(www.vknews.com) : ಆಧುನಿಕ ಭಾರತದ ಮಹಾನ್ ಕನಸು ಹೊತ್ತಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ದುರಂತ ಸಾವನ್ನಪ್ಪಿ ಇವತ್ತಿಗೆ 29 ವರ್ಷ ಗತಿಸಿದೆ. 1991, ಮೇ 21ರಂದು ಚೆನ್ನೈ ಹೊರವಲಯದ ಶ್ರೀಪೆರಂಬುದರೂರ್ ಬಳಿ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿ ರಾಜೀವ್ ಗಾಂಧಿ ಅವರ ಹತ್ಯೆಗೈದಿದ್ದರು.
ಈ ಪ್ರಯುಕ್ತ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೆ. ಪಿ. ಸಿ. ಸಿ ಯ ಮಾಜಿ ಕಾರ್ಯದರ್ಶಿ ಟಿ. ಎಂ ಶಾಹಿದ್ ತೆಕ್ಕಿಲ್ ಅವರು ಪುಷ್ಪಚರಣೆ ಮಾಡಿ ಗೌರವ ಸೂಚಿಸಿದರು .
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ. ಎಸ್ ಗಂಗಾಧರ್, ಕೆ ಮುಸ್ತಪ್, ನ್ಯಾಯವಾದಿಗಳಾದ ದಿನೇಶ್ ಅಂಬೆಕಲ್ಲು ನಂದರಾಜ್ ಸಂಕೇಶ್, ಅವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.