ಅಸೀರ್(ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚೆಗೆ ಸೌದಿ ಅರಬಿಯಾದ ಅಸೀರ್ ಪ್ರಾಂತ್ಯದ ಅಭಾ ಎಂಬಲ್ಲಿ ರವಾದಲ್ ಇಮಾರ ಎಂಬ ಕಂಪೆನಿಯಲ್ಲಿ ದುಡಿಯುತ್ತಿದ್ದ ಕರ್ನಾಟಕದ ತುಮಕೂರಿನವರಾದ ಅಮ್ಜದ್ ಖಾನ್ ಎಂಬವರು ಹಠಾತ್ ಆಗಿ ಹೃದಯಾಘಾತದಿಂದ ಮೃತರಾಗಿದ್ದರು.ಇವರು ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ದುಡಿಯುತ್ತಿದ್ದರು.ಮೃತರಾದ ಅಮ್ಜದ್ ರವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಕಂಪೆನಿಯಲ್ಲಿ ರಾತ್ರಿ ಕೆಲಸ ಮುಗಿಸಿ ತನ್ನ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದವರು ಮರುದಿನ ಬೆಳಿಗ್ಗೆ ಎದ್ದೇಳದೆ ಅಸಹಜವಾಗಿ ಮೃತಪಟ್ಟಿದ್ದರು.ಕೂಡಲೇ ಕಂಪನಿಯವರು ಸ್ಥಳೀಯ ಆಸ್ಪತ್ರೆಗೆ ತಲುಪಿಸಿದ್ದು
ಆದರೆ ಅಲ್ಲಿನ ವೈದ್ಯರ ವರದಿಯಂತೆ ಹೃದಯಘಾತದಿಂದ ಮೃತರಾಗಿದ್ದು ಆಸ್ಪತ್ರೆಗೆ ಬರುವ ಸುಮಾರು 2 ಗಂಟೆಯ ಮೊದಲೇ ಅಂದರೆ ನಿದ್ರೆಯಲ್ಲೇ ಮೃತರಾಗಿರುವುದಾಗಿ ವರದಿ ನೀಡಿದ್ದರು. ಆದರೆ ಸೌದಿಯ ಕಾನೂನು ಪ್ರಕಾರ ಮೃತದೇಹದಲ್ಲಿ ಸ್ವಲ್ಪ ಮಟ್ಟದ ಅನುಮಾನವಿದ್ದಲ್ಲಿ ಸಂಶಯ ಕಂಡು ಬಂದರೆ ತನಿಖೆ ನಡೆಸಿಯೇ ಮೃತ ದೇಹವನ್ನು ಬಿಟ್ಟು ಕೊಡುತ್ತಾರೆ.
ಆ ಪ್ರಕಾರ ಅಭಾ ಪೊಲೀಸ್ ಆಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ನೀಡಿದ ವರದಿಯ ಪ್ರಕಾರ ಇದು ಹೃದಯಾಘಾತದಿಂದ ಸಂಭವಿಸಿದ ಸಹಜ ಮರಣ ಎಂಬುದಾಗಿ ಪೋಲೀಸರು ವರದಿ ನೀಡಿದ ಹಿನ್ನಲೆಯಲ್ಲಿ ಎಲ್ಲಾ ರೀತಿಯ ತನಿಖೆಯು ಮುಗಿದು ನಂತರ ಮೃತದೇಹವನ್ನು ಮ್ರತರ ಕುಟುಂಬಸ್ಥರ ಅನುಮತಿ ಪ್ರಕಾರ ಇಲ್ಲಿಯೇ ದಫನ ನಡೆಸುವುದಾಗಿ ತೀರ್ಮಾನಿಸಲಾಗಿತ್ತು.
ಮೃತದೇಹದ ಪೋಲಿಸ್ ತನಿಖೆ ಹಾಗೂ ದಫನಕಾರ್ಯ,ಭಾರತೀಯ ರಾಯಬಾರಿ ಕಛೇರಿ ಹಾಗೂ ಪೋಲಿಸ್ ಠಾಣೆ ಸೇರಿದಂತೆ ವಿವಿಧ ಕಛೇರಿ ಕೆಲಸಗಳಲ್ಲಿ ಸಂಪೂರ್ಣವಾಗಿ ಹನೀಫ್ ಮಂಜೇಶ್ವರ,ಅಧ್ಯಕ್ಷರು ಇಂಡಿಯನ್ ಸೋಷಿಯಲ್ ಫಾರಂ ಅಭಾ ಕರ್ನಾಟಕ ಘಟಕ ಮತ್ತು ತಂಡ ಸಂಪೂರ್ಣವಾಗಿ ಶ್ರಮಿಸಿದರು.ದಫನ ಪ್ರಕ್ರಿಯೆಯಲ್ಲಿ ಕೋಯಾ ಕೇರಳ,ಇಂಡಿಯನ್ ಸೋಶಿಯಲ್ ಫಾರಂ ISF ಅಭಾ ರೀಝನಲ್ ಕೇಂದ್ರೀಯ ಅಧ್ಯಕ್ಷರು,ಇಂಡಿಯಾ ಫೆಟರ್ನಿಟಿ ಫಾರಂ ಇದರ ಜಿಝಾನ್ ಕರ್ನಾಟಕ ಚಾಪ್ಟರ್ ಕಾರ್ಯದರ್ಶಿಗಳಾದ ಹನೀಫ್ ಜೋಕಟ್ಟೆ ಹಾಗ ಇಂಡಿಯನ್ ಸೋಷಿಯಲ್ ಫಾರಂ ಇದರ ಕಾರ್ಯಕರ್ತರು ಸಾಮಾಜಿಕ ಅಂತರ(social distance) ಕಾಪಾಡುವುದರೊಂದಿಗೆ ಉಪಸ್ಥಿತರಿದ್ದರು.
ಕೋವಿಡ್ 19 ರ ಕಾರಣ ಸೌದಿ ಅರೇಬಿಯಾದಲ್ಲಿ 24 ಗಂಟೆಗಳ ಕಠಿಣ ಲಾಕ್ಡೌನ್ ಇರುವ ಮಧ್ಯೆಯೂ ಇಲ್ಲಿನ ಕಾನೂನಿನ ಪ್ರಕಾರ ಎಲ್ಲಾ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಮೃತದೇಹದ ಅಂತ್ಯಕ್ರಿಯೆ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹನೀಫ್ ಮಂಜೇಶ್ವರವರ ನಿಸ್ವಾರ್ಥ ಕಾರ್ಯ ವೈಖರಿಗೆ ಇಂಡಿಯನ್ ಕಾನ್ಸುಲೇಟ್ ಅಧಿಕಾರಿಗಳು ಹಾಗೂ ಅಭಾ,ಕಮೀಶ್ ವ್ಯಾಪ್ತಿಯ ಅನಿವಾಸಿ ಭಾರತೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಮುಖವಾಗಿ ಮ್ರತ ಅಮ್ಜದ್ ತುಮಕೂರು ಇವರ ಪತ್ನಿ ಹಾಗೂ ಕುಟುಂಭಸ್ಥರು ಹಾಗೂ ತುಮಕೂರಿನ ಜನತೆ ಹನೀಫ್ ಮಂಜೇಶ್ವರ ಹಾಗೂ ಇಂಡಿಯನ್ ಸೋಶಿಯಲ್ ಫೋರಂ ISF ನ ಕಾರ್ಯವೈಖರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ .