ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಇಂದು ಶುಕ್ರವಾರ ಜುಮಾ ನಮಾಝಿನ ಬಳಿಕ ರಾಜ್ಯಾದ್ಯಂತ SSF ವತಿಯಿಂದ ಬೃಹತ್ ಪೋಸ್ಟರ್ ಪ್ರದರ್ಶನ ನಡೆಯಿತು.
ದೆಹಲಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂಸೆಯಿಂದ 38 ಜೀವಗಳು ಬಲಿಪಶುಗಳಾಗಿದ್ದು, 200 ಅಧಿಕ ಜನರಿಗೆ ಗಾಯಗಳಾಗಿದೆ. ಮನೆ, ಮಂದಿರ, ಅಂಗಡಿ ಎಲ್ಲವನ್ನೂ ಅಕ್ರಮಿಗಳು ನಾಶ ಮಾಡಿದ್ದಾರೆ. ಇದರ ವಿರುದ್ದ ಇಂದು ರಾಜ್ಯದ ಐನೂರಕ್ಕೂ SSF ಯುನಿಟ್ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ನೂರಕ್ಕೂ ಮಿಕ್ಕ ಯುನಿಟ್ ಗಳಲ್ಲಿ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಕೊಪ್ಪಳ, ಗಂಗಾವತಿ ಬಾಗಲಕೋಟೆ, ಭಟ್ಕಳ, ಗದಗ, ಬೆಳಗಾವಿ, ರಾಯಚೂರು ಹಾಗೂ ಹಾವೇರಿ ಜಿಲ್ಲೆಯ ವಿವಿಧ ಯುನಿಟ್ ಕೇಂದ್ರಗಳಲ್ಲಿ ಬಿತ್ತಿಪತ್ರ ಪ್ರದರ್ಶನ, ದೆಹಲಿ ಹತ್ಯಾಕಾಂಡ ವಿರೋಧಿಸಿ ಘೋಷಣೆಗಳು, ಭಾಷಣಗಳು ಹಾಗೂ ತಹಶಿಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ನೀಡಿ ಈ ಅಮಾನುಷಿಕ ಕುಕೃತ್ಯವನ್ನು ತೀವ್ರವಾಗಿ ಖಂಡಿಸಲಾಯಿತು.
ದಶಕದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಹಿಂಸಾಚಾರ ಬುಗಿಲೆದ್ದು, 38 ಜೀವಗಳು ಬಲಿಯಾದರೂ ಮೌನ ಮುರಿಯದ ಕೇಂದ್ರಸರ್ಕಾರದ ಮೌನ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕೇಂದ್ರದಲ್ಲಿ ಗೃಹಮಂತ್ರಿಗಳು ಇದ್ದರೂಸಹ ಎರಡು ತುಟಿಗಳನ್ನು ಗಟ್ಟಿಯಾಗಿ ಬಿಗಿದಿಟ್ಟು ಮೌನವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಕೇಂದ್ರ ಸರಕಾರ ಮೌನಮುರಿದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ನೀಡುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ವಿವಿಧ ಕಡೆಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್ಸೆಸ್ಸೆಫ್ ನಾಯಕರುಗಳು ಎಚ್ಚರಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.