ಚಿಕ್ಕಬಳ್ಳಾಪುರ(ವಿಶ್ವಕನ್ನಡಿಗ ನ್ಯೂಸ್): ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಟೌನ್ ಹಾಲ್ ನಲ್ಲಿರುವ ನಂದಿನಿ ಪಾರ್ಲರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇಂದು ರಾತ್ರಿ 10.00 ಘಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ನಂದಿನಿ ಪಾರ್ಲರ್ ನ ಒಳಗಡೆ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.
ಟೌನ್ ಹಾಲ್ ಸರ್ಕಲ್ ನಲ್ಲಿ ಕರ್ತವ್ಯ ನಿರತದಲ್ಲಿದ್ದ ಪೋಲೀಸ್ ಅಧಿಕಾರಿಗಳು ದಟ್ಟವಾದ ಹೊಗೆ ಆವರಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಅಗ್ನಿಶಾಮಕದಳದವರಿಗೆ ವಿಷಯವನ್ನು ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ನಂತರ ಪಾರ್ಲರ್ ನ ಮಾಲೀಕರಿಗೆ ವಿಷಯವನ್ನು ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಮಾಲೀಕ ರಂಗಪ್ಪ ಹಾಗೂ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರು, ಸುಟ್ಟು ಕರಕಲಾಗಿದ್ದ ಎಲ್ಲಾ ವಸ್ತುಗಳನ್ನು ಪರೀಕ್ಷಿಸಿ, ಬೇರೆ ಜಾಗಕ್ಕೆ ಸ್ಥಳಾಂತರಿಸಿದರು.
ನಂದಿನಿ ಪಾರ್ಲರ್ ಒಳಗಡೆ ಇದ್ದ ಫ್ರಿಡ್ಜ್ ಮುಖಾಂತರವೇ ಶಾರ್ಟ್ ಸರ್ಕ್ಯೂಟ್ ಉಂಟಾಗಿರಬಹುದೆಂದು ಮಾಲೀಕರಾದ ರಂಗಪ್ಪ ರವರು ತಿಳಿಸಿದರು.
ರುಕ್ಮಿಣಿ ರವರ ಹೆಸರಿನಲ್ಲಿ ಈ ನಂದಿನಿ ಪಾರ್ಲರ್ ಇದ್ದು ಅವರ ಗಂಡ ರಂಗಪ್ಪ ನಡೆಸುತ್ತಿದ್ದರು. ಹಣ, ಸರಕುಗಳು ಎಲ್ಲಾ ಸೇರಿ ಸುಮಾರು 5ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ರಂಗಪ್ಪ ರವರು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.