(www.vknews.com) : ಕೇರಳದ ಕಾಸರಗೋಡಿನ ನಾಗರಿಕರಿಗೆ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಬೇಕೆಂಬ ಯುವ ಕಾಂಗ್ರೆಸ್ ಮುಂದಾಳು ಶ್ರೀ ಮಿಥುನ್ ರೈಯವರ ನಿಲುಮೆಯನ್ನು ಸಿಪಿಐ(ಎಂ) ಆಕ್ಷೇಪಿಸುತ್ತದೆ. ಕೋರೋನಾ ವೈರಸ್ ತಡೆಯುವ ಬಗ್ಗೆ ಲಾಕ್ ಡೌನ್ನ ಒಂದು ಹಂತದಲ್ಲಿ ಈ ರೀತಿಯ ತಡೆ ಸರಿ ಎಂದು ಕೊಂಡರೂ ಅವಶ್ಯಕ ವಸ್ತುಗಳ ಸಾಗಾಟ , ತುರ್ತು ಆರೋಗ್ಯ ಚಿಕಿತ್ಸೆ, ತರಕಾರಿ ಹಣ್ಣು ಹಂಪಲು ಪೋಲೀಸರ ನಿಗಾದಲ್ಲಿ ಸಂಚರಿಸಲು ಅವಕಾಶ ನೀಡುವುದು ಅನಿವಾರ್ಯ.
ನಾವು ಒಕ್ಕೂಟ ವ್ಯವಸ್ಥೆಯ ಸಂವಿಧಾನವನ್ನು ಪಡೆದವರು.ಒಂದು ರಾಜ್ಯ ಮತ್ತು ಇನ್ನೊಂದು ರಾಜ್ಯದೊಂದಿಗೆ ಸೌಹಾರ್ದ ಸಂಬಂಧ ಇರಲೇ ಬೇಕು. ರಾಷ್ಟ್ರೀಯ ಪಕ್ಷದ ಸದಸ್ಯನಾಗಿ ರಾಷ್ಟ್ರೀಯ ಮಟ್ಟದ ಕಣ್ಣೋಟ ಇರಬೇಕಾದ ಮಿಥುನ್ ರವರು ಬಾಲಿಷಃ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಚುನಾವಣಾ ಸಂಧರ್ಬದಲ್ಲಿ ಕೇರಳ ಕಾಸರಗೋಡಿನ ನಾಯಕರು ಜಿಲ್ಲೆಗೆ ಬಂದು ಭಾಷಣ, ಪಾದಯಾತ್ರೆ ಮಾಡಿ ಹೋಗಬಹುದು ಹಾಗೇನೇ ಇಲ್ಲಿಯ ನಾಯಕರು ಅಲ್ಲಿಗೆ ಹೋಗಿ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದು ನೆನಪಿಸಬೇಕು. ಇನ್ನು ನೀವು ಕೇರಳಕ್ಕೆ ಯಾವ ಮುಖವಿಟ್ಟು ಹೋಗುತ್ತೀರಿ ಎಂಬ ಪ್ರಶ್ನೆ ಬರುತ್ತದೆ. ಕೋರೋನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ,ಅನಗತ್ಯ ಒಡಾಟ ಮಾಡುವುದನ್ನು ತಡೆಯುವುದರ ಒಟ್ಟಿಗೆ ಅನಗತ್ಯವಾಗಿ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡಹಲು ಯಾರಿಗೂ ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.