ಮಾಧ್ಯಮ ವ್ಯಭಿಚಾರ ನಿಲ್ಲಲಿ, ಕೋಮು ಸಾಮರಸ್ಯ ಮೂಡಲಿ – ಭಾರತೀಯ ಮಾಧ್ಯಮ ಸುಧಾರಿಸುವುದು ಯಾವಾಗ?: ಅಜೀಜ್ ಜಾಗೀರ್ ದಾರ್

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಅಜ್ಜಿಗೆ ಮೊಮ್ಮಗಳ ಚಿಂತೆಯಾದರೆ, ಮೊಮ್ಮಗಳಿಗೆ ಬೇರೆ ಏನೋ ಚಿಂತೆ ಎನ್ನುವ ಮಾತಿನಂತೆ, ಇಡೀ ಪ್ರಪಂಚವೇ ಮಾರಕ ಮಹಾಮಾರಿ ಕೊರೊನಾವನ್ನು ಯಾವ ರೀತಿ ನಿಯಂತ್ರಿಸಬಹುದು ಎಂದು ವೈದ್ಯಕೀಯ ಲೋಕ ತಲೆಕೆಡಿಸುತ್ತಿರುವ ಸಂಧರ್ಭದಲ್ಲಿ ಭಾರತೀಯ ಮಾಧ್ಯಮ ಮಾತ್ರ, ಅದನ್ನು “ನಿಝಾಮುದ್ದೀನ್ ತಬ್ಲೀಗ್ ವೈರಸ್” ಎಂದು ಮತಾಂತರಗೊಳಿಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ತಾಜುದ್ದಿನ್ ಇಲಕಲ್ ಅವರು ಕೆಲ ದೃಶ್ಯ ಮಾಧ್ಯಮಗಳ ಕಾರ್ಯವೈಖರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡರೂ ಸುಧಾರಿಸಿಕೊಳ್ಳದ ಮಾಧ್ಯಮಗಳ ಕಾರ್ಯವೈಖರಿ ಸಮಾಜದ ಶಾಂತಿ ಕದಡುವತ್ತ ದಾಪುಗಾಲು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇದೀಗ “ಅಜ್ಮೀರ್ ಕೊರೊನ” ಎಂಬ ಹೊಸ ಸಂಶೋಧನೆಯನ್ನು ಮಾದ್ಯಮಗಳು ಸೃಷ್ಟಿ ಮಾಡುತ್ತಿದೆ.
ಭಾರತವನ್ನು ಹೊರತುಪಡಿಸಿ ವಿಶ್ವದಾದ್ಯಂತದ ಎಲ್ಲಾ ಮಾಧ್ಯಮಗಳು ಕೊರೊನಾ ಸೋಂಕು ತೊಲಗಿಸಲು ಆರೋಗ್ಯ ಕಾರ್ಯಕರ್ತರೊಂದಿಗೆ ಸಹಕರಿಸುತ್ತಿದ್ದರೆ, ಭಾರತದ ಮಾಧ್ಯಮಗಳು ಕೋಮು ಬಣ್ಣ ಹಚ್ಚಿ ಕೊರೋನಾವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ.

ಈ ಮಾಧ್ಯಮಗಳಿಗೆ ಮಾಧ್ಯಮ ಧರ್ಮದ ಬಗ್ಗೆ ತಿಳಿದಿಲ್ಲವೇ? ಅಥವಾ ಸರಕಾರದ ಅನುಮತಿಯಿಂದ ಇಂತಹ ವಾರ್ತೆಗಳನ್ನು ಸೃಷ್ಟಿ ಮಾಡುತ್ತಿವೆಯೇ ?ಒಟ್ಟಿನಲ್ಲಿ ಮಾದ್ಯಮ ಧರ್ಮವನ್ನು ಬಿಟ್ಟು ಇಂತಹ ನೀಚ ಮಾಧ್ಯಮ ವೃತ್ತಿ ಮಾಡುತ್ತಿರುವುದು ಮಾಧ್ಯಮ ವ್ಯಭಿಚಾರವಾಗಿದೆ ಎಂದು ಆರೋಪಿಸಿದರು.

ಇಂತಹ ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಡಬೇಕಾದ ಸರಕಾರವೇ ಮೌನವಹಿಸುತ್ತಿರುವುದು ನೋಡಿದರೆ ಇನ್ನೂ ಸಂಶಯ ಮೂಡಿಸುತ್ತಿದೆ.
ಆದ್ದರಿಂದ ಕೂಡಲೇ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರ ಇಂತಹ ಹೊಲಸು ಮತ್ತು ಕೋಮುವಾದಿ ಮಾಧ್ಯಮದವರ ಮೇಲೆ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಜೀಜ್ ಜಾಗೀರ್ ದಾರ್
ಮಾಧ್ಯಮ ಸಂಯೋಜಕರು
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...