ಪಾಟ್ನಾ(www.vknews.in): ಬಿಹಾರದ ಮುಝಾಪ್ಪರ್ ಪುರದ ರೈಲ್ವೇ ನಿಲ್ದಾಣದಲ್ಲಿ ಪುಟ್ಟ ಮಗುವೊಂದು ಸತ್ತು ಮಲಗಿದ ತನ್ನ ತಾಯಿಯನ್ನು ಎಬ್ಬಿಸಲು ಪ್ರೃತ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.
ಶನಿವಾರ ಗುಜರಾತಿನಿಂದ ತನ್ನ ಮಗುವಿನೊಂದಿಗೆ ರೈಲ್ವೆ ಹತ್ತಿದ್ದ ಕಾರ್ಮಿಕೆಯೊಬ್ಬಳು ಸೋಮವಾರದಂದು ಬಿಹಾರದ ಮುಝಪ್ಪರ್ ಪುರ ರೈಲ್ವೆ ಸ್ಟೇಷನ್ ತಲುಪುತ್ತಿದ್ದಂತೆ ಅತೀವ ಬಾಯಾರಿಕೆ ಹಾಗೂ ಹಸಿವಿನಿಂದಾಗಿ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ. ಆಕೆಯ ಮೃತದೇಹವನ್ನು ಮುಝಪ್ಪರ್ ರೈಲ್ವೆ ನಿಲ್ದಾಣದಲ್ಲಿ ಇರಿಸಲಾಗಿತ್ತು. ತನ್ನ ತಾಯಿ ಸತ್ತು ಮಲಗಿದ್ದಾಳೆಂಬ ಅರಿವಿಲ್ಲದ ಪುಟ್ಟ ಮಗು ಆಕೆಯನ್ನು ಎಬ್ಹಿಸಲು ಪ್ರಯತ್ನಿಸುತ್ಚಿರುವ ದೃಶ್ಯ ಮಾತ್ರ ಮನಕಲಕುವಂತಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.