ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ಕಾಯ್ದೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೌರತ್ವ ಮಸೂದೆಯಲ್ಲಿ ಬದಲಾವಣೆ ತರುತ್ತೇವೆ, ಹಾಗೂ ಈಶಾನ್ಯದ ಜನರ ಅಗತ್ಯತೆಗಳನ್ನು ಚರ್ಚಿಸಲಾಗುವುದು ಎಂದು ಶಾ ಹೇಳಿದರು.
ಶನಿವಾರ ಈಶಾನ್ಯದಲ್ಲಿ ಪ್ರತಿಭಟನೆಗಳು ಮುಂದುವರೆದಿದ್ದು. ಅಲ್ಲಿಯ ಜನರನ್ನು ರಕ್ಷಸುವುದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಜವಾಬ್ಧಾರಿಯಾಗಿದೆ, ಎಂದು ಶಾ ಹೇಳಿದರು.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾಗಳಲ್ಲಿ ಪೌರತ್ವ ಕಾಯಿದೆ ವಿರುದ್ಧ ವ್ಯಾಪಕ ಆಂದೋಲನಗಳು ನಡೆದವು. ಪ್ರತಿಭಟನೆಯಿಂದ ಐದು ಜನರು ಸಾವನ್ನಪ್ಪಿದ್ದರು.
ತಿದ್ದುಪಡಿ ಜಾರಿಗೆ ಬಂದಾಗಿನಿಂದ ಈಶಾನ್ಯದ ಹಲವು ಭಾಗಗಳಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಜಾಮಿಯಾ ಮಿಲಿಯಾ ಸೇರಿದಂತೆ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿಯೂ ಪ್ರತಿಭಟನೆಗಳು ನಡೆಯುತ್ತಿದ್ದವು. ಭಾರತಕ್ಕೆ ಆಗಮಿಸುವ ವೀದೇಶಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿವೆ. ಪೌರತ್ವ ನೀಡುವಲ್ಲಿ ಧಾರ್ಮಿಕ ತಾರತಮ್ಯದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದವು.
ಬಿಜೆಪಿಗೆ ಮತ ಹಾಕಿದವರು ಕೂಡ ಮತ ಬ್ಯಾಂಕ್ ಬಲಪಡಿಸುವ ಬಯಕೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಕಾನೂನಿನಲ್ಲಿ ಯಾವುದೇ ಬದಲಾವಣೆಗಳಿಲ್ಲ, ಆದರೆ ವಿಷಯಗಳು ತಪ್ಪಾಗುತ್ತವೆ ಎಂದು ತಿಳಿದ ನಂತರ ಸರ್ಕಾರ ಕಾನೂನಿನ ಬಗ್ಗೆ ಪುನರ್ ಪರೀಶೀಲನೆಗೆ ಸಿಧ್ದತೆಗಳು ನಡೆಯುತ್ತಿವೆ.