ಒಮಾನ್(ವಿಶ್ವಕನ್ನಡಿಗ ನ್ಯೂಸ್): ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕವಾಗಿದೆ ಕೂಡಲೇ ಕೇಂದ್ರ ಸರಕಾರ ಅದನ್ನು ಹಿಂಪಡೆಯಬೇಕು, ಎಂದು ಕೆಸಿಎಫ್ ಒಮಾನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.
ಇಲ್ಲವಾದರೆ ಅಖಂಡ ಭಾರತದ ರಾಷ್ಟ್ರದ ಸಾರಭೌಮತ ಎತ್ತಿ ಹಿಡಿಯುವ ನಿಟ್ಟಿನಲ್ಲಿ ರಾಷ್ಟ್ರದ ಘನವೆತ್ತ ನ್ಯಾಯಾಂಗವು ಸ್ವಯಂಪ್ರೇರಿತವಾಗಿ ಸರಕಾರದ ಈ ನಡೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಸಂವಿಧಾನವನ್ನು ರಕ್ಷಿಸಲು ಮಧ್ಯಪ್ರವೇಶಿಸಬೇಕೆಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ನಾಯಕರು ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರದ ನಡೆಯು ವಿಭಜನಕಾರಿಯಾಗಿದೆ. ಒಂದು ನಿರ್ದಿಷ್ಟ ಧರ್ಮವನ್ನು ಯಾವುದೇ ಫಲಾನುಭಾವದಿಂದ ಹೊರಗಿಡುವುದು ಅಥವಾ ನಿಗದಿತ ಸಮುದಾಯವನ್ನು ಗುರಿಯಾಗಿಸಿ ಶಾಸನ ರೂಪಿಸುವುದು ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.