ಕಂಗಾಲಾಗಿರುವ ಪ್ರಯಾಣಿಕರಿಗೆ ಆಸರೆಯಾದ ಕೆಪಿಸಿಸಿಗೆ ಅಭಿನಂದನೆಗಳು : ಹಾಶೀರ್ ಪೇರಿಮಾರ್

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೊರೊನಾ ಲಾಕ್‌ಡೌನ್‌ ನಿಂದಾಗಿ ಅಲ್ಲಲ್ಲಿ ಬಾಕಿಯಾಗಿರುವ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣಿಸಲು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶದ ಕಾಂಗ್ರೆಸ್ ಸಮಿತಿ ವತಿಯಿಂದ ಸಾರಿಗೆ ಸಂಸ್ಥೆಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡುವುದರ ಮೂಲಕ ಕಂಗಾಲಾಗಿರುವ ಪ್ರಯಾಣಿಕರಿಗೆ ಆಸರೆಯಾಗಿದೆ.

ನಿನ್ನೆಯಿಂದ ಕಾರ್ಮಿಕರಿಗೆ ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಬಸ್​ ವ್ಯವಸ್ಥೆ ಮಾಡಿರುವುದಾಗಿ ಸರಕಾರ ಘೋಷಣೆ ಮಾಡಿದ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದ ಕಾರ್ಮಿಕರು ಪ್ರಯಾಣ ದರದ ಹೆಚ್ಚಳದಿಂದಾಗಿ ಕಂಗಾಲಾಗಿದ್ದರು. ಸರಕಾರದ ಈ ಕ್ರಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹ ಸನ್ನಿವೇಶದಲ್ಲಿ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದೀಗ ಕಾಂಗ್ರೆಸ್ ಮುಂದಾಗಿದ್ದು ಕೆಎಸ್‌ಆರ್ಟಿಸಿ ಸಂಸ್ಥೆಗೆ 1 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿದೆ.

ಕೆಪಿಸಿಸಿ ಕೊರೋನ ಪರಿಹಾರ ನಿಧಿಗಾಗಿ ದೇಣೆಗೆ ನೀಡಿರುವ ಹಣದಿಂದ ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಎಸ್ಅರ್ಟಿಸಿ ಸಂಸ್ಥೆಗೆ ಒಂದು ಕೋಟಿ ರೂಪಾಯಿ ಚೆಕ್ ನೀಡುವ ಮೂಲಕ ಕಂಗಾಲಾಗಿರುವ ಪ್ರಯಾಣೆಕರು ಸುರಕ್ಷಿತವಾಗಿ ಊರಿಗೆ ಹೋಗಲು ಆಸರೆಯಾದ ಕೆಪಿಸಿಸಿ ಅಧ್ಯಕ್ಷರಾದ @DkShivakumar ಹಾಗೂ @INCKarnataka ನಾಯಕರಿಗೆ ಪುದು ಗ್ರಾ.ಪಂ ಸದಸ್ಯ, ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ರವರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...