ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೇಶಾದ್ಯಂತ ಜಾರಿ ಗೊಳಿಸಲಾಗಿರುವ ಲಾಕ್ಡೌನ್ ಪರಿಣಾಮದಿಂದಾಗಿ ರಾಜ್ಯದೆಲ್ಲೆಡೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ಅಗತ್ಯವುಳ್ಳವರ ಸಹಾಯಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ 29 ಏಪ್ರಿಲ್ ರವರೆಗೆ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್ಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆ ಯಲ್ಲಿ ತಿಳಿಸಿದೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಗೊಳಿಸಿರುವ ಜಮಾಅತೆ ಇಸ್ಲಾಮೀ ಹಿಂದ್ ಇದರ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್ ಅವರು, ಲಾಕ್ಡೌನ್ನಿಂದಾಗಿ ಮಧ್ಯಮ ಮತ್ತು ಬಡ ವರ್ಗದವರ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಹಸಿವು, ಪೌಷ್ಠಿಕ ಆಹಾರದ ಕೊರತೆ, ಉದ್ಯೋಗದ ನಷ್ಟ, ಅನಾರೋಗ್ಯದಿಂದ ನರಳುವಿಕೆಯಂತಹ ಸಮಸ್ಯೆಗಳು ಬಡವರನ್ನು ಮತ್ತಷ್ಟು ಸಾವಿನ ದವಡೆಗೆ ದೂಡುತ್ತಿದೆ. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದೇಶಾ ದ್ಯಂತ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದ ಮೂಲೆ ಮೂಲೆ ಯ ಲ್ಲಿಯೂ ಜಾತಿ ಮತ ಭೇದವಿಲ್ಲದೆ ತನ್ನ ಸಹಾಯ ಹಸ್ತವನ್ನು ಚಾಚಿದೆ ಎಂದು ಹೇಳಿದರು.
ಅದಲ್ಲದೇ ಸರಕಾರವು ಈ ವೇಳೆಯಲ್ಲಿ ಲಾಕ್ಡೌನಿಂದಾಗಿ ಯಾರೂ ಕೂಡಾ ಹಸಿವಿನಿಂದ ತೊಂದರೆಗೊಳ ಗಾಗದಂತೆ ನೋಡಿಕೊಳ್ಳಬೇಕು. ದಿನನಿತ್ಯ ದುಡಿದು ತಿನ್ನುವ ಬಡಕೂಲಿ ಕಾರ್ಮಿಕರು, ಸಣ್ಣಪುಟ್ಟ ಉದ್ಯಮವನ್ನು ನಡೆಸಿಕೊಂಡು ತಮ್ಮಕುಟುಂಬವನ್ನು ಸಾಕಿ ಸಲುಹುವವರ ಮೇಲೆ ಕರುಣೆ ತೋರಿ ಮತ್ತು ಕಾಳಜಿಯನ್ನು ವಹಿಸುತ್ತ ಅಂತಹವರನ್ನು ಗುರುತಿಸಿ ಶೀಘ್ರದಲ್ಲೇ ವಿಶೇಷ ಪ್ಯಾಕೆಜುಗಳನ್ನು ಘೋಷಿಸ ಬೇಕು ಎಂದು ಆಗ್ರಹಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿಕೆಯೊಂದನ್ನು ನೀಡಿ, ಈ ಸಂದರ್ಭದಲ್ಲಿ ನಮ್ಮ ಜಮಾಅತ್ ಕಾರ್ಯಕರ್ತರು ಇನ್ನೂ ಈ ಪರಿ ಹಾರದ ಕಾರ್ಯದಲ್ಲಿ ನಿರತರಾಗಿದ್ದಾರೆ, ಇದೇ ವೇಳೆ ನಮ್ಮನ್ನು ಆರ್ಥಿಕ, ನೈತಿಕ ಹಾಗೂ ಸಂಘಟನಾತ್ಮಕ ವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದರು.
ಎಚ್.ಆರ್.ಎಸ್. ಇದರ ರಾಜ್ಯ ನಿರ್ದೇಶಕರಾದ ಕೆ.ಎಂ. ಅಶ್ರಫ್ ಮಂಗಳೂರು ಅವರು ವಿವರಿಸಿದಂತಹ ಜಿ¯್ಲÁವಾರು ಪರಿಹಾರ ಕಿಟ್ಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ.
ಸ್ಥಳ ಮತ್ತು ಒಟ್ಟು ಪರಿಹಾರ ಕಿಟ್ಗಳ ಸಂಖ್ಯೆ ಬಾಗಲಕೋಟ 1207 ರಾಮನಗರ 137 ಬೆಂಗಳೂರು ನಗರ 5903 ಶಿವಮೊಗ್ಗ 2686 ಬೆಂಗಳೂರು ಗ್ರಾಮಾಂತರ 100 ತುಮಕೂರು 400 ಬೆಳಗಾವಿ 122 ಉಡುಪಿ 4242 ಬಳ್ಳಾರಿ 561 ಉತ್ತರಕನ್ನಡ 1100 ಬೀದರ್ 3000 ಯಾದಗೀರ 6200 ವಿಜಯಪೂರ 1000 ಕೊಪ್ಪಳ 1160 ಚಾಮರಾಜನಗರ 110 ಮಂಡ್ಯ 200 ಚಿಕ್ಕಮಗಳೂರು 2000 ಮೈಸೂರು 2075 ಚಿತ್ರದುರ್ಗ 251 ರಾಯಚೂರು 2000 ದಕ್ಷಿಣ ಕನ್ನಡ 2890 ಚಿಕ್ಕಬಳ್ಳಾಪುರ 100 ದಾವಣಗೆರೆ 641 ಧಾರವಾಡ 1000 ಗದಗ 160 ಕಲ್ಬುರ್ಗಿ 1000 ಹಾಸನ 1100 ಹಾವೇರಿ 250 ಕೊಡುಗು 2150 ಕೋಲಾರ 500
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.