ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಅಖಿಲ ಭಾರತ ಗೃಹರಕ್ಷಕರ ದಿನಾಚರಣೆ

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಚೇರಿ ಮೇರಿಹಿಲ್ ನಲ್ಲಿ  ಜಿಲ್ಲಾ ಕಚೇರಿ ಆವರಣದಲ್ಲಿ 2019 ರ ಅಖಿಲ ಭಾರತ ಗೃಹರಕ್ಷಕರ ದಿನಾಚರಣೆ ನಡೆಯಿತು.

ಮೊದಲಿಗೆ ಕೇಂದ್ರ ವಿಭಾಗದ  ಸಹಾಯಕ ಪೋಲಿಸ್ ಆಯುಕ್ತರಾದ ಜಗದೀಶ್. ಬಿ  ಇವರಿಗೆ ಜಿಲ್ಲಾ ಕಚೇರಿ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ‌ಸುಳ್ಯ ಗೃಹರಕ್ಷಕದಳದ ಘಟಕಾಧಿಕಾರಿ ಜಯಂತ್ ಶೆಟ್ಟಿ ಗೃಹರಕ್ಷಕರಿಗೆ ಪ್ರತಿಜ್ಞಾ ವಿಧಿ ಬೊಧಿಸಿದರು ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಶೆಟ್ಟಿ, ಕೇಂದ್ರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಜಗದೀಶ್. ಬಿ. ,ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್,ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ  ಜಗದೀಶ್ .ಬಿ.ಸಹಾಯಕ ಪೋಲಿಸ್ ಆಯುಕ್ತರು ಕೇಂದ್ರ ವಿಭಾಗ ಮಂಗಳೂರು (ಬಂದರು), ಸಂಚಾರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ಮಂಜುನಾಥ್ ಶೆಟ್ಟಿ  ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ್ ಕತ್ತಲ ಸಾರ್ ಆಗಮಿಸಿದರು.

ಸಹಾಯಕ ಪೋಲಿಸ್ ಆಯುಕ್ತರಾದ ಮಂಜುನಾಥ್ ಶೆಟ್ಟಿ ಸಮಾರಂಭದಲ್ಲಿ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಯಾವುದೇ ಅಪೇಕ್ಷೆ ಪಡೆಯದೆ ದಿನದ 24 ಗಂಟೆಗಳ ಕಾಲ ಪೋಲಿಸರ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಾರೆ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನುಡಿದರು.

ನಂತರ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್ ತುಳು ಬಾಷೆಯಲ್ಲಿ ಭಾಷಣ ಆರಂಭಿಸಿದ ಕತ್ತಲ್ ಸಾರ್ ಇವತ್ತು ಗೃಹರಕ್ಷಕರು ಯಾವುದೇ ಪ್ರತಿಫಲ ಬಯಸದೇ ನಿಷ್ಕಾಮ ಸೇವಾ ನೆಲೆಯಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕರು ನಿಜಕ್ಕೂ ದೇಶ ಸೇವಕರು ಪ್ರಕೃತಿ ವಿಕೋಪ ಸಂಭವಿಸಿದ ಸಂಧರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ದಿನದ 24 ಗಂಟೆಗಳಲ್ಲಿ ಕರ್ತವ್ಯ ನಿರ್ವಹಿಸಿದ  ಗೃಹರಕ್ಷಕರ ಕಾರ್ಯ ನಿಜಕ್ಕೂ ದೇಶ ಸೇವೆಕರು ಪೋಲಿಸರ ಜೊತೆ ಸಂಚಾರ ನಿಯಂತ್ರಣ ಕರ್ತವ್ಯ ಮಾಡುವ ಗೃಹರಕ್ಷಕರು ಅವರ ಆರೋಗ್ಯದ ಕಡೆಗೊ ಸ್ವಲ್ಪ ಗಮನ ಹರಿಸಬೇಕು ಎಂದು ನುಡಿದರು ನಂತರ ಅಧ್ಯಕ್ಷಿಯ ಬಾಷಣ ಮಾಡಿದ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಜಿಲ್ಲಾ ಗೃಹರಕ್ಷಕದಳದ ವಾರ್ಷಿಕ ವರದಿ ಮಂಡಿಸಿದರು.

ಇದೇ ಸಂಧರ್ಭದಲ್ಲಿ ಇತ್ತೀಚೆಗೆ ರಾಷ್ಟಪತಿಗಳ ವಿಶಿಷ್ಟ ಸೇವಾಪದಕ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಡೆಪ್ಯುಟಿ ಕಮಾಡೆಂಟ್ ರಮೇಶ್ ಹಾಗೂ,ಜಿಲ್ಲೆಯ ಹಿರಿಯ ಘಟಕಾಧಿಕಾರಿಗಳಾದ
ಕಡಬ ಗೃಹರಕ್ಷಕದಳದ ಘಟಕಾಧಿಕಾರಿ ಗೊಪಾಲ್,ಸುಬ್ರಹ್ಮಣ್ಯ ಪ್ರಭಾರ ಘಟಕಾಧಿಕಾರಿ ವಸಂತ, ಮೂಡಬಿದ್ರೆ ಘಟಕಾಧಿಕಾರಿ ಪಾಡುರಾಂಜ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ನಿಧಿ.ಜಿ ಮೊದಲಿಗೆ ಪ್ರಾರ್ಥನೆ ಮಾಡಿದರು ಜಿಲ್ಲೆಯ ಡೆಪ್ಯುಟಿ ಕಮಾಡೆಂಟ್ ರಮೇಶ್ ರವರು ಸ್ವಾಗತ ಮಾಡಿದರು ಬೆಳ್ತಂಗಡಿ ಪ್ರಭಾರ ಘಟಕಾಧಿಕಾರಿ ಜಯನಂದ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಚೇರಿ ಸಿಬ್ಬಂದಿ ಸನತ್ ಆಳ್ವ ವಂದಿಸಿದರು ಜಿಲ್ಲೆಯ ಡೆಪ್ಯುಟಿ ಕಮಾಡೆಂಟ್ ರಮೇಶ್,ಕಚೇರಿ ಅಧಿಕ್ಷಕಾರದ ರತ್ನಾಕರ್ ಕಚೇರಿ ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ.ಎಸ್ ಕಚೇರಿ ಸಿಬ್ಬಂದಿ ಸುಖಿತಾ.ಎ.ಶೆಟ್ಟಿ, ಸುಲೋಚನಾ ಹಾಗೂ  ಜಿಲ್ಲೆಯ ಎಲ್ಲಾ ಘಟಕಾಧಿಕಾರಿ, ಪ್ರಭಾರ ಘಟಕಾಧಿಕಾರಿಗಳು, ಗೃಹರಕ್ಷಕರು, ರಕ್ಷಕಿಯರು ಉಪಸ್ಥಿತರಿದ್ದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...