ಜೆದ್ದಾ(www.vknews.in): ಸೌದಿಅರೇಬಿಯಾ, ಯುಎಇ, ಬಹರೈನ್ , ಕುವೈತ್, ಕತಾರ್ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ರಂಜಾನ್ 30 ದಿನಗಳು ಪೂರ್ತಿಯಾಗಿ ಮೇ 24 ಭಾನುವಾರದಂದು ಈದ್-ಉಲ್.ಫಿತರ್ ಹಬ್ಬವು ಆಚರಿಸಲ್ಪಡುವ ಸಾಧ್ಯತೆಯಿದೆಯೆಂದು ಸೌದಿ ಅರೇಬಿಯಾದ ಮಜ್ಮಾ ಖಗೋಳ ವೀಕ್ಷಣಾಲಯ ತಿಳಿಸಿದೆ.
ಮೇ 22 ಕ್ಕೆ ಅನುಗುಣವಾಗಿ ರಂಜಾನ್ 29 ರ ಶುಕ್ರವಾರ ಸಂಜೆ ಶಾವ್ವಾಲ್ ಮಾಸದ ಅರ್ಧಚಂದ್ರಾಕೃತಿಯನ್ನು ನೋಡುವ ಸಾಧ್ಯತೆಯಿಲ್ಲ ಎಂದು ಖಗೋಳ ಲೆಕ್ಕಾಚಾರಗಳು ದೃಢಪಡಿಸಿದೆ. ರಿಯಾದ್ ಬಳಿಯ ಮಜ್ಮಾ ವಿಶ್ವವಿದ್ಯಾಲಯದ ವೀಕ್ಷಣಾಲಯದಲ್ಲಿ ಖಗೋಳಶಾಸ್ತ್ರಜ್ಞರ ಪ್ರಕಾರ, ಮೇ 24 ರ ಭಾನುವಾರ, 30 ದಿನಗಳ ಉಪವಾಸವನ್ನು ಪೂರೈಸಿದ ನಂತರ ಈದುಲ್ ಫಿತರ್ ಆಗುವ ಸಾಧ್ಯತೆಯಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.