(www.vknews.com) : ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದ ನಿವಾಸಿ ಪ್ರತಾಪ್ ತಮ್ಮ ಚಿಕ್ಕ ವಯಸ್ಸಿನಲ್ಲೇ ವಿಜ್ಞಾನಿಯಾದವರು. ಡ್ರೋನ್ ಪ್ರತಾಪ್ ಎಂದು ಪ್ರಖ್ಯಾತಿ ಹೊಂದಿರುವ ಅವರ ಜೀವನ ಚರಿತ್ರೆ ಕೇಳಿದರೆ ಪ್ರತಿಯೊಬ್ಬರೂ ಭಾವುಕರಾಗುತ್ತೇವೆ ಎಲ್ಲಾ ಅವರು ಜೀವನದಲ್ಲಿ ಬಡತನದ ಸಮಸ್ಯೆಗಳ ನಡುವೆ ಬೆಳದು ಬಂದು ಜೀವನದಲ್ಲೇ ಸಾಧನೆ ಮಾಡಿರುವ ಅವರ ಮಾತುಗಳಲ್ಲಿ ವಿಡಿಯೋದಲ್ಲಿ ವಿವರಿಸಿದ್ದಾರೆ.
ಡ್ರೋನ್ ಕ್ಯಾಮರಾ ಕಂಡು ಹಿಡಿದ ನಮ್ಮ ಕರ್ನಾಟಕದ ಮಂಡ್ಯದ ಯುವ ವಿಜ್ಞಾನಿ ಪ್ರತಾಪ್. international Robotics Exhibition ಜಪಾನ್ ನಲ್ಲಿ ನಡೆದ ಪ್ರದರ್ಶನದಲ್ಲಿ ಭಾರತಕ್ಕೆ ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ತಂದ ಭಾರತದ ಹೆಮ್ಮೆಯ ಪುತ್ರ ಡ್ರೋನ್ ಪ್ರತಾಪ್,
ಪ್ರತಾಪ್ ಒಬ್ಬ ಬಡ ಕುಟುಂಬದಲ್ಲಿ ಜನಿಸಿದ ಯುವ ವಿಜ್ಞಾನಿ ತಂದೆ ತಾಯಿ ಬಡ ರೈತರಾಗಿರುತ್ತಾರೆ , ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಪ್ರತಾಪ್ , ಅನೇಕ ಹೇಳು ಬೇಳುಗಳ ಸಮಸ್ಯೆಗಳ ನಡುವೆ ಇಂದು ಭಾರತದ ಯುವ ವಿಜ್ಞಾನಿಯಾಗಿದ್ದಾರೆ.
ಒಂದು ದಿನ ಜಪಾನ್ನಲ್ಲಿ ನಡೆಯುವ ವಿಶ್ವ ಯುವ ವಿಜ್ಞಾನಿಗಳ ಸ್ಪರ್ಧೆ ಮಾಹಿತಿ ತಿಳಿದ ತಾನು ಸ್ಪರ್ಧಿಸಬೇಕೆಂದು ಒಂದು ವೀಡಿಯೋ ಅಬ್ಸ್ಟ್ರಾಕ್ಟ್ ಪ್ರೋಡ್ಯೂಸ್ ವಿಡಿಯೋ ಮಾಡಿ ಕಳಿಸಿರುತ್ತಾರೆ, ಅದನ್ನು ನೋಡಿ ವಿಶ್ವ ಯುವ ವಿಜ್ಞಾನಿಗಳ ಸ್ಪರ್ಧೆಗೆ ಜಪಾನ್ ಸೆಲೆಕ್ಟ್ ಮಾಡುತ್ತೆ ಆದ್ರೆ ಜಪಾನ್ ಗೆ ಹೋಗಲು ಪ್ಲೇಟ್ ಗೆ ಹಣ ಇರುವುದಿಲ್ಲ , ಎಲ್ಲಿಯೂ ಸಾಧಕನಿಗೆ ಹಣ ಹೊಂದಿಕೆಯಾಗುವುದಿಲ್ಲ. ಕೊನೆಗೆ ಈ ಬಗ್ಗೆ ಹೋಗಿ ಅವರ ತಾಯಿಯ ಬಳಿ ಕೇಳಿದಾಗ ಅವರು ಹಿಂದೆ ಮುಂದೆ ಯೋಚನೆ ಮಾಡದೇ ತನ್ನ ಕತ್ತಿನಲ್ಲಿ ಧರಿಸಿದ್ದ ಚಿನ್ನದ ತಾಳಿ ಸರವನ್ನೇ ತೆಗೆದುಕೊಟ್ಟು ಜಪಾನ್ ಹೋಗಲು ಅನುವು ಮಾಡಿಕೊಟ್ಟರು.
ತಾಯಿಯ ತಾಳಿ ಅಡವಿಟ್ಟು ಜಪಾನಿನಲ್ಲಿ ಚಿನ್ನದ ಪದಕ ಗೆದ್ದ ಜಗಮೆಚ್ಚಿದ ಯುವ ವಿಜ್ಞಾನಿಯಾದವರು ಡ್ರೋನ್ ಪ್ರತಾಪ್ ..
ವಿಡಿಯೋ ವೀಕ್ಷಿಸಿ…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.