ಮುದ್ದೇಬಿಹಾಳ:ಕಾರ್ಯನಿರತ ಪತ್ರಕರ್ತರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಬಸವೇಶ್ವರ ವೃತ್ತದತ್ತ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.
ಮುದ್ದೇಬಿಹಾಳ (www.vknews.com) : ಮಂಡ್ಯದಲ್ಲಿ ಕೋವಿಡ್ 19 ವೈರಸ್ ಸೋಂಕು ತಪಾಸಣೆಗೋಸ್ಕರ ಜಿಲ್ಲಾಡಳಿತದ ಸೂಚನೆ ಮೇರೆಗೆ ತೆರಳಿದ್ದ ಪತ್ರಕರ್ತರ ಮೇಲೆ ಅಲ್ಲಿನ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಮತ್ತು ಅವರ ಮಗ ಕೃಷಿಕ್ ಗೌಡ ಅಸಭ್ಯವಾಗಿ ನಡೆದುಕೊಂಡು ಹಲ್ಲೆ ಮಾಡಿದ ಘಟನೆಯನ್ನು ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸದಸ್ಯರೆಲ್ಲ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿವಾರ ಮೌನವಾಗಿ ಖಂಡಿಸಲಾಯಿತು.
ಈ ವೇಳೆ ಘಟನೆ ಖಂಡಿಸಿ ಸಂಘದ ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ವಡವಡಗಿ, ತಾಲೂಕು ಅಧ್ಯಕ್ಷ ಅಮೀನಸಾ ಮುಲ್ಲಾ ಮಾತನಾಡಿ ಶಾಸಕ ಮತ್ತವರ ಪುತ್ರನ ವಿರುದ್ದ ಕೋವಿಡ್ ಸುಗ್ರಿವಾಜ್ಞೆ ಪ್ರಕಾರ ಕಠಿಣ ಕ್ರಮ ಕೈಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಗುರುನಾಥ ಕತ್ತಿ, ಪ್ರಧಾನ ಕಾರ್ಯದರ್ಶಿ ಸಿದ್ದು ಚಲವಾದಿ, ಖಜಾಂಚಿ ಪರಶುರಾಮ ಕೊಣ್ಣೂರ, ಕಾರ್ಯದರ್ಶಿಗಳಾದ ಲಾಡ್ಲೇಮಶ್ಯಾಕ ನದಾಫ, ಸಾಗರ ಉಕ್ಕಲಿ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಮುತ್ತು ವಡವಡಗಿ, ಶಿವಕುಮಾರ ಶಾರದಳ್ಳಿ, ಉಮರಶರೀಫ ಹಾಲ್ಯಾಳ, ರಾಮು ತಂಬೂರಿ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಎಲ್ಲ ಪತ್ರಕರ್ತರು ಮೌನವಾಗಿ ಕಾಲ್ನಡಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.