಿಸ್ರಿಯಾ ಮಹಮ್ಮದ್, ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಸಲಹಾ ಸಮಿತಿ ಸದಸ್ಯರಾದ ರಾಮ ಮೇನಾಲ, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಸುಮಿತಾ ಅಜಿತ್, ಸದಸ್ಯರುಗಳಾದ ಝಕರಿಯಾ ಸಖಾಫಿ, ಸೆಕೀನ, ಶೆಫೀನ,
ಆಡಳಿತಾಧಿಕಾರಿ ಮಹಮ್ಮದ್ ಸಾಮು, ಕ್ಯಾಂಪಸ್ ನಿರ್ದೇಶಕರಾದ ಅಬ್ದುಲ್ಲಾ ಮಧುರಾ, ಮುಖ್ಯ ಶಿಕ್ಷಕಿ ಮಮತಾ,
ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ,
ಶಿಕ್ಷಕಿಯರಾದ ಶ್ರೀ ಪ್ರಿಯಾ, ರೇಶ್ಮಾ, . ಅರ್ಚನಾ, ಅಶ್ವಿನಿ,ನಿಶಾನ, ಶಿಕ್ಷಕೇತರ ವೃಂದದವರಾದ ಹನ್ನತ್, ರೋಹಿಣಿ, ಸುಶೀಲ, ರೋಹಿಣಿ, ಇಬ್ರಾಹಿಂ ಬಡಗನ್ನೂರು, ರಿತೀಶ್,ಇಸ್ಮಾಯಿಲ್, ಇಬ್ರಾಹಿಂ, ಉಪಸ್ಥಿತರಿದ್ದರು.
ಪಿಯುಸಿ ವಿಭಾಗದ ಮುಖ್ಯಸ್ಥೆ ರಮ್ಲತ್.ಕೆ, ಸ್ವಾಗತಿಸಿ, ಹನ್ನತ್ ವಂದಿಸಿದರು. ಶಿಕ್ಷಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಉಪನಾಯಕ ಶಾಮಿಲ್ ಮಧುರಾ ಹನೀಫ್ ಕ್ರೀಡಾ ಪ್ರತಿಜ್ಞೆಯನ್ನು ನೆರವೇರಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.