(www.vknews.com) : ಕೊರೋನ ವೈರಸ್ ಮಹಾಮಾರಿಯ ತಡೆಗಟ್ಟಲು ಲಾಕ್ಡೌನ್ ಪರಿಣಾಮ ಶಿವಮೊಗ್ಗದ ಆಸ್ಪತ್ರೆಯಲ್ಲಿ ಕೆಲಸಮಾಡುವ ಸ್ಟಾಫ್ ನರ್ಸ್ ಹಾಗೂ ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಿಕೊಳ್ಳುವವರಿಗೆ ನಗರದಲ್ಲಿ ಬೀದಿ ಬದಿಯಲ್ಲಿ ತರಕಾರಿ ಹಣ್ಣು ಹಾಲು ಮಾರುವವರಿಗೆ ಹಾಗೂ ಗಾರೆ ಕೆಲಸ ಮಾಡುವವರಿಗೆ ಮತ್ತು ಆಹಾರಕ್ಕಾಗಿ ಪರದಾಡುವ ನಾಗರಿಕರಿಗೆ ಡಿಕೆ ಶಿವಕುಮಾರ್ ಕ್ಯಾಂಟೀನ್ ವತಿಯಿಂದ ಸತತವಾಗಿ 12 ದಿನ ಉಚಿತವಾಗಿ ಆಹಾರ ಮತ್ತು ನೀರಿನ ಸೇವೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಟಿ ಎನ್ ಶಶಿಧರ್, ಸಮಾಜ ಸೇವಕರಾದ ಸಿದ್ದಪ್ಪ, ಜಿಲ್ಲಾ ಭಾರತೀಯ ಮದ್ದೂರ್ ಕಾಂಗ್ರೆಸ್ನ ಮಹಿಳಾ ಅಧ್ಯಕ್ಷೆ ಕವಿತಾ, ಡಿ.ಕೆ ಶಿವಕುಮಾರ್ ಬ್ರಿಗೇಡ್ ನಾ ಅರ್ಜುನ್, ರಾಘವೇಂದ್ರ, ಉಮೇಶ್ ಮುಂತಾದವರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.