ತುಮಕೂರು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್ನಿಂದ ಸಂಕಷ್ಟ ತಲೆಯೆತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೆರವಾಗುವ ದೃಷ್ಟಿಯಿಂದ ತುಮಕೂರು ತಾಲ್ಲೂಕು ಕೆಂಪನದೊಡ್ಡೇರಿ ನಿವಾಸಿ ಹಾಗೂ ಕೃಷಿಕ ಶಶಿಧರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ತುಮಕೂರು ತಾಲ್ಲೂಕು ಕೆಸ್ತೂರಿನಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಬುಧವಾದದಂದು ಶಶಿಧರ್ ಅವರು ನೀಡಿದ ಒಂದು ಲಕ್ಷ ರೂ. ಮೊತ್ತದ ಚೆಕ್ ಅನ್ನು ಬ್ಯಾಂಕ್ ಮ್ಯಾನೇಜರ್ ಎಚ್.ಎನ್.ಶೇಷಾದ್ರಿ ಸ್ವೀಕರಿಸಿದರು.