ಮುಂಬಯಿ (ವಿಶ್ವ ಕನ್ನಡಿಗ ನ್ಯೂಸ್) ; ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ – ರೈಟ್ಸ್ ಎಂಟೈಟಲ್ಮೆಂಟ್ನ (RIL – RE) ಡಿ-ಮಟೀರಿಯಲೈಸ್ಡ್ ಟ್ರೇಡಿಂಗ್ನಲ್ಲಿ ಶುಕ್ರವಾರ ದಿನದಂತ್ಯದ ವಹಿವಾಟು 223 ರೂ.ಗಳಲ್ಲಿ ನಡೆದಿದ್ದು, ಶೇರು ವಿನಿಮಯ ಕೇಂದ್ರ ದತ್ತಾಂಶದ ಪ್ರಕಾರ ಇದು ಮೊದಲ ವಹಿವಾಟಿನ ಹೋಲಿಕೆಯಲ್ಲಿ 41%ನಷ್ಟು ಹೆಚ್ಚಾಗಿದೆ.
ಮೇ 20ರಂದು RIL-REಗಳ ಮೊದಲ ವಹಿವಾಟು 158 ರೂ.ಗಳಲ್ಲಿ ನಡೆದಿತ್ತು.
ಕೇವಲ ಏಳು ವಹಿವಾಟು ಅವಧಿಗಳಲ್ಲಿ, RIL-REಗಳು ಹೂಡಿಕೆದಾರರಿಗೆ ಹೆಚ್ಚಿನ ಮೌಲ್ಯವನ್ನು ಸೃಷ್ಟಿಸಿವೆ. ಶುಕ್ರವಾರದ ಮುಕ್ತಾಯದ ಬೆಲೆಯಲ್ಲಿ, ಆರ್ಐಎಲ್ ಷೇರುದಾರರು ಆರ್ಇಗಳಿಂದಾಗಿ ಒಟ್ಟಾರೆ ಸುಮಾರು 9,425 ಕೋಟಿ ರೂ.ಗಳಿಂದ ಶ್ರೀಮಂತರಾಗಿದ್ದಾರೆ.
RIL-REಗಳು ಏಳು ವಹಿವಾಟು ಅವಧಿಗಳ ಪೈಕಿ ಪ್ರತಿಯೊಂದರಲ್ಲೂ ತಮ್ಮ ಆಂತರಿಕ ಮೌಲ್ಯದ ಹೋಲಿಕೆಯಲ್ಲಿ ಹೆಚ್ಚಿನ ಬೆಲೆಯನ್ನು ಗಳಿಸಿವೆ.
ಶುಕ್ರವಾರದ ಮುಕ್ತಾಯದ ವೇಳೆಗೆ, ಎನ್ಎಸ್ಇಯಲ್ಲಿ 4.8 ಲಕ್ಷ ಆರ್ಇಗಳಿಗಾಗಿ ಖರೀದಿ ಆದೇಶಗಳು ಬಾಕಿ ಉಳಿದಿದ್ದು, ಇದು ಬಾಕಿ ಉಳಿದಿರುವ 2.4 ಲಕ್ಷ ಮಾರಾಟದ ಆದೇಶಗಳಿಗಿಂತ ಎರಡು ಪಟ್ಟು ಹೆಚ್ಚಿನದಾಗಿದೆ.
ಏಳು ವಹಿವಾಟು ಅವಧಿಗಳಲ್ಲಿ 11.4 ಕೋಟಿ ಆರ್ಇಗಳು (ಒಟ್ಟು ಆರ್ಇಗಳಲ್ಲಿ ಶೇ. 27ರಷ್ಟು) ಕೈ ಬದಲಿಸಿದ್ದು, ಇದರ ಒಟ್ಟು ಮೌಲ್ಯ ಸುಮಾರು 300 ಮಿಲಿಯನ್ ಯುಎಸ್ ಡಾಲರ್ ಅಥವಾ 2,243 ಕೋಟಿ ರೂ.ಗಳಾಗಿದೆ.
ಇದೇ ಮೊದಲ ಬಾರಿಗೆ ಮಾಡಲಾದ ಆರ್ಇಗಳ ಆನ್ಲೈನ್ ಲಿಸ್ಟಿಂಗ್ನಿಂದಾಗಿ ಹೂಡಿಕೆದಾರರಿಗೆ ತಮ್ಮ ರೈಟ್ ಎಂಟೈಟಲ್ಮೆಂಟ್ಗಳ ಮೌಲ್ಯವನ್ನು ಪಾರದರ್ಶಕವಾಗಿ ಕಂಡುಕೊಳ್ಳುವ ಅವಕಾಶ ದೊರಕಿತು. ಇದು RIL-REಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಅನುಕೂಲಕರ ಮಾರ್ಗವನ್ನೂ ಒದಗಿಸಿತು.
ಆರ್ಇಗಳ ವಾಲ್ಯೂಮ್-ವೈಟೆಡ್ ಸರಾಸರಿ ಬೆಲೆ (ವಿಡಬ್ಲ್ಯುಎಪಿ) ಗುರುವಾರದಿಂದ ಸ್ವಲ್ಪ ಕಡಿಮೆಯಾಗಿ ಶುಕ್ರವಾರ 218.40 ರೂ.ಗಳಿಗೆ ತಲುಪಿದ್ದು, 38 ಲಕ್ಷ ಆರ್ಇಗಳು ಕೈ ಬದಲಿಸಿವೆ. ಆರ್ಇಗಳು ದಿನದಲ್ಲಿ ತಮ್ಮ ಆಂತರಿಕ ಮೌಲ್ಯಕ್ಕಿಂತ ಸರಾಸರಿ 7.9 ರೂ. ಹೆಚ್ಚು ಬೆಲೆಗೆ ವಹಿವಾಟು ನಡೆಸಿದವು. ಶುಕ್ರವಾರ ಆರ್ಐಎಲ್ ವಿಡಬ್ಲ್ಯುಎಪಿ 1,467.5 ರೂ.ಗಳ ಪರಿಗಣನೆಯಲ್ಲಿ, ಆರ್ಇಗಳ ಆಂತರಿಕ ಮೌಲ್ಯ 210.5 ರೂ.ಗಳಷ್ಟಿತ್ತು.
ಮೇ 20ರಂದು ರೈಟ್ಸ್ ಇಶ್ಯೂವಿನ ಆರಂಭದ ಜೊತೆಯಲ್ಲೇ RIL-RE ಟ್ರೇಡಿಂಗ್ ಕೂಡ ಪ್ರಾರಂಭವಾಗಿತ್ತು. ಎನ್ಎಸ್ಇ/ಬಿಎಸ್ಇಗಳಲ್ಲಿ ರೈಟ್ಸ್ ಎಂಟೈಟಲ್ಮೆಂಟ್ ಅನ್ನು ಕೊಳ್ಳಲು ಅಥವಾ ಮಾರಲು ಶುಕ್ರವಾರ ಕೊನೆಯ ದಿನವಾಗಿತ್ತು.
ಪ್ರತಿ ಆರ್ಇ, 2020ರ ಜೂನ್ 3ರ ಮುನ್ನ 314.25 ರೂ.ಗಳನ್ನು ಪಾವತಿಸುವ ಮೂಲಕ ಒಂದು ಆರ್ಐಎಲ್ ಭಾಗಶಃ-ಪಾವತಿಸಿದ ಶೇರನ್ನು ಪಡೆಯುವ ಅವಕಾಶವನ್ನು ತನ್ನ ಮಾಲೀಕರಿಗೆ ನೀಡುತ್ತದೆ.
ಆಯಿಲ್-ಟು-ಟೆಲಿಕಾಂ ದೈತ್ಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ನ 53,125 ಕೋಟಿ ರೂ. ಮೌಲ್ಯದ ಬೃಹತ್ ರೈಟ್ಸ್ ಇಶ್ಯೂವನ್ನು ಶೇರುದಾರರಿಂದ ಚಂದಾದಾರಿಕೆಗಾಗಿ ಕಳೆದ ವಾರ ತೆರೆಯಲಾಗಿತ್ತು. ಅರ್ಹ ಶೇರುದಾರರು ರೈಟ್ಸ್ ಎಂಟೈಟಲ್ಮೆಂಟ್ಗಳನ್ನು ಡಿಮ್ಯಾಟ್ನಲ್ಲಿ ಪಡೆದ ಮೊದಲ ಇಶ್ಯೂ ಇದಾಗಿದ್ದು, ಶೇರು ವಿನಿಮಯ ಕೇಂದ್ರಗಳಲ್ಲಿ ಅವುಗಳ ವ್ಯವಹಾರವನ್ನು ನಡೆಸಬಹುದಾಗಿದೆ.
ರೈಟ್ಸ್ ಇಶ್ಯೂವಿನ ಅಂಗವಾಗಿ, ಪ್ರತಿ 15 ಶೇರುಗಳಿಗೆ ಒಂದರಂತೆ, ತಲಾ 1,257 ರೂ.ಗಳಂತೆ ಒಂದು ಶೇರನ್ನು ಸಂಸ್ಥೆಯು ನೀಡಲಿದೆ.
ಮುಕ್ತವಾಗಿ ವ್ಯಾಪಾರ ಮಾಡಲಾಗುವಂತೆ ರೈಟ್ಸ್ ಎಂಟೈಟಲ್ಮೆಂಟ್ಗಳನ್ನು ಅರ್ಹ ಶೇರುದಾರರ ಡಿಮ್ಯಾಟ್ ಖಾತೆಗಳಿಗೆ ಜಮಾ ಮಾಡಲಾಗುವ ಮೊದಲ ಇಶ್ಯೂ ಇದಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.