ಒಮಾನ್(ವಿಶ್ವಕನ್ನಡಿಗ ನ್ಯೂಸ್): ಸುಲ್ತಾನತ್ ಆಫ್ ಒಮಾನಿನಲ್ಲಿ ಈದುಲ್ ಫಿತ್ರ್ ಆಚರಣೆ ಭಾಗವಾಗಿ ರಜಾದಿನಗಳಲ್ಲಿ ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ ಎಂದು ಒಮಾನ್ ಸುಲ್ತಾನರು ಸೋಮವಾರ ಘೋಷಿಸಿದ್ದಾರೆ.
ಕೋವಿಡ್-19 ಕೊರೋನವೈರಸ್ ಹರಡುವುದನ್ನು ತಡೆಗಟ್ಟಲು ಮುನ್ನಚ್ಚರಿಕಾ ಕ್ರಮಗಳು ನಡೆಯುತ್ತಿರುವಾಗ ಸಂಪ್ರದಾಯವು ಅಪಾಯಕಾರಿ ಎಂದು ಹೇಳಿದರು.
ಈ ಕ್ರಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡ ಮತ್ತು ತಾತ್ಕಾಲಿಕ ಬಂಧನ ವಿಧಿಸುವಂತೆ ರಾಯಲ್ ಒಮಾನ್ ಪೊಲೀಸರಿಗೆ ಅನುಮತಿ ನೀಡಲಾಗಿದೆಎಂದು ಅರೇಬಿಕ್ ದಿನಪತ್ರಿಕೆ ಅಲ್ ಬಯಾನ್ ವರದಿ ಮಾಡಿದೆ.
ಪ್ರತಿಯೊಬ್ಬರೂ ಎಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಮತ್ತು ಸಾರ್ವಜನಿಕ ಕೆಲಸದ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ಪ್ರದೇಶಗಳಲ್ಲಿ ಫೇಸ್ ಮಾಸ್ಕ್ ಧರಿಸಬೇಕು ಎಂದು ಪ್ರಕಟನೆಯಲ್ಲಿ ಆರೋಗ್ಯ ಸಚಿವಾಲಯ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.