ಪೌರತ್ವ ತಿದ್ದುಪಡಿ ಮಸೂದೆ ದೇಶದ ಜಾತ್ಯಾತೀತ ಪರಂಪರೆಯ ಮೇಲಿನ ದಾಳಿ – SMA

ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ದೇಶದ ಮುಸ್ಲಿಮರನ್ನು ಮಾತ್ರ ಗುರಿಯಾಗಿರಿಸಿಕೊಂಡು ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಮಸೂದೆಯು ಸ್ಪಷ್ಟವಾದ ಸಂವಿಧಾನದ ಉಲ್ಲಂಘನೆಯಾಗಿದ್ದು ಈ ದೇಶದ ಪವಿತ್ರವಾದ ಜಾತ್ಯಾತೀತ ಪರಂಪರೆಯ ಮೇಲಿನ ದಾಳಿಯಾಗಿದೆ ಎಂದು ಸುನ್ನೀ ಮಾನೇಜ್ಮೆಂಟ್ ಎಸೋಸಿಯೇಶನ್ ಎಸ್ ಎಂ ಎ ಸುಳ್ಯ ರಿಜಿನಲ್ ಆತಂಕ ವ್ಯಕ್ತಪಡಿಸಿದ್ದು, ಪ್ರಸ್ತುತ ಮಸೂದೆಗೆ ಖಂಡನೆ ವ್ಯಕ್ತಪಡಿಸಲಾಯಿತು.

ಇದು ಭಾರತ ದೇಶ ಇಲ್ಲಿ ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು, ಒಂದೇ ನಿಯಮ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಮುಸ್ಲಿಂ ಮಹನೀಯರು ನೆತ್ತರು ಸುರಿಸಿದವರೂ ಜೀವ ತ್ಯಾಗ ಮಾಡಿದವರೂ ಇದ್ದಾರೆ. ಸತ್ಯಾಸತ್ಯತೆ ಹೀಗಿರುವಾಗ ಏಕಾಏಕಿ ಪ್ರಸ್ತುತ ಮಸೂದೆಯನ್ನು ಜಾರಿಗೊಳಿಸಿ, ಈ ದೇಶದ ಸಂವಿಧಾನವನ್ನು ಅತ್ಯಂತ ಆದರದಿಂದ ಸ್ವೀಕರಿಸಿ ಸರ್ವ ಧರ್ಮೀಯರ ಸಹಬಾಳ್ವೆ ಯಿಂದ ಬದುಕುತ್ತಿದ್ದ ಮುಸ್ಲಿಂ ಸಮುದಾಯವನ್ನು ಬೀದಿಗಿಳಿಯುವಂತೆ ಮಾಡಿದ್ದು ಅತ್ಯಂತ ಖೇದಕರವಾಗಿದೆ.ಸಂಭಂದ ಪಟ್ಟವರು ಈ ಬಗ್ಗೆ ಪುನರ್ ಚಿಂತನೆ ಮಾಡಬೇಕಾಗಿ ಒತ್ತಾಯಿಸಲು ನಿರ್ಣಯಿಸಲಾಯಿತು.

ಈ ಸಂಭಂದ ಆಯೋಜಿಸಿದ ಎಸ್ ಎಂ ಎ ಸಭೆಯಲ್ಲಿ ಸಮಿತಿ ಅಧ್ಯಕ್ಷ ಯೂಸುಫ್ ಹಾಜಿ ಅಧ್ಯಕ್ಷತೆ ವಹಿಸಿ, ಸುಳ್ಯ ರೇಂಜ್ ಮದ್ರಸ ಅಧ್ಯಾಪಕ ಒಕ್ಕೂಟ ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಉದ್ಘಾಟಿಸಿದರು. ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ ವಂದಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...