(www.vknews.com) : ನನ್ನ ಹುಟ್ಟೂರು ಕಾಶಿಪಟ್ಣದ ನಮ್ಮ ಮನೆಯ ಸಮೀಪ ಚಾಲಕ ವೃತ್ತಿ ಮಾಡಿ ತನ್ನ ಬಡ ಕುಟುಂಬಕ್ಕೆ ಆಸರೆಯಾಗಿ ಜೀವನ ಮಾಡುತ್ತಿದ್ದ ಹನೀಫ್ ಎಂಬ ಯುವಕ ಈಗ ರೋಗಪೀಡಿತನಾಗಿ ಹಾಸಿಗೆ ಹಿಡಿದು ಮಲಗಿದ ದೃಶ್ಯ ಎಂತಹ ಕಲ್ಲುಮನಸ್ಸನ್ನೂ ಕರಗಿಸುವಂತಿತ್ತು. ನರಕ್ಕೆ ಸಂಭಂದಿಸಿದ ಕಾಯಿಲೆಯಿಂದ ತನ್ನ ಅಂಗಾಂಗಗಳ ಹಾಗೂ ಶರೀರದ ಶಕ್ತಿಯನ್ನು ಕಳೆದು ಸಂಪೂರ್ಣವಾಗಿ ನಿಶ್ಯಕ್ತಿ ಹೊಂದಿರುವ ಹನೀಫ್ ಕಾಶಿಪಟ್ಣ ರಿಗೆ ಹೆಸರು ಹೇಳಲು ಇಚ್ಛಿಸದ ನಮ್ಮ ಸಂಬಂಧಿಕರೊಬ್ಬರು ನೀಡಿದ ಒಂದು ಮೊತ್ತವನ್ನು ನೀಡಲು ಹೋಗಿದಾಗ ಕಂಡು ಬಹಳ ಬೇಸರವಾಯ್ತು. ಬಹಳ ಲವಲವಿಕೆಯಿಂದ ದುಡಿದು ತನ್ನ ಕುಟುಂಬವನ್ನು ಸಾಕುತ್ತಿದ್ದ ಹನೀಫರು ಈಗ ಸಹೃದಯರಿಂದ ಎಲ್ಲಾ ರೀತಿಯ ಸಹಾಯವನ್ನು ಬಯಸುತ್ತಿದ್ದು ಸಹಾಯಕ್ಕೆ ಸಂಪೂರ್ಣ ಅರ್ಹರೂ ಆಗಿರುತ್ತಾರೆ.
ಸಹಾಯ ಮಾಡಬಯಸುವವರು ಅವರ ಕೆಳಗಿನ ನಂಬರ್ ಗೆ ಸಂಪರ್ಕಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.
ಎರಡನೇಯ ದ್ದು ಮೂಡುಬಿದಿರೆ ಸಮೀಪದ ಕೋಟೆ ಬಾಗಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅತ್ಯಂತ ಕಡು ಬಡತನದಲ್ಲಿ ಹುಟ್ಟಿದ ಸುಮಾರು ಹತ್ತು ವರ್ಷ ವಯಸ್ಸಿನ ಹೆಣ್ಣು ಮಗುವಿನ ದೃಶ್ಯ ಕೂಡಾ ಬಹಳ ಮನನೋಯಿಸುವ ರೀತಿಯಲ್ಲಾಗಿತ್ತು.
ಮೂರು ತಿಂಗಳ ಮಗುವಾಗಿದ್ದಾಗ ಪ್ರಾರಂಭವಾದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು ಈ ಕುಟುಂಬ ಕೂಡಾ ಎಲ್ಲಾ ರೀತಿಯ ಸಹಾಯವನ್ನು ಬಯಸುತ್ತಿದ್ದು ಸಹಾಯಕ್ಕೆ ಅರ್ಹವಾದ ಕುಟುಂಬವೂ ಆಗಿರುತ್ತದೆ.
ಸಹಾಯ ಮಾಡಬಯಸುವವರು ಅವರ ನಂಬರಿಗೆ ಸಂಪರ್ಕಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.ಅಲ್ಲಾಹು ತೌಫೀಖ್ ನೀಡಲಿ.ಆಮೀನ್
ಅಕೌಂಟ್ ನಂಬರ್
IFSC Code: CORP0000231 A/C No: 520101039301271 Phone No: 9663124121 Address: Mohammed Haneef Kashipatna Raziya Manzil Darkas Mane Kashipatna Village
IFSC Code: SYNB0000128 A/C No: 01282200213064 Phone: 9632561624 Address: Noorunnisa W/O Shekh Abdussamad D.No: 7/218A Shekh Manzil Neare Darga Kotebagil Haneef Compound Moodabidri
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.