ತುಮಕೂರು: ಶ್ರೀಚಂದ್ರಮೌಳೀಶ್ವರ ಸ್ವಾಮಿ ದೇವಾಲಯದ ಅರ್ಚಕ ಕೆ.ವೈ.ಚಂದ್ರಶೇಖರ್ ಅವರ ತಾಯಿ ಜಯಲಕ್ಷ್ಮಮ್ಮ ನಿಧನ

ತುಮಕೂರು(ವಿಶ್ವಕನ್ನಡಿಗ ನ್ಯೂಸ್): ತುಮಕೂರು ನಗರದ ಕ್ಯಾತಸಂದ್ರದ ಸುಪ್ರಸಿದ್ಧ ಶ್ರೀಚಂದ್ರಮೌಳೀಶ್ವರ ಸ್ವಾಮಿ ದೇವಾಲಯದ ಅರ್ಚಕ ಕೆ.ವೈ.ಚಂದ್ರಶೇಖರ್ ಅವರ ತಾಯಿ ಜಯಲಕ್ಷ್ಮಮ್ಮ (85) ಅವರು ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಖ್ಯಾತ ವೈದಿಕ ವಿದ್ವಾಂಸರಾಗಿದ್ದ ದಿವಂಗತ ಯೋಗಾನರಸಿಂಹಶಾಸ್ತ್ರಿಗಳ ಪತ್ನಿಯಾಗಿದ್ದ ಜಯಲಕ್ಷ್ಮಮ್ಮ ಅವರು ಆರು ಜನ ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಬೆಂಗಳೂರಿನಲ್ಲೇ ನೆರವೇರಿತು.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...