ಸಿಎಎ ಎನ್.ಆರ್.ಸಿ ವಿರುದ್ಧ ಅಡ್ಯಾರ್ ಪ್ರತಿಭಟನೆ ಯಶಸ್ವಿಗೊಳಿಸಲು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಕರೆ

ದುಬೈ(ವಿಶ್ವಕನ್ನಡಿಗ ನ್ಯೂಸ್): ಸಿಎಎ ಮತ್ತು ಎನ್.ಆರ್.ಸಿ ಮೂಲಕ ಭಾರತೀಯರನ್ನು ಧರ್ಮಾಧಾರಿತ ವಿಭಜನೆಗೆ ತಯ್ಯಾರಿಯನ್ನು ನಡೆಸುತ್ತಿರುವ ಕೇಂದ್ರ ಸರ್ಕಾರದ ಕರಾಳ ಕಾನೂನು ವಿರುದ್ಧ ದ.ಕ ಮತ್ತು ಉಡುಪಿ ಸೆಂಟ್ರಲ್ ಕಮಿಟಿ ಹಾಗೂ ಸಮಾನ ಮನಸ್ಕ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜನವರಿ 15 ರಂದು ಅಪರಾಹ್ನ 2 ಗಂಟೆಗೆ ಮಂಗಳೂರಿನ ಅಡ್ಯಾರ್ ಶಾಹ್ ಮೈದಾನದಲ್ಲಿ ನಡೆಯಲಿರುವ ಬ್ರಹತ್ ಪ್ರತಿಭಟನಾ ಸಮಾವೇಶವನ್ನು ಯಶಸ್ವಿಗೊಳಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರಾಷ್ಟ್ರೀಯ ಸಮಿತಿ ಕರೆ ನೀಡಿದೆ.

ಊರಿನಲ್ಲಿರುವ ಎಲ್ಲಾ ಕೆ.ಸಿ.ಎಫ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಐತಿಹಾಸಿಕಗೊಳಿಸಬೇಕೆಂದು ಕಾರ್ಯಕ್ರಮದ ಯಶಸ್ವಿಗೆ ದುಡಿಯಬೇಕೆಂದೂ ಕೆ.ಸಿ ಎಫ್ ಐ.ಎನ್.ಸಿ ಪ್ರಸಿಡೆಂಟ್ ಹಾಜಿ ಶೈಖ್ ಬಾವಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...