SSF ಸುಳ್ಯ ಡಿವಿಷನ್ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಜಿ.ಕೆ.ಇಬ್ರಾಹಿಂ ಅಮ್ಜದಿ,

ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ SSF ಸುಳ್ಯ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆಯು ಬೆಳ್ಳಾರೆ ಸುನ್ನೀ ಸೆಂಟರಿನಲ್ಲಿ ಸಮಿತಿಯ ಅಧ್ಯ ಕ್ಷರಾದ ಜಿ. ಕೆ ಇಬ್ರಾಹಿಂ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ದಾರುಲ್ ಹಿಕ್ಮ ಅಧ್ಯಕ್ಷರಾದ ಹಸನ್ ಸಖಾಫಿ ಬೆಳ್ಳಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರ. ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ವರದಿ ವಾಚಿಸಿ, ಕೋಶಾಧಿಕಾರಿ ಹಸೈನಾರ್ ನೆಕ್ಕಿಲ ಲೆಕ್ಕಪತ್ರ ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು, ಉಪಾಧ್ಯಕ್ಷರುಗಳಾಗಿ ಫೈಝಲ್ ಝುಹ್ರಿ ಕಲ್ಲುಗುಂಡಿ, ಖಲೀಲ್ ಝುಹ್ರಿ ನೆಕ್ಕಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡು, ಜೊತೆ ಕಾರ್ಯದರ್ಶಿಗಳಾಗಿ ಸಫ್ವಾನ್ ಸುಣ್ಣಮೂಲೆ, ರಿಯಾಝ್ ನೆಕ್ಕಿಲ,ಕ್ಯಾಂಪಸ್ ಕಾರ್ಯದರ್ಶಿಯಾಗಿ ಸ್ವಾದಿಖ್ ಕಲ್ಲುಗುಂಡಿ, ಕೋಶಾಧಿಕಾರಿಯಾಗಿ ಹಸೈನಾರ್ ನೆಕ್ಕಿಲ, ಸದಸ್ಯರುಗಳಾಗಿ ಜುನೈದ್ ಸಖಾಫಿ ಜೀರ್ಮುಕ್ಕಿ, ಅಬ್ದುರ್ರಹ್ಮಾನ್ ಸಖಾಫಿ ಟಿ.ಎಂ, ಅಬ್ದುನ್ನಾಸಿರ್ ಬಾ ಹಸನಿ, ಮುನೀರ್ ಹನೀಫಿ, ಕಲಾಂ ಝುಹ್ರಿ, ಸ್ವಬಾಹ್ ಹಿಮಮಿ ಸಖಾಫಿ, ಸಿರಾಜ್ ಸಅದಿ, ಸಿದ್ದೀಖ್ ಗೂನಡ್ಕ, ನೌಶಾದ್ ಕೆರೆಮೂಲೆ, ಶಮೀರ್ ಡಿ. ಎಚ್ ಇವರುಗಳು ಆಯ್ಕೆಯಾದರು.

ವೀಕ್ಷಕರಾಗಿ ದ.ಕ ಈಸ್ಟ್ ಝೋನ್ ಪ್ರ. ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಆಗಮಿಸಿ ಮಹಾಸಭೆಯ ಪ್ರಕ್ರಿಯೆಗಳನ್ನು ನಡೆಸಿದರು. ಜಿಲ್ಲಾ ನಾಯಕರಾದ ತೌಸೀಫ್ ಸಅದಿ ತರಗತಿ ಮಂಡಿಸಿದರು. ಡಿವಿಷನ್ ಉಸ್ತುವಾರಿ ಶಾಹುಲ್ ಹಮೀದ್ ಸಖಾಫಿ ಪಾಣಾಜೆ, ಝೋನ್ ಬ್ಲಡ್ ಸೈಬೋ ಅಮೀರ್ ಇಮ್ರಾನ್ ರೆಂಜಲಾಡಿ, ಡಿವಿಷನ್ ಮಾಜಿ ಪ್ರ.ಕಾರ್ಯದರ್ಶಿ ಸಂಶುದ್ದೀನ್ ಪಳ್ಳಿಮಜಲು ಮುಖ್ಯಾತಿಥಿಗಳಾಗಿದ್ದರು. ಜೊತೆ ಕಾರ್ಯದರ್ಶಿ ಮುನೀರ್ ಹನೀಫಿ ಸ್ವಾಗತಿಸಿ, ನೂತನ ಪ್ರ. ಕಾರ್ಯದರ್ಶಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡು ವಂದಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...