ಯುಎಇ ಯಲ್ಲಿ 536 ಹೊಸ ಕೊರೊನಾವೈರಸ್‌ ಪ್ರಕರಣಗಳು ಪತ್ತೆ : ಒಟ್ಟು ಸೋಂಕಿತರ ಸಂಖ್ಯೆ 10,349ಕ್ಕೆ ಏರಿಕೆ

ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಯಲ್ಲಿ ಇಂದು ಭಾನುವಾರ 536 ಹೊಸ ಕೊರೊನಾವೈರಸ್‌ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,349ಕ್ಕೆ ಏರಿಕೆಯಾಗಿದೆ.

ಇಂದು 91 ರೋಗಿಗಳು ರೋಗಮುಕ್ತರಾಗಿದ್ದು, ಇದರೊಂದಿಗೆ ರೋಗಮುಕ್ತರಾದವರ ಒಟ್ಟು ಸಂಖ್ಯೆ 1,978 ಆಗಿದೆ. ಇಂದು ಐದು ಮಂದಿ ಸೋಕಿನಿಂದ ಮರಣಹೊಂದಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 76ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...