ಆಡಳಿತಗಾರರ ಅಹಂಕಾರ – ದರ್ಪ ಭಾರತದ ಹಿರಿಮೆಯನ್ನು ಕುಗ್ಗಿಸುತ್ತಿದೆ: ಎಸ್ ಬಿ‌ ದಾರಿಮಿ

ಜುಮಾ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ಅಮೇರಿಕದ ಪ್ರಖ್ಯಾತ ಕುಸ್ತಿಪಟು ಮುಹಮ್ಮದಲಿ ಕ್ಲೇ ಎಂಬವರು ಅರವತ್ತೇಳು ಪಂದ್ಯದಲ್ಲಿ ಐವತ್ತೇಳನ್ನು ಜಯಿಸಿದವರು‌. ಮೂವತ್ತೇಳು ಎದುರಾಳಿಗಳನ್ನು ಅನಾಯಾಸವಾಗಿ ಸೋಲಿಸಿದವರು.
ಯಾವತ್ತೂ ಐ ಎಮ್ ದಿ ಗ್ರೇಟಿಸ್ಟ್ ಎನ್ನುತ್ತಿದ್ದವರು.

ಒಂದು ದಿನ ವಿಮಾನ ಯಾತ್ರೆಯಲ್ಲಿ ಸೀಟ್ ಬೆಲ್ಟ್ ಅಳವಡಿಸದೇ ಇದ್ದಾಗ ಅದನ್ನು ಗಮನಕ್ಕೆ ತಂದ ಸಿಬ್ಬಂದಿ ಯೊಂದಿಗೆ ನನಗೆ ಅದರ ಅಗತ್ಯವಿಲ್ಲ.ನಾ‌ನು ಸೂಪರ್ ಮೇನ್ ಎಂದರು.ಆಗ ಕ್ಲೇ ಯವರಲ್ಲಿ ಸಿಬ್ಬಂದಿ ಕೇಳಿದ,ಹಾಗಾದರೆ ನಿಮಗೆ ಈ ವಿಮಾನದ ಅಗತ್ಯವೇ ಇಲ್ಲವಲ್ಲಾ?
ಈ ಪ್ರಶ್ನೆಯೇ ಮುಹಮ್ಮದಲಿಯವರ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು ಎಂಬುದು ಅವರ ಜೀವನ ಚರಿತ್ರೆಯಲ್ಲಿ ಓದ ಬಹುದು.
ಹಾಗೆಯೇ ಖಗೋಳ ಜ್ಞಾನಿ ಜೋತಿಷಿಯೊಬ್ಬ ಮೇಲೆ ನೋಡಿ ಆಕಾಶದ ನಕ್ಷತ್ರಗಳ ಚಲನ ವಲನಗಳ ಸಂಪೂರ್ಣ ವಿವರಗಳನ್ನು ಜನರಿಗೆ ಕಲಿಸುತ್ತಿದ್ದ.

ಒಂದು ದಿನ ಶಿಷ್ಯರೊಂದಿಗೆ ಅರಣ್ಯ ಪ್ರದೇಶಕ್ಕೆ ತೆರಳಿ ತನ್ನ ಅಗಾಧ ಪ್ರಮಾಣದ ಜ್ಞಾನವನ್ನು ಮೇಲೆ ನೋಡಿ ಒಂದೊಂದಾಗಿ ಅವರಿಗೆ ಕಲಿಸುತ್ತಿದ್ದ.
ನೋಡ ನೋಡುತ್ತಿದ್ದಂತೆ ಗುರುವನ್ನು ಕಾಣದಾದ ಶಿಷ್ಯರು ಹುಡುಕ ತೊಡಗಿದರು.
ಕೊನೆಗೆ ಒಂದು‌ ಹಳ್ಳದಿಂದ ನನ್ನನ್ನು ಕಾಪಾಡಿ ಎಂಬ ಶಬ್ದ ಕೇಳಿ ಬಂತು.
ಆ ಶಬ್ದ ಗುರುವಿನದ್ದಾಗಿತ್ತು.
ಎತ್ತರದ ಕಡೆ ಕಣ್ಣಾಯಿಸುವ ಭರದಲ್ಲಿ ಕಾಲ ಬುಡವನ್ನು ಮೆರೆತೇ ಹೋಗಿದ್ದ ಆ ಪಂಡಿತ!

ಇವೆರಡು ಉದಾಹರಣೆಯನ್ನು ಸದ್ಯ ಭಾರತದಲ್ಲಿ ನಡೆಯುವ ವಿದ್ಯಾಮಾನಗಳಿಗೆ ಹೋಲಿಸಿದ್ದು ಮುಲ್ಕಿ ಜುಮಾ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿಯವರು.
ಅವರಿಂದು ಜುಮಾ ನಂತರದ ತನ್ನ ಭಾಷಣದಲ್ಲಿ
ಭಾರತವನ್ನು ಇಡೀ ವಿಶ್ವಕ್ಕೆ ಗುರು ಮಾಡಲು ಹೊರಟು ನಿಂತ ಭಾರತದ ಆಡಳಿತಾಧಿಕಾರಿಗಳನ್ನು ತರಾಟೆಗೆತ್ತಿ ಕೊಂಡು ,ಸದ್ಯ ಭಾರತದಲ್ಲಿ ನಡೆಯುತ್ತಿರುವ ಘಟನೆಗಳನ್ನು ಉಲ್ಲೇಖಿಸುತ್ತಾ ತಮ್ಮ ಕಾಲ ಬುಡದಲ್ಲಿ ಭಾರತದ ಹಿರಿಮೆಗೆ ದಕ್ಕೆ ತರುವಂತಹ ಎಲ್ಲಾ ರೀತಿಯ ವಿದ್ಯಾಮಾನಗಳು ನಡೆಯುತ್ತಿದ್ದರೂ ಅದ್ಯಾವುದನ್ನೂ ಗಣನೆಗೆ ತೆಗೆದು ಕೊಳ್ಳದೇ ಅಹಂಕಾರ ಮತ್ತು ದರ್ಪದ ಮಾತುಗಳನ್ನಾಡಿ ಪ್ರಜೆಗಳ ಅಗತ್ಯಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸದೇ ಅವರನ್ನು ಬೀದಿಗೆ ತಂದು ನಿಲ್ಲಿಸಿ ,ಹಿಂಸೆಗೆ ಪ್ರಚೋದನೆ ನೀಡಿ ಹತ್ತಾರು ಜನರು ಹೆಣವಾಗಿ ಬಿದ್ದರೂ ಆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ತಾವು ನಡೆದದ್ದೇ ದಾರಿ‌ ಎಂಬ ನಿಟ್ಟಿನಲ್ಲಿ ಆಡಳಿತ ನಡೆಸುವುದಾದರೆ ಸದ್ಯೋಭವಿಷ್ಯದಲ್ಲಿ ನಮ್ಮ ದೇಶ ಅರಾಜಕತೆಯನ್ನು ಮತ್ತು ಆಂತರಿಕ ಯುದ್ದವನ್ನು ಎದುರು ನೋಡ ಬೇಕಾದ ಪರಿಸ್ಥಿತಿ ಉಂಟಾಗ ಬಹುದೆಂದು ನೊಂದು ನುಡಿದರು.

ಬಲಿಷ್ಡವಾದ ಒಂದು ಸಮುದಾಯವನ್ನು ಗಣನೆಗೆ ತೆಗೆದು ಕೊಳ್ಳದಿದ್ದರೆ ದೇಶದ ಅಭಿವೃದ್ದಿ ಖಂಡಿತ ಸಾದ್ಯವಾಗದು.
ಎಷ್ಟೇ ಎತ್ತರಕ್ಕೇರಿದರೂ ಹಳ್ಳಕ್ಕೇ ಬೀಳದಂತೆ ನೋಡಿ ಕೊಳ್ಳಬೇಕಾದುದು ನಮ್ಮ ಕರ್ತವ್ಯವಾಗಿದೆ.
ನಾನೇ ದೊಡ್ಡವ,ನಾನು ಮಾಡಿದ್ದೆಲ್ಲಾ ಕಾನೂನು.ಎಲ್ಲವೂ ನಮ್ಮ ಮೂಗಿನ ನೇರ‌ ಇರ ಬೇಕು ಎಂಬ ಅಹಂಕಾರ ಆಡಳಿತ ನಡೆಸುವವರು ಬಿಟ್ಟು ಬಿಡ ಬೇಕು.ಕೆಲವೊಮ್ಮೆ ಬಲಿಷ್ಟ ಶಕ್ತಿಯ ಅದಪತನಕ್ಕೆ ದುರ್ಬಲ ಶಕ್ತಿಯೇ ಕಾರಣವಾದದ್ದಿದೆ.

ಈ ಮುಂದುವರಿದ ಐಟೆಕ್ ಝಮಾನದಲ್ಲೂ ಕಣ್ಣಿಗೆ ಕಾಣದ ದೇವರ ಮತ್ತು‌‌ ಧರ್ಮದ ಹೆಸರಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ಜಗತ್ತಿನಲ್ಲೇ ನಮ್ಮನ್ನು ನಾಚಿ ತಲೆ ತಗ್ಗಿಸುವಂತೆ ಮಾಡಿದೆ.
ಈ ದೇಶದ ಪ್ರಜೆಗಳನ್ನೇ ಅತಂತ್ರರನ್ನಾಗಿಸುವ ಕಾನೂನುಗಳನ್ನು ತಂದು‌ ಅಮಾನವೀಯವಾಗಿ ವರ್ತಿಸುವ ಕೇಂದ್ರದ ಅಧಿಕಾರ ಶಾಹಿಗಳು ದೇಶವನ್ನು ಎತ್ತ ಕಡೆ ಕೊಂಡೊಯ್ಯಲು ಯತ್ನಿಸುತ್ತಾರೆ ಎಂಬುದು ಅರ್ಥ ಆಗ್ತಾ ಇಲ್ಲ ಎಂದ ದಾರಿಮಿಯವರು
ಇದಕ್ಕೆಲ್ಲಾ ನಾಡಿನ ಶಾಂತಿ ಪ್ರಿಯ ನಾಗರಿಕರು ಮುಂದೆ ಬಂದು ಒಂದು ತಾರ್ಕಿಕ ಅಂತ್ಯ ಹಾಡ ಬೇಕಿದೆ ಎಂದರು.

ಇಂದು ಯಾರೂ ತಮ್ಮ ಘನತೆ ಯನ್ನು ಬಿಟ್ಟು ಕೊಡಲು ಸಿದ್ದರಿಲ್ಲ.
ಅದೇ ರೀತಿ ಗುಲಾಮರಾಗಿ ಬದುಕುವ ಮನಸ್ಥಿತಿಯಲ್ಲೂ ಇಲ್ಲ.
ಎಲ್ಲಾ ಸಮುದಾಯವೂ ಅವರವರ ಐಡೆಂಟಿಟಿ ಉಳಿಸಿ ಕೊಂಡು ಬದುಕಲು ಇಚ್ಚೆ ಪಡುತ್ತಾರೆ.
ಜನ ಸಂಖ್ಯೆಯ ಬೆಂಬಲವನ್ನು ಮುಂದಿಟ್ಟು ಇತರರನ್ನು ಹೆದರಿಸುವ ಬೆದರಿಸುವ ಕಾಲ ಎಂದೋ ಕಳೆದು ಹೋಗಿದೆ.

ಯಾರೂ ಕೂಡಾ ಇಂತಿಂತಹ ಜಾತಿ ಧರ್ಮ ದಲ್ಲಿ ಹುಟ್ಟ ಬೇಕೆಂದು ಅರ್ಜಿ ಸಲ್ಲಿಸಿ ಬಂದಿಲ್ಲ.ಅವರವರ ಧರ್ಮದ ಆಚರಣೆಗಳನ್ನು ಇತರರಿಗೆ ತೊಂದರೆ ಆಗದ ರೀತಿಯಲ್ಲಿ ಪಾಲಿಸುವ ಹಕ್ಕು ಎಲ್ಲರಿಗೂ ಇದೆ. ವಾಸ್ತವಿಕತೆ ಹೀಗಿರುವಾಗ ಈ ಹಕ್ಕನ್ನು ಕಸಿದು ಕೊಳ್ಳಲು ಪ್ರಯತ್ನಿಸಿದರೆ ಆಗ ಅದು ಹಿಂಸೆಗೆ ದಾರಿ‌ ಮಾಡಿ ಕೊಟ್ಟಂತೆ ಎಂದು ವ್ಯಾಖ್ಯಾನಿಸಿದ ಖತೀಬರು ದೆಹಲಿಯಲ್ಲಿ ಹಿಂದು ಮುಸ್ಲಿಂ ಸಮುದಾಯದ ಹಲವಾರು ಮುಗ್ದ ಜೀವಗಳ ಬಲಿಯಾಗಿದ್ದು ಇದು ದೇಶದ ಭವಿಷ್ಯವನ್ನೇ ಹಾಳು ಮಾಡುವಂತಹ ಘಟನೆಯಾಗಿದೆ.

ಅಮಾನವೀಯ ಕ್ರೂರ ಕಾನೂನು ತಂದು ಇಂತಹದ್ದಕ್ಕೆ ಆಸ್ಪದ ನೀಡಿದವರೇ ಇದರ ಹೊಣೆ ಹೊರ ಬೇಕಾಗಿದ್ದು ನಿಜವಾಗಿಯೂ ದೇಶದ ಉತ್ತಮ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದ ಈ ಶಕ್ತಿಗಳು ದೇಶ ದ್ರೋಹಿಗಳು ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಈ ಹಿಂದೆ ದೇಶದಲ್ಲಿ ಹಲವು ಗಲಭೆಗಳು ನಡೆದು ಹೋಗಿದೆ.
ಆಗ ಕೇವಲ ಒಂದೇ ಸಮುದಾಯದವರು ಕೊಲ್ಲಲ್ಪಡುತ್ತಿದ್ದರು.ಈಗ ಸ್ಥಿತಿ ಬದಲಾಗಿದೆ.
ಇನ್ನು ಇದೇ ರೀತಿಯಲ್ಲಿ ಕೋಮು ದ್ರುವೀಕರಣ ಮುಂದುವರಿದರೆ ಆತ್ಮ ರಕ್ಷಣೆಗೆ ಎಲ್ಲರೂ ಕಾನೂನು ಕೈಗೆತ್ತಿಕೊಳ್ಳುವ ದುರವಸ್ಥೆ ಉಂಟಾಗ ಬಹುದು.

ನ್ಯಾಯಾಂಗ ಮತ್ತು ಕಾರ್ಯಾಂಗದಲ್ಲಿ ನಂಬಿಕೆ ಕಳೆದು ಹೋದರೆ ಅರಾಜಕತೆಗೆ ವೇಗ ಸಿಗುತ್ತದೆ.
ಈ ನಿಟ್ಟಿನಲ್ಲಿ ದೇಶದ ಅಭಿವೃದ್ದಿ ಬಗ್ಗೆ ನಿರೀಕ್ಷೆ ಇಟ್ಟುಕೊಂಡ ಎಲ್ಲಾ ಸಮುದಾಯದವರೂ ಐಕ್ಯತೆಯಿಂದ ಒಟ್ಟಾಗಿ ಪ್ರಜೆಗಳ ಮದ್ಯೆ ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತುವ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕಟಿಬದ್ದರಾಗ ಬೇಕಿದೆ ಎಂದು ನುಡಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...