ಇದು ಪ್ರವಾದಿಯವರ ಪುಣ್ಯ ಭೂಮಿಯ ಮಹಿಮೆ..

ವಿಶ್ವಕನ್ನಡಿಗ ನ್ಯೂಸ್(www.vknews.in):ಪ್ರವಾದಿ ಮುಹಮ್ಮದ್ (ಸ.ಅ) ರವರು ಅಂತ್ಯ ವಿಶ್ರಮಗೊಳ್ಳುತ್ತಿರುವ ಮದೀನಾದ ಮಣ್ಣಿಗೆ ಕೆಲವು ಪ್ರತ್ಯೇಕತೆಗಳಿವೆ. ಈ ಭೂಮಿಯಲ್ಲಿ ತಮ್ಮ ಮನಸ್ಸಿನಲ್ಲಿರುವ ದುಃಖ ಕಷ್ಟಗಳನ್ನು ಹೇಳುತ್ತಾ ಅಲ್ಲಾಹನೊಂದಿಗೆ ಪ್ರಾರ್ಥಿಸಿದರೆ ಕ್ಷಣ ಮಾತ್ರದಲ್ಲಿ ಪರಿಹಾರ ದೊರಕಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಅಂತಹದೇ ಒಂದು ಘಟನೆ ಮೊನ್ನೆ ಮದೀನಾದಲ್ಲಿ ನಡೆಯಿತು.

ಮದೀನಾದ ಸಮೀಪ ತೋಟದಲ್ಲಿ ಕೆಲಸಮಾಡುತ್ತಿರುವ ಪಾಕಿಸ್ತಾನದ ಪ್ರಜೆಯೋರ್ವ ಲಾಕ್ ಡೌನ್ ಕಾರಣದಿಂದಾಗಿ ಕೆಲಸವಿಲ್ಲದೇ ಕಂಗಾಲಾಗಿದ್ದ. ಆತನ ಮನೆಯವರಾದರೂ ಎಲ್ಲದಕ್ಕೂ ಈತನನ್ನೇ ಆಶ್ರಯಿಸಿ ಬದುಕುತ್ತಿದ್ದರು. ಮನೆಯಲ್ಲಿ ಏನಾದರೂ ಬೇಯಿಸಬೇಕಿದ್ದರೆ ಈತ ಪ್ರತೀ ತಿಂಗಳು ತನಗೆ ಸಿಗುವ ಸಂಬಳವನ್ನು ಮನೆಗೆ ಕಳುಹಿಸಬೇಕಾಗಿತ್ತು. ಆದರೆ ಕಲಸವಿಲ್ಲದೆ ಎರಡು ತಿಂಗಳಾಯಿತು ಬಡಪಾಯಿ ಮನೆಗೆ ಹಣ ಎಲ್ಲಿಂದ ಕಳುಹಿಸಲಿ. ಆದರೆ ಮನೆಯವರಿಗೆ ತನ್ನ ಸಂಕಷ್ಟವನ್ನು ಮರೆಮಾಚುತ್ತಾ ಸಂಬಳ ಸಿಕ್ಕಿಲ್ಲ ಇವತ್ತು ಕಳುಹಿಸುತ್ತೇನೆ ನಾಳೆ ಕಳುಹಿಸುತ್ತೇನೆ ಎಂದು ಸುಳ್ಳು ಹೇಳುತ್ತಿದ್ಜ. ಕೈಯಲ್ಲಿ ನಯಾ ಪೈಸೆಯಿಲ್ಲದ ನಾನು ಹೇಗೆ ಮನೆಯವರಿಗೆ ದುಡ್ಡು ಕಳುಹಿಸಲಿ ಎಂದು ಆಲೋಚಿಸುತ್ತಾ ಮದೀನಾದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಾ ಇರಬೇಕಾದರೆ ಎದುರಿನಿಂದ ಬಂದ ವೃದ್ಧೆಯೋರ್ವಳು ಈತನನ್ನು ಕರೆದವಳೇ ಕೈಯಲ್ಲಿ ಒಂದು ನೋಟನ್ನು ಇಟ್ಟು ಪ್ರಾರ್ಥಿಸುವಂತೆ ಹೇಳಿ ಮುಂದೆ ಸಾಗಿದಳು. ನೋಡಿದಾಗ ಕೈಯಲ್ಲಿ ಆ ವೃದ್ಧೆ ನೀಡಿದ್ದು ಬರೋಬ್ಬರಿ 500 ರಿಯಾಲ್ ನ ನೋಟಾಗಿತ್ತು. ಅಂದರೆ ಪಾಕಿಸ್ತಾನದ ಸುಮಾರು 21000 ರೂಪಾಯಿಗಳಾಗಿತ್ತು. ಈ ಘಟನೆಯಿಂದ ಬಹಳ ಆಶ್ಚರ್ಯಚಕಿತನಾದ ಈತ ತಾನು ಯೋಚಿಸದ ದಿಕ್ಕಿನಿಂದ ಬಂದ ಹಣದಿಂದ ಬಹಳ ಸಂತೋಷಗೊಂಡು ತನ್ನ ರೂಮಿನಲ್ಲಿರುವ ಮಂಗಳೂರು ಮೂಲದ ವ್ಯಕ್ತಿಯೊಂದಿಗೆ ಈ ವಿಷಯವನ್ನು ಹಂಚಿಕೊಂಡ. ಮರುದಿನವೇ ಪಾಕಿಸ್ತಾನದಲ್ಲಿ ಕಷ್ಟದಲ್ಲಿರುವ ತನ್ನ ಕುಟುಂಬದವರಿಗೆ ಹಣವನ್ನು ಕಳುಹಿಸಿಕೊಟ್ಟ ಈ ಪಾಕಿಸ್ತಾನಿ ಪ್ರಜೆ ತನಗೆ ಹಣ ನೀಡಿದ ಆ ಅಪರಿಚಿತ ವೃದ್ಧೆ ಯಾರೆಂದು ದಿನವೂ ಚಿಂತಿಸುತ್ತಾ ಇರುವುದರೊಂದಿಗೆ ತನ್ನ ಪಾಲಿಗೆ ಅಪತ್ಬಾಂಧವಳಾಗಿ ಬಂದ ಆ ವೃದ್ಧೆಗೆ ದಿನವೂ ಪ್ರಾರ್ಥಿಸುತ್ತಿದ್ದಾನೆ.

ಲೇಖನ: ಎಸ್.ಎ.ರಹಿಮಾನ್ ಮಿತ್ತೂರು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...