ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರಪತಿ ಭವನ, ಪ್ರಧಾನಮಂತ್ರಿಗಳ ಕಚೇರಿ, ಸುಪ್ರೀಂಕೋರ್ಟ್, ಗೃಹ ವ್ಯವಹಾರಗಳ ಸಚಿವಾಲಯ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಗಣ್ಯ ವ್ಯಕ್ತಿಗಳ ನಿವಾಸಗಳಲ್ಲಿ ಇದೀಗ ಡಿಆರ್ಡಿಓ ಮತ್ತು ರಿಯಾಟ್ ಲ್ಯಾಬ್ಸ್ ಸಂಯುಕ್ತವಾಗಿ ಅಭಿವೃದ್ಧಿಪಡಿಸಿದ ಓಕೆಮಿಸ್ಟ್ ಕಾಂಟ್ಯಾಕ್ಟ್ಲೆಸ್ ಓಕೆಮಿಸ್ಟ್ ಕಾಂಟ್ಯಾಕ್ಟ್ಲೆಸ್ ಸ್ಯಾನಿಟೈಸರ್ ಮಾರುಕಟ್ಚೆಗೆ ಸ್ಯಾನಿಟೈಸರ್ ವಿತರಣಾ ಘಟಕದೊಂದಿಗೆ ಸುಸಜ್ಜಿತವಾಗಿದೆ. ಇದು ಆಲ್ಕೋಹಾಲ್ ಆಧರಿತ ಕೈ ಉಜ್ಜುವ ಸ್ಯಾನಿಟೈಸರ್ ಸೊಲ್ಯೂಶನ್ ಅನ್ನು ಸಿಂಪಡಿಸುತ್ತದೆ. ಸಂಪರ್ಕ ರಹಿತ ಸ್ಯಾನಿಟೈಸೇಷನ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸಲಹೆಗೆ ಅನುಸಾರವಾಗಿದೆ. ಇಂದು ಸಮುದಾಯಕ್ಕೆ ಈ ಉತ್ಪನ್ನ ಲಭ್ಯವಾಗುವಂತೆ ಮಾಡಲಾಗಿದೆ.
ಇದು ಬುಕ್ಕಿಂಗ್ಪೂರ್ವ
Home
ನಲ್ಲಿ ಲಭ್ಯವಿದೆ.
ಓಕೆಮಿಸ್ಟ್ ಹೆಸರಿನ ಈ ಉತ್ಪನ್ನವು ನೀರು ಸಂರಕ್ಷಣೆಯ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ ನೀರಿನ ಹನಿಯನ್ನು ಸೃಷ್ಟಿಸುವ ತಂತ್ರಜ್ಞಾನವನ್ನು ಆಧರಿಸಿದೆ. ಯಾವುದೇ ಸಂಪರ್ಕವಿಲ್ಲದೇ ಇದು ಕಾರ್ಯನಿರ್ವಹಿಸುತ್ತದೆ ಹಾಗೂ ಅಲ್ಟ್ರಾಸಾನಿಕ್ ಸೆನ್ಸಾರ್ ಸಹಾಯದಿಂದ ಇದು ಚಾಲಿತವಾಗುತ್ತದೆ. ಏಕೈಕ ದ್ರವ ಸುರಿಯುವ ನಳಿಕೆಯ ಮೂಲಕ ಕಡಿಮೆ ಪ್ರಮಾಣದಲ್ಲಿ ಸ್ಯಾನಿಟೈಸರ್ ಹರಿಯುತ್ತದೆ ಹಾಗೂ ಕೈ ಉಜ್ಜುವ ಸ್ಯಾನಿಟೈಸರ್ ಪೂರೈಸಲು ವಾಯು ಆಧರಿತ ತುಂತುರು ಹನಿಗಳನ್ನು ಸೃಷ್ಟಿಸುತ್ತದೆ. ಇದು ಬಳಕೆಯ ವೇಳೆ ಸ್ಯಾನಿಟೈಸರ್ ಕನಿಷ್ಠ ಪ್ರಮಾಣದಲ್ಲಿ ವ್ಯರ್ಥವಾಗುವಂತೆ ಮಾಡುತ್ತದೆ. ಸ್ವಯಂಚಾಲಿತ ವ್ಯವಸ್ಥೆ (ಅಟೋಮೈಸರ್) ಬಳಸಿಕೊಂಡು ಒಂದು ಕಾರ್ಯಾಚರಣೆ ವೇಳೆ 5 ಸೆಕೆಂಡ್ಗಳ ಕಾಲ ಕೇವಲ 5-6 ಮಿಲಿಲೀಟರ್ ಸ್ಯಾನಿಟೈಸರ್ ಬಿಡುಗಡೆಯಾಗುತ್ತದೆ.
ಓಕೆಮಿಸ್ಟ್ ಎಲ್ಲ ಸಂಘ ಸಂಸ್ಥೆಗಳಿಗೆ, ವಾಣಿಜ್ಯ ಹಾಗೂ ವಾಣಿಜ್ಯೇತರ ಬಳಕೆಗಳಿಗೆ ಯೋಗ್ಯವಾಗಿದ್ದು, ಕೊರೋನಾ ವೈರಸ್ನಿಂದ ಗರಿಷ್ಠ ಸುರಕ್ಷತೆನ್ನು ಖಾತರಿಪಡಿಸುತ್ತದೆ.
ಭಾರತ ನೋವೆಲ್ ಕೊರೋನಾ ವೈರಸ್ ವಿರುದ್ಧ ಹೋರಾಡಲು ರಿಯೋಟ್ ಲ್ಯಾಬ್, ಈ ವಿನೂತನ ಅನುಶೋಧನೆಯನ್ನು ದೇಶದ ಉದ್ದಗಲಕ್ಕೂ ಒಯ್ಯಲಿದೆ ಎಂದು ರಿಯೋಟ್ ಲ್ಯಾಬ್ಸ್ , ಸಂಸ್ಥಾಪಕ ಮತ್ತು ಸಿಇಓ ಶಿಶಿರ್ ಗುಪ್ತಾ ಹೇಳಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.