ನೋಯ್ಡಾ(ವಿಶ್ವಕನ್ನಡಿಗ ನ್ಯೂಸ್): ನೋಯ್ಡಾದ ಫಿಲ್ಮ್ ಸಿಟಿಯಲ್ಲಿರುವ ಝೀ ಮೀಡಿಯಾ ಸಂಸ್ಥೆಯ ಕಚೇರಿಯನ್ನೊಳಗೊಂಡ 5 ಮಹಡಿಯ ಕಟ್ಚಡವನ್ನು ಅಲ್ಲಿನ ಜಿಲ್ಲಾಡಳಿತ ಸೀಲ್ ಮಾಡಲಾಗಿದೆ. ಮೇ 24 ರಂದು 28 ಉದ್ಯೋಗಿಗಳಿಗೆ ಹಾಗೂ ನಿನ್ನೆ ಸೋಮವಾರ ಇನ್ನೂ ಹತ್ತು ಮಂದಿಯ ರಿಪೋರ್ಟ್ ಪೋಸಿಟಿವ್ ಆಗಿದೆ.
ಇಲ್ಲಿಯವರೆಗೆ ಝೀ ಮೀಡಿಯಾದ 49 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಮೇ.15 ರಂದು 51 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇವಗಳಲ್ಲಿ ಮೊದಲಿಗೆ 28 ಮಂದಿಯ ರಿಪೋರ್ಟ್ ಪೊಸಿಟಿವ್ ಬಂದಿತ್ತು. ಕೊರೋನ ವೈರಸ್ ನ್ನು ಎದುರಿಸಲು ಎಲ್ಲಾ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಸಂಪಾದಕ ಸುಧೀರ್ ಚೌದರಿ ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.