ಯುಎಇ(ವಿಶ್ವಕನ್ನಡಿಗ ನ್ಯೂಸ್): ಜಗತ್ತಿನಾದ್ಯಂದ ವ್ಯಾಪಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋದವಾದ ಕೊರೊನಾ ವೈರಸ್ ದೂರವಾಗಲು ಹಾಗೂ ಅದು ಗುಣಮುಖವಾಗುವ ಲಸಿಕೆ ಲಭ್ಯವಾಗುವಂತೆ ಮೇ.14 ರಂದು ರಮಝಾನ್ ಉಪವಾಸ ವ್ರತ ಆಚರಿಸಲು ಎಲ್ಲಾ ಧರ್ಮೀಯರೊಡನೆ ಪೋಪ್ ಫ್ರಾನ್ಸಿಸ್ ಅವರು ವಿನಂತಿಸಿಕೊಂಡಿದ್ದಾರೆ.
ಉಪವಾಸ ವ್ರತ ಆಚರಿಸ ಎಲ್ಲರೂ ಆಧ್ಯಾತ್ಮಿಕವಾಗಿ ಒಂದಾಗಬೇಕು, ಕೊರೊನಾ ವೈರಸ್ ಎಲ್ಲವನ್ನೂ ಮೀರಿ ಮನುಷ್ಯ ಸಮೂಹವನ್ನು ನುಂಗುತ್ತಿದೆ. ಇದರಿಂದ ಹೊರಬರಲು ಮನುಷ್ಯ ಸಮೂಹಕ್ಕೆ ಸಹಾಯ ಮಾಡಲು ದೇವರಲ್ಲಿ ಪ್ರಾರ್ಥಿಸಬೇಕು ಎಂದು ಅವರು ಹೇಳಿದರು.
2019 ರಲ್ಲಿ ಸ್ಥಾಪಿಸಲಾದ ವಿಶ್ವ ಭಾತೃತ್ವ ಕಮಿಟಿಯು ವಿಶ್ವದಾದ್ಯಂತ ಮೇ.14 ವಿಶ್ವ ಪ್ರಾರ್ಥನಾ ದಿನವನ್ನಾಗಿ ಆಚರಿಸಲು ಹೊರಡಿಸಿದ ಕರೆಗೆ ಪೋಪ್ ಫ್ರಾನ್ಸಿಸ್ ಅವರು ಅನುಮೋದನೆ ನೀಡಿದರು.
ಫೆಬ್ರವರಿಯಲ್ಲಿ ಪೋಪ್ ಅವರು ಯುಎಇ ಬೇಟಿ ಸಂಧರ್ಭದಲ್ಲಿ ವಿಶ್ವ ಮಾನವ ಭ್ರಾತೃತ್ವ ಕುರಿತ ದಾಖಲೆಗೆ ಪೋಪ್ ಮತ್ತು ಶೇಖ್ ಅಹ್ಮದ್ ತಯ್ಯಿಬ್ ಅವರು ಸಹಿ ಹಾಕಿದ್ದರು.
ಮನವಿಯು ಇಂಗ್ಲೀಷ್, ಇಟಾಲಿಯನ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಅರೇಬಿಕ್, ಅಫ್ಘಾನ್, ಮಲೇಷಿಯನ್, ಪರ್ಷಿಯನ್, ಸ್ವಹಿಲಿ, ಟರ್ಕಿಶ್, ಉರ್ದು, ಚೈನೀಸ್, ಹಿಬ್ರೂ ಭಾಷಗಳಲ್ಲಿ ಪ್ರಕಟಿಸಿಲಾಗಿದೆ. ಅದಲ್ಲದೇ ಮುಹಮ್ಮದ್ ಬಿನ್ ಝಾಯಿದ್ ಅವರು ಮೇ. 14 ರಂದು ವಿಶ್ವದಾದ್ಯಂತ ಮಾನವ ಸಮೂಹ ಒಟ್ಟಾಗುವಂತೆ ತಮ್ಮ ಟ್ವೀಟರ್ ಖಾತೆಯಲ್ಲಿ ಕರೆ ನೀಡಿದ್ದಾರೆ.
On May 14, people everywhere will collectively join together in prayer for an end to coronavirus. Responding to the Higher Committee of Human Fraternity’s call, they will be united against this challenge. However our efforts play out, we need God's grace and mercy. — محمد بن زايد (@MohamedBinZayed) May 4, 2020
On May 14, people everywhere will collectively join together in prayer for an end to coronavirus. Responding to the Higher Committee of Human Fraternity’s call, they will be united against this challenge. However our efforts play out, we need God's grace and mercy.
— محمد بن زايد (@MohamedBinZayed) May 4, 2020
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.