ಮುಂಬೈ(www.vknews.in): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಮೇಲ್ಮನೆಗೆ ನೇಮಕ ಮಾಡುವಂತೆ ಮಹಾರಾಷ್ಟ್ರ ಸಚಿವ ಸಂಪುಟವು ಶಿಫಾರಸ್ಸು ಮಾಡಿ 15 ದಿನಗಳು ಕಳೆದರೂ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರು ಯಾವುದೇ ತೀರ್ಮಾನ ಕೈಗೊಳ್ಳದೇ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಉದ್ಧವ್ ಠಾಕ್ರೆಯವರ ಭವಿಷ್ಯವು ತೂಗುಯ್ಯಾಲೆಯಲ್ಲಿದೆ.
ರಾಜ್ಯಪಾಲರ ವಿಳಂಬ ನೀತಿಯ ಕುರಿತು ಪ್ರಧಾನಿ ಮೋದಿಗೆ ದೂರವಾಣಿ ಮೂಲಕ ದೂರು ನೀಡಿದ ಉದ್ಧವ್ ಠಾಕ್ರೆ, ಈ ವಿಚಾರದಲ್ಲಿ ಮದ್ಯಪ್ರವೇಶಿಸಬೇಕೆಂದು ಪ್ರದಾನಿಯವರನ್ನು ಆಗ್ರಹಿಸಿದ್ದಾರೆ. ಒಂದುವೇಳೆ ರಾಜ್ಯಪಾಲರು ಈ ವಿಷಯದಲ್ಲಿ ತಕ್ಷಣ ತೀರ್ಮಾನ ಕೈಗೊಳ್ಳದ್ದಲ್ಲಿ ಠಾಕ್ರೆಯವರು ಮುಖ್ಯಮಂತ್ರಿ ಹುದ್ಜೆಯನ್ನು ಕಳೆದುಕೊಳ್ಳಬೇಕಾಗುತ್ತದೆ.
