ಟೆಹರಾನ್(www.vknews.in): ಆಸಿಡ್ ದಾಳಿಯಲ್ಲಿ ವ್ಯಕ್ತಿಯನ್ನು ಕುರುಡನನ್ನಾಗಿ ಮಾಡಿದ ಇರಾನ್ ಮಹಿಳೆಗೆ ಕುರುಡು ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 2014 ರಲ್ಲಿ, ಮಶಾದ್ ನಗರದಲ್ಲಿ 30 ವರ್ಷದ ಮಹಿಳೆಯೊಬ್ಬಳು 33 ವರ್ಷದ ವ್ಯಕ್ತಿಯ ಮುಖಕ್ಕೆ ಆಸಿಡ್ ಎಸೆದಿದ್ದಾಳೆ ಎಂದು ಸರ್ಕಾರಿ ರೋಕ್ನಾ ಸುದ್ದಿ ಸಂಸ್ಥೆ ತಿಳಿಸಿದೆ. ದಾಳಿಯ ನಂತರ ಆ ವ್ಯಕ್ತಿ ಎರಡೂ ಕಣ್ಣುಗಳನ್ನು ಕಳೆದುಕೊಂಡು ಕುರುಡನಾಗಿದ್ದ. ವ್ಯಕ್ತಿಯು ಕಣ್ಣು ಕಳೆದುಕೊಂಡ ಕಾರಣಕ್ಕಾಗಿ ಆರೋಪಿ ಮಹಿಳೆಗೂ ಕೂಡ ಕುರುಡು ಶಿಕ್ಷೆಯನ್ನು ವಿಧಿಸಲಾಗಿದೆ. ಕುರುಡು ಶಿಕ್ಷೆಯು ಇರಾನಿನ ಕಾನೂನಿನಲ್ಲಿರುವ ಅಪರೂಪದ ಶಿಕ್ಷೆಯ ಒಂದು ರೂಪವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.