ಪುಣ್ಯಗಳ ಮೆಗಾ ಆಫರ್ ಅವಧಿ ಪವಿತ್ರ ರಂಝಾನ್ – ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ

ರಮಝಾನ್ ವಿಶೇಷ(ವಿಶ್ಕನ್ನಡಿಗ ನ್ಯೂಸ್): ವರ್ಷದ ಹನ್ನೆರಡು ತಿಂಗಳುಗಳ ಪೈಕಿ ಪರಮ ಶ್ರೇಷ್ಠವಾದ ತಿಂಗಳು ರಂಝಾನ್. ಈ ತಿಂಗಳ ಸರ್ವ ಆರಾಧನಾ ಕರ್ಮಗಳಿಗೂ ದುಪ್ಪಟ್ಟು ಪ್ರತಿಫಲ ಲಭ್ಯ.ಆರಾಧನಾ ಕರ್ಮಗಳು ಕಡ್ಡಾಯ (ಫರಳ್) ಮತ್ತು ಐಚ್ಛಿಕ (ಸುನ್ನತ್)ಎರಡು ವಿಧಗಳಿದ್ದು, ಫರಳ್ ಅತೀ ಹೆಚ್ಚು ಮಹತ್ವ ವುಳ್ಳದ್ದು. ರಂಝಾನಿನ ಸುನ್ನತ್ ಕರ್ಮಕ್ಕೆ ಕಡ್ಡಾಯ ಕರ್ಮದ ಪ್ರತಿಫಲವೇ ದೊರಕುವುದು. ಮನುಷ್ಯ ಹೃದಯದಲ್ಲಿನ ಅಹಂಭಾವ, ಅಹಂಕಾರ, ದ್ವೇಷ, ಹಗೆತನ, ಅಸೂಯೆ,ದುಶ್ಚಿಂತೆ ಇತ್ಯಾದಿಗಳನ್ನು ಕಿತ್ತೊಗೆದು ಶಾಂತಿ, ಸಹನೆ, ಸ್ನೇಹ, ಪ್ರೀತಿ, ವಿಶ್ವಾಸ, ಭಕ್ತಿ ಇತ್ಯಾದಿ ಸದ್ಗುಣಗಳಿಂದ ಆತ್ಮವನ್ನು ಅಲಂಕರಿಸುವ ರಂಝಾನ್ ಪುಣ್ಯಗಳ ಕೊಯ್ಲುಕಾಲವಾಗಿದೆ.ಪರದೂಷಣೆ,ಪರನಿಂದನೆ,ಪರಿಹಾಸ,ಅಸತ್ಯ,ಅಸಭ್ಯ ಮಾತುಗಳಿಂದ ನಾಲಗೆಯನ್ನು ಹಿಡಿತದಲ್ಲಿಟ್ಟು,ಖುರ್ ಆನ್, ದ್ಸಿಕೃ, ತಸ್ಬೀಹ್, ಸ್ವಲಾತ್ ಉತ್ತಮ ಮಾತುಗಳ ಮೂಲಕ ನಾಲಗೆಯನ್ನು ಕಂಗೊಳಿಸಿ, ಅಕ್ರಮ, ಅನೈತಿಕತೆ,ಅಶ್ಲೀಲತೆ,ಅಧಾರ್ಮಿಕತೆ ಗಳಿಂದ ಶರೀರವನ್ನು ರಕ್ಷಿಸಿ, ಪರೋಪಕಾರ,ಸತ್ಕರ್ಮ,ಉದಾರತೆ,ದಾನ ಧರ್ಮ ಗಳಿಂದ ಸತ್ಪ್ರಜೆ ಯಾಗಿ ಬಾಳಲು ಪ್ರೇರಣೆ ನೀಡುವ ತಿಂಗಳಾಗಿದೆ ರಂಝಾನ್.ಯಾರಾದರೊಬ್ಬ ತನ್ನನ್ನು ಹಿಯಾಳಿಸಿದ್ದಲ್ಲಿ ಅಥವಾ ಅಸಭ್ಯ ಮಾತಿಂದ ನೋವಿಸಿದ್ದಲ್ಲಿ ನಾನು ಉಪವಾಸಿಗನೆಂದು ಹೇಳೆಂಬ ಪ್ರವಾದಿ ವಚನ ರಂಝಾನಿನ ಸೂಕ್ಷ್ಮತೆಯ ಸಂಕೇತವಾಗಿದೆ.ಉಪವಾಸ ಅಲ್ಲಾಹನ ಸಂಪ್ರೀತಿ ಗಳಿಸುವ ಬಹು ಮುಖ್ಯ ಆರಾಧನೆ.ವೃತವು ಆರೋಗ್ಯಕ್ಕೆ ಉತ್ತಮ ದಾರಿ.
ಕೋವಿಡ್ 19 ಮಹಾಮಾರಿ ಜನ ಬದುಕನ್ನು ತಾಳತಪ್ಪಿಸಿದೆ. ಮುಂಜಾಗ್ರತೆಗಾಗಿ ಸರಕಾರ ಲಾಕ್ ಡೌನ್ ಘೋಷಿಸಿ,ಬಹಳಷ್ಟು ದಿನಗಳಾದವು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಅದರ ಪಾಲನೆ ನಮ್ಮ ಪಾಲಿನ ಕಡ್ಡಾಯ. ಈಗಾಗಲೇ ಸರ್ವಧರ್ಮದವರೂ ತಮ್ಮ ಆರಾಧನಾಲಯಗಳಿಂದ ಹೊರಬಂದು ಮನೆಯನ್ನೇ ಆರಾಧನಾ ಕೇಂದ್ರವಾಗಿ ಸಧ್ಯಕ್ಕೆ ಒಪ್ಪಿಕೊಂಡಿದ್ದಾರೆ.ಮುಸ್ಲಿಂ ಜಗತ್ತು ರಂಝಾನ್ ತಿಂಗಳಲ್ಲಿ ಆರಾಧನಾ ಕರ್ಮಗಳಿಗೆ ಅತೀ ಹೆಚ್ಚು ಮಸೀದಿಯನ್ನು ಅವಲಂಬಿಸುವುದು ರೂಡಿ.ಇಹ್ತಿಕಾಫೆಂಬ ಪುಣ್ಯ ಆರಾಧನೆಗಾಗಿ ಮಸೀದಿ ಪ್ರವೇಶ ಅನಿವಾರ್ಯವಾದರೂ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅದನ್ನು ಕೈ ಬಿಟ್ಟು ಸರಕಾರದ ಮತ್ತು ಧಾರ್ಮಿಕ ವಿದ್ವಾಂಸರ ಆದೇಶ ಪಾಲಿಸಿ ಮನೆಯಲ್ಲೇ ಆರಾಧನಾ ಕರ್ಮಗಳಲ್ಲಿ ತಲ್ಲೀನರಾಗಿರುತ್ತಾರೆ.ಖಂಡಿತವಾಗಿಯೂ ಕೊರೋಣವನ್ನು ನಿರ್ಮೂಲನೆ ಮಾಡಲೇ ಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಸರಕಾರದ,ಸಂಬಂಧಪಟ್ಟ ಇಲಾಖೆಯ,ವಿದ್ವಾಂಸರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸೋಣ.ದೇಶದ ಒಳಿತಿಗಾಗಿ,ಆರೋಗ್ಯ ರಕ್ಷಣೆಗಾಗಿ ದುಡಿಯುವವರಿಗೂ,ಪ್ರಸ್ತುತ ಆಪತ್ಕಾಲದಲ್ಲಿ ನೆರವಾಗುವವರಿಗೂ
ಪ್ರಾರ್ಥಿಸೋಣ.ಸರ್ವರಿಗೂ ಒಳಿತಾಗಲಿ….

*ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ*
ಉಪಾಧ್ಯಕ್ಷರು SJM ಸುಳ್ಯ ರೇಂಜ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...