ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ತಲೆಯಲ್ಲಿ ಗಂಟುಮೂಟೆ ಹೊತ್ತು ಕಾಲ್ನಡಿಗೆಯಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ರಸ್ತೆಯ ಬದಿಯಲ್ಲಿ “ಎಟಿಎಂ ಕೊಠಡಿಯೊಂದು”ಕಾಣಸಿಗುತ್ತದೆ.
ಎಟಿಎಂ ಕೊಠಡಿಯ ಒಳ ಹೋಗುವವರು ಹಿಂತಿರುಗಿ ಬರುವಾಗ ಗರಿಗರಿ ನೋಟುಗಳನ್ನು ಎಣುಸಿಕೊಂಡು ಬರುವುದನ್ನು ನೋಡಿದ ಆಕೆ ಕೂಡ ಎಟಿಎಂ ಕೊಠಡಿಯ ಬಾಗಿಲು ತೆರೆದು ಒಳ ಹೋಗಿ ಎಟಿಎಂ ಯಂತ್ರದ ಮೇಲೆ ಕೈಯಾಡಿಸುತ್ತಾಳೆ. ಎಟಿಎಂ ಅದೇಕೋ ಮೌನ ಪ್ರತಿಕ್ರಿಯೆ ನೀಡಿದಾಗ ಆಕೆ,ನಿರಾಸೆಯ ಕಣ್ಣುಗಳಿಂದ ಹಿಂತಿರುಗುತ್ತಾಳೆ. ದೂರದವರೆಗೆ ಎಟಿಎಂ ಕೊಠಡಿಯನ್ನು ನಿರುಕಿಸುತ್ತಾ ತನ್ನ ಪಯಣವನ್ನು ಮುಂದುವರಿಸುತ್ತಾಳೆ.
(ವೀಡಿಯೋ)
ಮೇಲ್ನೋಟಕ್ಕೆ ವಲಸೆ ಕಾರ್ಮಿಕಳಂತೆ ಕಾಣುವ ಈ ಅನಕ್ಷರಸ್ಥೆ ಮಹಿಳೆ, ಎಟಿಎಂನಲ್ಲಿ ಹಣ ಅಲ್ಲದಿದ್ದರೂ ತುಸು ಹೊತ್ತು ಹವಾನಿಯಂತ್ರಿತ ಕೊಠಡಿಯಿಂದ ಮೈ ಮೇಲೆ ಬಿದ್ದ ತಂಪು ಗಾಳಿಯಿಂದ ತೃಪ್ತಿಪಟ್ಟಿರಬಹುದು ಅಲ್ಲವೇ.?
ಬಹುಶಃ ಸಹ ಯಾತ್ರಿಕರು ಅಕೌಂಟಿಂಗ್ ಜಮೆ ಆಗುವ ಹದಿನೈದು ಲಕ್ಷದ ಬಗ್ಗೆ ಹೇಳಿರಬೇಕು.? ಅದಕ್ಕಾಗಿ ಈಕೆ ಆತುರಾತುರವಾಗಿ ಒಳ ನುಗ್ಗಿರಬೇಕು.? ಪಾಪ.!!
-ಇಸ್ಹಾಕ್ ಸಿ.ಐ.ಫಜೀರ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.