ಪರರ ಸೇವೆಯಲ್ಲಿ ಪರಮಾತ್ಮನ ಕಾಣುತ್ತಿರುವ ಶಿವಮೊಗ್ಗದ ಹುಡುಗ

(www.vknews.com) : ಹುಟ್ಟು ಉಚಿತ ಸಾವು ಖಚಿತ ಎಂಬ ನಾಣ್ಣುಡಿಯಂತೆ, ಹುಟ್ಟಿದ ಪ್ರತಿಯೊಂದು ಜೀವಿಗೂ ಕೊನೆ ಎಂಬುದು ಇದೆ ಇರುತ್ತದೆ, ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಎಂದು ಹೊರಟವರು ಕೆಲವರು ಅಂತಹವರ ಕೆಲವರಲ್ಲಿ ವಿಶೇಷ ವ್ಯಕ್ತಿ ಶಿವಮೊಗ್ಗದ ರಾಜು‌ ಅರ್ ತಿಮ್ಮನಹಳ್ಳಿ.

ಹುಟ್ಟಿರು‌ ಹಾಸನ ಜಿಲ್ಲೆಯ ತಿಮ್ಮನಹಳ್ಳಿ ಗ್ರಾಮವಾದರೂ, ನೆಲೆಕಂಡುಕೊಂಡಿದ್ದು ಮಾತ್ರ ಶಿವಮೊಗ್ಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು‌ ಅಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಮುಗಿಸಿ ಅಂದಿನಿಂದ ಸಮಾಜದ ಅಸಹಾಯಕರಿಗೆ ತನ್ನ ಕೈಲಾಗುವ ಸಹಾಯವನ್ನು ಮಾಡಬೇಕು ಎಂದು ಮನಸ್ಸು ಮಿಡಿಯುವ ಸಮಯದಲ್ಲಿ ಜೊತೆ ಸೇರಿದ ಮೂವರು ಸ್ನೇಹಿತರುಗಳಾದ ನಾಗರಾಜ್ ಎಮ್, ದರ್ಶನ್ ಮತ್ತು ರೇಣುಕಾ ಕಹಾರ್ ರವರ ಜೊತೆಯಲ್ಲಿ ಚರ್ಚಿಸಿ ಮತ್ತು ಹ್ಯೂಮಾನಿಟಿ ಟ್ರಸ್ಟ್ ನ ಅರ್ಥಿಕ ನೆರವಿನಿಂದ ಮ್ಯಾನ್ ಕೈಂಡ್ ಟ್ರಸ್ಟ್ ನ್ನು‌ 2018 ರಲ್ಲಿ ಪ್ರಾರಂಭಿಸಿದರು.

ಹ್ಯೂಮಾನಿಟಿ ಟ್ರಸ್ಟ್ ನ ಸಂಸ್ಥಾಪಕರಾದ ರೋಶನ್ ಡಿ’ಸೋಜ ರವರು ಟ್ರಸ್ಟ್ ನ ಕಾರ್ಯವೈಖರಿಯನ್ನು ನೋಡಿ ಬೆನ್ನು‌ ತಟ್ಟೆ ಪೋತ್ಸಾಹ ನೀಡುವುದರ ಜೊತೆಯಲ್ಲಿ‌ ಅರ್ಥಿಕ ಸಹಕಾರವನ್ನು ನೀಡುತ್ತಾ ಬಂದರು, ಇಂದು‌ ಮ್ಯಾನ್ ಕೈಂಡ್ ಟ್ರಸ್ಟ್ ಇತರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಚಿಕ್ಕಮಗಳೂರು ಮ್ಯಾನ್ ಕೈಂಡ್ ಕ್ಲಬ್ ಹಾಗೂ ಹಾಸನದಲ್ಲಿ ಮ್ಯಾನ್ ಕೈಂಡ್ ಸೇವಾ ಸಂಸ್ಥೆ ಹೆಸರಿನೊಂದಿಗೆ ಸೇವೆ ಸಲ್ಲಿಸುತ್ತಿದೆ.

ಟ್ರಸ್ಟ್ ನಿಂದ ದಾನಿಗಳನ್ನು‌ ಗುರುತಿಸಿ‌ ಅವಶ್ಯಕತೆ ಇರುವಂತಹ ಸರ್ಕಾರಿ ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಹೆಚ್ಚುವರಿ ಶಿಕ್ಷಕರ ವೇತನ ಮತ್ತು ಸ್ಮಾರ್ಟ್ ಕ್ಲಾಸ್ ತರಗತಿಗಳಿಗೆ ಬೇಕಾಗುವ ಲ್ಯಾಪ್ ಟಾಪ್ , ಪ್ರೊಜಕ್ಟರ್ ಮತ್ತು ಯುಪಿಎಸ್ ನೀಡುವುದರ ಜೊತೆಯಲ್ಲಿ ಸಮಾಜದಲ್ಲಿರುವ ಬಡವರು, ಮಾನಸಿಕ ಅಸ್ವಸ್ಥರು, ರೋಗಿಗಳು, ಅನಾಥರು, ವಿಶೇಷ ವಿಕಲಚೇತನರಿಗೆ , ಊಟ, ವಸತಿ, ಬಟ್ಟೆ, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸಹಾಯ. ಕಂಪ್ಯೂಟರ್ಗಳ ವಿತರಣೆ, ಉದ್ಯೋಗ ಕೌಶಲ್ಯದ ತರಬೇತಿ, ವಿದ್ಯಾರ್ಥಿಗಳಿಗೆ ಪುಸ್ತಕಗಳ ವಿತರಣೆ ಇಂತಹ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ರಾಜು‌ ಅರ್ ತಿಮ್ಮನಹಳ್ಳಿ ಯವರ ಮಾದರಿ ಸೇವೆ ಇತರರಿಗೆ ಮಾದರಿಯಾದರೆ ನಮ್ಮ ಸಮಾಜ ಮತ್ತು ಪರಸರ ಸ್ವಸ್ಥವಾಗಲು ಹೆಚ್ಚು ಸಮಯ ಬೇಕಾಗದು….

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...