ರಾಯಚೂರು: ಉಚಿತ ಫೇಸ್ ಶೀಲ್ಡ್ ಮಾಸ್ಕ್ ವಿತರಣೆ

ರಾಯಚೂರು (www.vknews.com) : ನಗರದ ಪ್ರತಿಷ್ಠಿತ ರಕ್ತಪರೀಕ್ಷಾ ಕೇಂದ್ರವಾದ ಜಿ.ಕೆ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಇದರ ಸಿಲ್ವರ್ ಜ್ಯುಬಿಲಿ (25 ವರ್ಷದ) ಸಂಭ್ರಮಾಚರಣೆಯ ಪ್ರಯುಕ್ತ ರಾಯಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ರಿಮ್ಸ್ ಮೆಡಿಕಲ್ ಕಾಲೇಜ್ಗೆ ಉಚಿತ ಫೇಸ್ ಶೀಲ್ಡ್ ಮಾಸ್ಕ್ ಗಳನ್ನು ವಿತರಿಸಲಾಯಿತು ಹಾಗೂ ನಗರದ ವಿವಿಧ ನರ್ಸಿಂಗ್ ಹೋಂ ಗಳಿಗೆ ಮತ್ತು ವೈದ್ಯರಿಗೆ ಮಾಸ್ಕ್ ಗಳನ್ನು ವಿತರಿಸಲಾಯಿತು.

ದೇಶದಲ್ಲಿ ದಿನೇದಿನೇ ಕೋರೋನ ವೈರಸ್ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಳ್ಳಬೇಕು, ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬಂದು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಹಾಗೂ ಕೋರೋನ ವೈರಸ್ ವಿರುದ್ಧ ಹಗಲಿರುಳೆನ್ನದೆ ಆರೋಗ್ಯ ಸಿಬ್ಬಂದಿಗಳು ಮತ್ತು ಜಿಲ್ಲಾ ಆಡಳಿತ ಹಾಗೂ ಕೋರೋನ ವಾರಿಯರ್ಸ್ ಎಲ್ಲರೂ ಸೈನಿಕರಂತೆ ಹೋರಾಡುತ್ತಿದ್ದಾರೆ. ನಾವೆಲ್ಲರೂ ಅವರಿಗೆ ಸಹಕರಿಸಬೇಕಾಗಿದೆ ಎಂದು ಜಿ.ಕೆ.ಡಯಾಗ್ನಸ್ಟಿಕ್ ಲ್ಯಾಬೋರೇಟರಿಯ ಮಾಲೀಕರು ಹಾಗೂ ಹಿರಿಯ ಟೆಕ್ನೋಲಜಿಸ್ಟರಾದ ಶ್ರೀ ಎಂ ಎ ಅಜಿಜ್ ಮುಜಾಹಿದ್ ರವರು ಹೇಳಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...