ಮೇ. 3ರ ತನಕ ದೇಶದಲ್ಲಿ ಲಾಕ್​ಡೌನ್ ವಿಸ್ತರಣೆ: ಪ್ರಧಾನಿ ಮೋದಿ​

ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೊನಾ ವೈರಸ್ ನ ಕುರಿತು ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರುನ್ನುದ್ದೇಶಿಸಿ ಮಾತನಾಡಿದರು. ಮೊದಲ ಹಂತದ ಲಾಕ್ ಡೌನ್ ಇಂದು ಮುಕ್ತಾಯವಾಗಲಿದ್ದು, ಈ ವೇಳೆ ಪ್ರಧಾನಿ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಲಾಕ್​ಡೌನ್​ ವಿಸ್ತರಿಸುವಂತೆ ಎಲ್ಲಾ ರಾಜ್ಯಗಳಿಂದ ಒತ್ತಡ ಬರುತ್ತಿದೆ, ಕೊರೊನಾ ವಿರುದ್ಧ ಭಾರತದ ಹೋರಾಟ ಮುಂದುವರಿದಿದೆ,ಎಲ್ಲರೂ ಕಷ್ಟಪಟ್ಟು ದೇಶವನ್ನು ರಕ್ಷಣೆಗೆ ನಿಂತಿದ್ದೀರಿ, ನಿಮಗೆ ಎಷ್ಟು ಸಮಸ್ಯೆಯಾಗಿದೆ ಎಂದು ನನನಗೆ ಗೊತ್ತು.., ಊಟ, ಸಾರಿಗೆ ಮನೆ ಪರಿವಾರದಿಂದ ಅದೆಷ್ಟೋ ಜನರು ದೂರ ಇದ್ದಾರೆ. ನೀವು ದೇಶದ ಸಲುವಾಗಿ ಒಬ್ಬ ಯೋಧನಂತೆ ಕರ್ತವ್ಯ ನಿರ್ವಹಿಸಿದ್ದೀರಿ, ನಮ್ಮ ಸಂವಿಧಾನ ಜನರಿಗಾಗಿ ಎಂಬ ಮಾತು ಇದೇ ಅಲ್ಲವೇ ಎಂದು ಹೇಳಿ ಬಾಬಾ ಸಾಹೇಬ್​ ಡಾ.ಬಿ.ಆರ್​ ಅಂಬೇಡ್ಕರ್​ ಸ್ಮರಿಸಿದ ಮೋದಿ
ಬಾಬಾ ಸಾಹೇಬರಿಗೆ ದೇಶದ ಜನತೆಯ ಪರವಾಗಿ ನಮನ ಸಲ್ಲಿಸಿದರು.

ಅನ್ಯ ದೇಶಗಳ ಹೋಲಿಸಿದರೆ ಭಾರತ ಕೊರೊನಾ ನಿಯಂತ್ರಿಸುವಲ್ಲಿ ಸಫಲವಾಗಿದೆ. ಒಂದು ಕೇಸ್ ಇಲ್ಲದಿದ್ದಾಗಲೇ ಏರ್​ಪೋರ್ಟ್​​ನಲ್ಲಿ ಸ್ಕ್ರೀನಿಂಗ್ ಶುರು ಮಾಡಿದೆವು
100 ಪ್ರಕರಣವಾದಾಗ ವಿದೇಶದಿಂದ ಬಂದವರಿಗೆ 14 ದಿನ ಗೃಹಬಂಧನ ಕಡ್ಡಾಯವಾಗಿತ್ತು. ನಮ್ಮಲ್ಲಿ 550 ಪ್ರಕರಣ ತಲುಪಿದಾಗ 21 ದಿನದ ಲಾಕ್​ಡೌನ್​ ಮಹತ್ವದ ಹೆಜ್ಜೆಯಾಗಿತ್ತು
ಸಮಸ್ಯೆ ಕಂಡಕೂಡಲೇ ನಿರ್ಣಯ ತೆಗೆದುಕೊಂಡು ತಡೆಯುವ ಪ್ರಯತ್ನ ಮಾಡಲಾಯಿತು.

ಎಪ್ರಿಲ್ 20ರ ಬಳಿಕ ಲಾಕ್ ಡೌನ್ ಭಾಗಶಃ ತೆರವುಗೊಳಿಸುವ ಸ್ಥಳಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗುವಂತಿಲ್ಲ. ಈ ಕುರಿತಾಗಿ ವಿಸ್ತೃತ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು. ದೇಶದಲ್ಲಿ ಅವಶ್ಯಕ ಸಾಮಾಗ್ರಿಗಳು ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ. ನಿಮ್ಮ ಕೈಲಾದಷ್ಟು ಬಡ ವರ್ಗದ ಜನರಿಗೆ ಸಹಾಯ ಮಾಡಿ.ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಕುರಿತಾಗಿಯೂ ಗಮನಹರಿಸಿ ಎಂದು ದೇಶದ ಜನರ ಕುರಿತು ಮಾತನಾಡಿದರು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...