ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ದೇಶಾದ್ಯಂತ ಕೊವೀಡ್-19 ನಿಂದಾಗಿ ಲಾಕ್ಡೌನ್ ಆದೇಶ ಜಾರಿಯಲ್ಲಿದ್ದು, ಇಂತಹ ತುರ್ತು ಸಂದರ್ಭದಲ್ಲಿ ಬಡ ಕುಟುಂಬಗಳು ಅಗತ್ಯ ಅಹಾರ-ಸಾಮಗ್ರಿಗಳಿಗೆ ತೊಂದರೆಗೀಡಾಗಿರುವ ಕೊಳ್ನಾಡು ಗ್ರಾಮದ ನೂರಕ್ಕೂ ಮಿಕ್ಕಿದ ಮನೆಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮೊದಲ ಹಂತದ ಅಹಾರ ಕಿಟ್ ವಿತರಣೆಗೆ ಮಾಜಿ ಸಚಿವ ಬಿ ರಮಾನಾಥ ರೈ ಶನಿವಾರ ಚಾಲನೆ ನೀಡಿದರು.
ಅಗತ್ಯ ಅಹಾರ-ಸಾಮಗ್ರಿಗಳ ಅವಶ್ಯಕತೆ ಇರುವ ಮನೆಗಳಿಗೆ ತನ್ನ ಸ್ವಂತ ಖರ್ಚಿನ ಜೊತೆ ಕಾರ್ಯಕರ್ತರೊಂದಿಗೆ ಕೈಜೋಡಿಸಿ ಕೊಳ್ನಾಡು ಗ್ರಾಮದ ಅರ್ಹ ಮನೆಗಳಿಗೆ ಅಹಾರ-ಸಾಮಗ್ರಿಗಳನ್ನು ಒದಗಿಸಲು ಕೊಳ್ನಾಡು ಗ್ರಾಮದ ವಾರ್ಡ್ ನಂ 3 ರಲ್ಲಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು, ಸಮಾಜ ಸೇವಕರಾಗಿರುವ ಜತ್ತಪ್ಪ ಪೂಂಜ ಕೊಡಂಗೆಯವರ ಮನೆಯಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಜಿಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪಂಚಾಯತ್ ಸದಸ್ಯರಾದ ಪವಿತ್ರ ಪೂಂಜ, ವೇದವತಿ ಪರ್ತಿಪ್ಪಾಡಿ, ಲೀನಾ ಡಿ’ಸೋಜ, ವೇದಾವತಿ ಕುದ್ರಿಯ, ದೇವಕಿ, ಪಕ್ಷದ ಪ್ರಮುಖರಾದ ಜತ್ತಪ್ಪ ಪೂಂಜ ಕೊಡುಗೆ, ಪೆಲಿಸ್ ಡಿ’ಸೋಜ, ಸತೀಶ್ ಮೊಂತೆರೋ ಕುದ್ರಿಯ, ಸಂದೀಪ್ ಕೊಡಂಗೆ, ಕರೀಂ ಕರೈ ಹಾಗೂ ಎಚ್.ಎಂ. ಖಾಲಿದ್ ಕೊಳ್ನಾಡು ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.