(www.vknews.com) : ಮದ್ಯಪಾನದ ಬಗ್ಗೆ ಕೆಲವರ ಕುಟುಂಬದಲ್ಲಿ ನಾನು ಕಂಡ ನೈಜ ಘಟನೆಯಾದಾರಿತ ಸಣ್ಣ ಕವನವನ್ನು ರಚಿಸಿರುತ್ತೇನೆ.
ಕುಡಿಯದಿರು ಮಾನವ ನಿನಗೊಂದು ಕುಟುಂಬವಿದೆ!. ಮನೆಯವರ ಕನಸು ಮಗನೊಬ್ಬ ಇಂಜಿನಿಯರ್, ಡಾಕ್ಟರ್ ಆಗುವನೇ ಎಂಬಂತೆ!. ಆದರೆ ಮಗನ ಕನಸೇ ಬಾರಿನೊಳಗೆ!. ನೀನೊಬ್ಬ ಮದ್ಯ ವ್ಯಸನಿಯಾಗಿ ನಿನಗರಿವಿಲ್ಲದೆಯೇ ಆಸ್ಪತ್ರೆ ಸೇರಿದಾಗ! ನಿನ್ನ ನಂಬಿದವರ ಗತಿಯೇನು ಮಾನವ! ಕುಡಿಯದಿರು ಮಾನವ ನಿನಗೊಂದು ಕುಟುಂಬವಿದೆ!!
ಇನ್ನೊಂದು ಮನೆಯ ಹೆಣ್ಣನ್ನು ನಿನಗೆ ಕೊಟ್ಟು! ನೀನೊಬ್ಬ ಅಪ್ಪನಾಗಿ ಮರಿ ಮಕ್ಕಳ ಅರಿವಿಲ್ಲದೆ ಬೀದಿಯಲಿ ಬಿದ್ದಿರಲು!. ಜಗವೇ ನಾಚುತಿದೆ ನಿನ್ನ ಕಂಡು! ಕುಡಿಯದಿರು ಮಾನವ ನಿನಗೊಂದು ಕುಟುಂಬವಿದೆ!!
ವರುಷ ಅರುವತ್ತು ದಾಟಿದರೂ ನೀನೊಬ್ಬ ಕುಡುಕನಾಗಿ ಉಳಿದಿರಲು!. ದಿನವೆಲ್ಲಾ ಜಗಳ ನಡೆಸಿ ಮಗ ಮೊಮ್ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿ!. ಮದ್ಯಪಾನಕ್ಕೆ ಬಲಿಯಾದಾಗ ಕಂಡ ಕನಸುಗಳೇ ಕಥೆಯಾಗಿರುವುದಿಲ್ಲಿ!. ಕುಡಿಯದಿರು ಮಾನವ ನಿನಗೊಂದು ಕುಟುಂಬವಿದೆ!! ಕುಡಿಯದಿರು ಮಾನವ ನಿನಗೊಂದು ಕುಟುಂಬವಿದೆ!!
🖋 ಝಹೀರ್ ಶೇಖ್ ಕೋಲ್ಪೆ ಸೈಟ್ ಇಂಜಿನಿಯರ್ ಬಿಕಾಸ್ ಮಂಗಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.