ರಾಜ್ಯದಲ್ಲಿ ಆಳುವ ಪಕ್ಷದ 25 ಎಂಪಿಗಳು ಯಾವ ಪುರುಷಾರ್ಥಕ್ಕಾಗಿ: ಶ್ರೀಕಾಂತ್ ಸಾಲ್ಯಾನ್

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಮ್ಮ ರಾಜ್ಯದಲ್ಲಿ ಆಡಳಿತ ಪಕ್ಷದ 25 ಎಂಪಿಗಳಿದ್ದರೂ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ಕಳಿಸಲು ಸಾಧ್ಯವಾಗದಿರುವುದು ನಾಚಿಕೆಗೇಡು.

ನಮ್ಮ ಪಕ್ಕದ ರಾಜ್ಯವಾದ ಕೇರಳವನ್ನಾದರು ನೋಡಿ ಸ್ವಲ ಕಲಿಯಬಾರದೇ.ಕೇರಳದಿಂದ ಇತರೆ ರಾಜ್ಯದ ಕಾರ್ಮಿಕರನ್ನು ಸ್ಪೆಷಲ್ ರೈಲು ಸೌಕರ್ಯ ಮಾಡಿ ಕಳುಹಿಸಿದ್ದಾರೆ.ಆದರೆ ನಮ್ಮ ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾದ ಚಿಂತನೆ ನಡೆಸದಿರುವುದು ವಿಷಾದಕರವಾಗಿದೆ ಎಂದು ವೆಲ್ಫೇರ್ ಪಾರ್ಟಿಯ ಕರ್ನಾಟಕ ರಾಜ್ಯದ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್ ಕಿಡಿಕಾರಿದರು.

ಕಾರ್ಮಿಕರ ಕಲ್ಯಾಣ ನಿಧಿಯ ಮೊತ್ತವನ್ನು ಈ ಸಂಧರ್ಭದಲ್ಲಿ ಉಪಯೋಗಿಸಿ ಕಾರ್ಮಿಕರ ಸೇವೆ ಮಾಡಬೇಕಾದ್ದು ಸರಕಾರದ ಕರ್ತವ್ಯವೆಂಬುದನ್ನು ಸರಕಾರ ಮರೆತಂದಿದೆ.

ಕೇವಲ ಕಾರ್ಮಿಕರ ದಿನಾಚರಣೆಯ ಸಂಧರ್ಭದಲ್ಲಿ ಶುಭಾಶಯ ಹೇಳುವುದರಲ್ಲಿ ಯಾವುದೇ ಪ್ರಯೋಜನವಿಲ್ಲ.ಕಾರ್ಮಿಕರ ಮೇಲೆ ಪ್ರೀತಿ ಕರುಣೆ ಇದ್ದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಮಿಕರ ಕೈಹಿಡಿಯಬೇಕಾಗಿದೆ.ಆದ್ದರಿಂದ ಸರಕಾರವು ಕೂಡಲೇ ರಾಜ್ಯದಲ್ಲಿರುವ ದೇಶದ ವಿವಿಧ ಭಾಗದ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರಿಗೆ ತಲುಪಿಸಬೇಕೆಂದು ಅವರು ತಿಳಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...