ಮಂಗಳೂರು (www.vknews.com) : ರಮಝಾನ್ ಪ್ರಯುಕ್ತ ಅಲ್ ಬಿರ್ರ್ ಪ್ರಿ ಸ್ಕೂಲ್ ವತಿಯಿಂದ ನಡೆದ ವಲಯ ಮಟ್ಟದ ಕುರ್ ಆನ್ ಪಾರಾಯಣ ಸ್ಪರ್ಧೆಯಲ್ಲಿ ಮೂಡುಬಿದಿರೆ ಅಬ್ದುಲ್ ಜಬ್ಬಾರ್ ಉಸ್ತಾದ್ ಮೆಮೋರಿಯಲ್ ಅಲ್ ಬಿರ್ರ್ ಸ್ಕೂಲ್ ನ ಪುಟಾಣಿಗಳು ಮೊದಲ ಎರಡು ಸ್ಥಾನಗಳನ್ನು ಗಿಟ್ಟಿಸಿ ಅಭೂತಪೂರ್ವ ಸಾಧನೆ ಮೆರೆದಿದ್ದಾರೆ.
ಫಾತಿಮತ್ ಝಹ್ರಾ ಪ್ರಥಮ ಸ್ಥಾನಪಡೆದರೆ ಅಮ್ರಿನ್ ಶಝಾ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ. ಒಮಾನ್ ದೇಶದ ಸಲಾಲದ ಅಲ್ ಬಿರ್ರ್ ವಿದ್ಯಾರ್ಥಿ ಮುಹಮ್ಮದ್ ರಿಹಾನ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ವಲಯ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಶಾಲೆಗಳು ಸೇರಿದಂತೆ ಒಮಾನ್ ನ ಸಲಾಲ ಹಾಗೂ ತ್ರಿಶೂರು ಜಿಲ್ಲೆಗಳ ಒಟ್ಟು 11 ಶಾಲೆಯ ಪುಟಾಣಿಗಳು ಪಾಲ್ಗೊಂಡಿದ್ದರು. ಆನ್ ಲೈನ್ ಮೂಲಕ ಈ ಸ್ಪರ್ಧೆಯನ್ನು ನಡೆಸಲಾಗಿತ್ತು. ಕೇರಳದ ಅಲ್ ಬಿರ್ರ್ ಕೋರ್ಡಿನೇಟರ್ ಇಸ್ಮಾಯಿಲ್ ಮುಜದ್ದಿದಿ ಫಲಿತಾಂಶ ವನ್ನು ಘೋಷಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.