ಬಾಗಲಕೋಟೆ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲಾ ಸಮಿತಿ ವತಿಯಿಂದ ಕೆಸಿಎಫ್ ಒಮಾನ್ ಸಹಕಾರದೊಂದಿಗೆ ಪ್ರವಾಹದಲ್ಲಿ ಮನೆಕಳೆದುಕೊಂಡಿದ್ದ ಹೆಣ್ಮಕ್ಕಳ ವಿವಾಹ ಅದ್ದೂರಿಯಾಗಿ ನಡೆಯಿತು.
ಉತ್ತರ ಕರ್ನಾಟಕದಾದ್ಯಂತ ಜಲಪ್ರವಾಹದಿಂದ ಅಪಾರ ಪ್ರಮಾಣದ ನಾಶನಷ್ಟಗಳು ಸಂಭವಿಸಿದ್ದು ಹಲವು ಕುಟುಂಬಗಳು ನಿರಾಶ್ರಿತವಾದವು. ಈ ವೇಳೆ ಮದುವೆಯ ದಿನಾಂಕ ನಿಗದಿ ಪಡಿಸಿದ್ದ ಎರಡು ಅನಾಥ-ಬಡ ಹೆಣ್ಮಕ್ಕಳ ಮನೆಗಳು ಕುಸಿದು ಬಿದ್ದು ಚಿಂತಾಜನಕ ಸ್ಥಿತಿಯಲ್ಲಿತ್ತು. ಈ ವೇಳೆ ಭೇಟಿ ಕೊಟ್ಟ ಎಸ್ಸೆಸ್ಸೆಫ್ ತಂಡ ಆ ಹೆಣ್ಮಕ್ಕಳ ಮದುವೆ ನಡೆಸಿಕೊಡುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡು ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲೆಯ ವತಿಯಿಂದ ಕೆಸಿಎಫ್ ಒಮಾನ್ ಸಮಿತಿಯ ಸಹಕಾರದೊಂದಿಗೆ ಇಂದು ಕಲಾದಗಿ ಶಾದೀ ಮಹಲ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫೀ ಸಅದಿ ಬೆಂಗಳೂರು, ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಅಬೂ ಸುಫ್ಯಾನ್ ಮದನಿ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ರಾಜ್ಯ ಟೆಂಟ್ ಆಂಡ್ ಡೆಕರೇಷನ್ ಸಮಿತಿ ಅಧ್ಯಕ್ಷ ಮೆಹಬೂಬ್ ಮುಲ್ಲಾ ಗಂಗಾವತಿ, ಕೆಸಿಎಫ್ ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, ಒಮಾನ್ ಇಹ್ಸಾನ್ ಚೇರ್ಮನ್ ಹಂಝ ಕನ್ನಂಗಾರ್, ಎಸ್ಸೆಸ್ಸೆಫ್ ರಾಜ್ಯ ಡೆಪ್ಯುಟಿ ಅಧ್ಯಕ್ಷ ಖಾಝಿ ಗುಲಾಂ ಹುಸೈನ್ ನೂರಿ, ಕಾರ್ಯದರ್ಶಿ ನವಾಝ್ ಬೆಂಗಳೂರು, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಯಾಸೀನ್ ಸಖಾಫಿ ಹರಿಹರ, ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ, ಸಿನಾನ್ ಸಖಾಫಿ, ಉಮರ್ ಸಅದಿ ಚಿಂಚಲಿ, ಅಬ್ದುರ್ರಹ್ಮಾನ್ ಸಖಾಫಿ ಇಂಗಳಹಳ್ಳಿ, ಅಮ್ಜದಿ ಬಾದಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಲ್ ಖಾದಿಸ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ಹಾಗೂ ನಅತೇ ಶರೀಫ್ ನಡೆಯಿತು.